ದೇಶದಲ್ಲಿ ಬಿತ್ತನೆ ಬೀಜಗಳ ಸಂರಕ್ಷಣೆ ಆಗಬೇಕಿದೆ: ಮಂಡ್ಯದಲ್ಲಿ ಮಹಿಳೆಯರ ಆಗ್ರಹ

ಮಂಡ್ಯ, ಡಿಸೆಂಬರ್‌, 10: ದೇಶದಲ್ಲಿ ಬಿತ್ತನೆ ಬೀಜದ ಸಂರಕ್ಷಣೆ ಆಗಬೇಕಿದೆ. ಬೀಜ ಸಂಸ್ಕೃತಿಯನ್ನು ಬೆಳೆಸದಿದ್ದರೆ ರೈತ ಬಹುರಾಷ್ಟ್ರೀಯ ಕಂಪನಿಗಳತ್ತ ಕೈಚಾಚುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮಾನಾಪುರ ಮಂಡ್ಯದಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅಖಿಲ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾಡಳಿತ, ಜಾನಪದ ಜನ್ನೆಯರು ಟ್ರಸ್ಟ್ ವತಿಯಿಂದ ನಗರದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಮಹಿಳಾ ಜಾನಪದ ಗೋಷ್ಠಿ ನಡೆಯಿತು. ಈ ವೇಳೆ ಜನಪದ ಬದುಕಿನಲ್ಲಿ ಮಹಿಳೆ ಪೂರಕವೋ, ಪೋಷಕವೋ, ಪ್ರತ್ಯೇಕವೋ ವಿಚಾರ ಮಂಡಿಸಿ ಮಾತನಾಡಿದರು.
ದೇಶದಲ್ಲಿ ಬೀಜ ಕ್ರಾಂತಿ ಆಗದಿದ್ದರೆ ನೈಸರ್ಗಿಕ ಕೃಷಿ ಹಾಳಾಗುವ ಸಾಧ್ಯತೆಗಳಿವೆ. ಬೀಜ ಸಂರಕ್ಷಕಿಯರನ್ನು ಪತ್ತೆಮಾಡಿ ಅವರು ಕಾಪಾಡಿಕೊಂಡು ಬಂದಿರುವ ಬೀಜಗಳನ್ನು ಸಂರಕ್ಷಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದರು.

ಕೃಷಿಯಲ್ಲಿ ಪ್ರಧಾನಪಾತ್ರ ವಹಿಸುವ ಮಹಿಳೆ ನೈಸರ್ಗಿಕ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಳು. ಅದರೊಂದಿಗೆ ಬೀಜವನ್ನು ಹಿಂದಿನಿಂದಲೂ ಕಾಪಾಡಿಕೊಂಡು ಬಂದಿದ್ದಳು. ತನ್ನ ಕುಟುಂಬಕ್ಕೆ ಆಗುವಷ್ಟು ಇಟ್ಟುಕೊಂಡು ಇತರರಿಗೂ ಹಂಚುತ್ತಿದ್ದಳು. ಕೊಡು-ಕೊಳ್ಳುವ ಪದ್ಧತಿ ಜನಪದದಲ್ಲಿತ್ತು. ಇವೆಲ್ಲವೂ ಜೀವನಾನುಭವವನ್ನು ಕಲಿಸುತ್ತದೆ ಎಂದು ಹೇಳಿದರು. ಜನಪದವನ್ನು ಕಟ್ಟಿರುವ ಮಹಿಳೆ ಪ್ರತ್ಯೇಕವೂ ಅಲ್ಲ, ಆಕೆ ಪೂರಕ ಮತ್ತು ಪೋಷಕವಾಗಿದ್ದಾಳೆ. ಪುರುಷರು ಬಿಟ್ಟು ಹೋದ ಮನೆಯ ಜವಾಬ್ದಾರಿ, ಆರ್ಥಿಕ ಸ್ಥಿತಿ ಗತಿಗಳನ್ನು ಬಹಳ ಚೆನ್ನಾಗಿ ನಿರ್ವಹಿಸುವಂತಹ ಚಾಕಚಕ್ಯತೆಯನ್ನು ಜನಪದ ಮಹಿಳೆಯರು ಬೆಳೆಸಿಕೊಂಡಿದ್ದರು ಎಂದು ಉದಾಹರಣೆ ಸಹಿತ ವಿವರಿಸಿದರು.

ದ್ರಾವಿಡ ಭಾಷೆಯ ಜಾನಪದದ ವಿವರ

ದ್ರಾವಿಡ ಭಾಷೆಯ ಜಾನಪದದ ವಿವರ

ದ್ರಾವಿಡ ಭಾಷೆಯಲ್ಲಿ ಜಾನಪದ ಕುರಿತು ಡಾ. ರಜಿಯಾ ಬೇಗಂ ಮಾತನಾಡಿ, ಕರ್ನಾಟಕದಲ್ಲಿ ಮಾತ್ರ ಮಹಿಳೆಯರ ವಿಚಾರದಲ್ಲಿ ಹೆಚ್ಚು ಕೆಲಸಗಳಾಗಿವೆ. ಅದರೆ ಜನಪದದಲ್ಲಿ ಹೆಣ್ಣು ಪ್ರತಿರೋಧವನ್ನು ಒಡ್ಡಿದ್ದರೂ, ಅದನ್ನು ದಾಖಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆರೆಗೆ ಹಾರ ಎಂಬ ಕಥನದಲ್ಲಿ ಹಾರವಾಗುವ ಮಹಿಳೆ ತನ್ನ ಕುಟುಂಬದವರು, ಸ್ನೇಹಿತರೊಡನೆ ಕಷ್ಟಗಳನ್ನು ಹಂಚಿಕೊಳ್ಳುತ್ತಾಳೆ. ಆದರೆ ಎಲ್ಲರೂ ಸಹ ಕುಟುಂಬ ಹೇಳುವಂತೆ ಕೇಳಬೇಕೆಂಬುದನ್ನೇ ಸೂಚಿಸುತ್ತಾರೇಯೋ ಹೊರತು ಆಕೆಯ ಮನಸ್ಥಿತಿ, ಬದುಕುವ ಹಕ್ಕನ್ನು ತಿಳಿಸಲಿಲ್ಲ. ಇಂತಹ ಪ್ರತಿರೋಧದ ನಡುವೆಯೂ ಪುರುಷ ಪ್ರಧಾನ ಸಮಾಜವೇ ಮೆರೆಯಿತು. ಜೊತೆಗೆ ಸ್ವಾರ್ಥವನ್ನು ದೂರ ಮಾಡಿ, ಕುಟುಂಬದ ಉಳಿವು ಮತ್ತು ಸಮಾಜದ ಉನ್ನತಿಗೆ ಬದುಕನ್ನು ಮೀಸಲಿಟ್ಟಿದ್ದಳು ಎಂದು ವಿವರಿಸಿದರು.

ಜಾನಪದ ಅಧ್ಯಯನ ವಿಭಿನ್ನವಾಗಿದೆ

ಜಾನಪದ ಅಧ್ಯಯನ ವಿಭಿನ್ನವಾಗಿದೆ

ಪ್ರಾಧ್ಯಾಪಕಿ ಡಾ. ಎಂ. ಕೆಂಪಮ್ಮ ಮಾತನಾಡಿ, ಭಾಷೆಯಲ್ಲಿ ಜನಪದ ಸಾಹಿತ್ಯ ಇದೆ. ಆದರೆ ಮಹಿಳೆ ಅಭಿವ್ಯಕ್ತಪಡಿಸಬೇಕಾದದ್ದನ್ನು ಸ್ಪಷ್ಟವಾಗಿ ಜನಪದಲ್ಲಿ ವ್ಯಕ್ತಪಡಿಸಲಾಗಲಿಲ್ಲ. ಜನಪದ ಅಧ್ಯಯನ ವಿಭಿನ್ನ ನೆಲೆಯಲ್ಲಿ ನಡೆಯುತ್ತಿದೆ. ಆಧುನೀಕತೆಯ ಸ್ತ್ರೀ ಸಾಹಿತ್ಯದಲ್ಲಿ ಕೊಂಚ ಮಟ್ಟಿಗೆ ಮಹಿಳೆಗೆ ಗೌರವ ನೀಡಲಾಗಿದ್ದರೂ, ಜನಪದದಲ್ಲಿ ಅದು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಜಾನಪದದಲ್ಲಿ ಹೆಣ್ಣಿನ ಚಿತ್ರಣ ಹೆಚ್ಚಿಲ್ಲ

ಜಾನಪದದಲ್ಲಿ ಹೆಣ್ಣಿನ ಚಿತ್ರಣ ಹೆಚ್ಚಿಲ್ಲ

ಜನಪದ ಹೆಣ್ಣಿನ ಸೃಜನಶೀಲತೆಯನ್ನು ಗುರುತಿಸಬೇಕು. ಜನಪದದಲ್ಲಿ ಹೆಣ್ಣಿನ ಚಿತ್ರಣ ಹೆಚ್ಚಿಲ್ಲದಿದ್ದರೂ ಸ್ವಾತಂತ್ರ್ಯ, ಪ್ರತಿರೋಧವನ್ನು ದಾಖಲಿಸಿಲ್ಲ. ಹಲವು ದೃಷ್ಠಿಕೋನಗಳಲ್ಲಿ ಮಹಿಳಾ ಜಾನಪದವನ್ನು ನೋಡಬಹುದು. ಜಾನಪದ ಪ್ರಕಾರಗಳಲ್ಲೂ ಇವು ಕಂಡುಬರುತ್ತವೆ. ಆದರೂ, ಸ್ತ್ರೀ ಸ್ಥಾನಮಾನಗಳು ಕಡಿಮೆಯಾಯಿತ್ತೇನೋ ಎಂಬುದು ಹಲವು ಮಹಿಳಾ ವಿದ್ವಾಂಸರ ಅಭಿಪ್ರಾಯವೂ ಆಗಿದೆ ಎಂದರು.

ಹಲವು ಕಷ್ಟಗಳನ್ನು ಮೆಟ್ಟಿ ನಿಲ್ಲುವ ಹೆಣ್ಣು

ಹಲವು ಕಷ್ಟಗಳನ್ನು ಮೆಟ್ಟಿ ನಿಲ್ಲುವ ಹೆಣ್ಣು

ಸಾಮಾಜಿಕ ಸಂಪ್ರದಾಯ, ಶೋಷಿತ ನೆಲೆ, ಧಮನಿತರನ್ನು ನೋಡುವ, ಹೆಣ್ಣಿನ ಸ್ಥಾನಮಾನವನ್ನು ಜನಪದರು ಹೇಗೆಲ್ಲಾ ಚಿತ್ರಿಸಿದ್ದಾರೆ ಎಂಬುದನ್ನೂ ನೋಡಬೇಕಿದೆ. ಕಲೆಗಳಲ್ಲಿ ಸ್ತ್ರೀ ಪಾಲ್ಗೊಳ್ಳುವಿಕೆ, ಅಸ್ಪೃಶ್ಯತೆ, ಧಮನಿತೆ, ಶೋಷಣೆಯ ಮುಖ, ಸೃಜನಶೀಲತೆಯ ಶಕ್ತಿಯಾಗಿ, ನೋವು-ನಲಿವುಗಳನ್ನು ಹೇಗೆ ಸೃಷ್ಠಿಸಿಕೊಳ್ಳುತ್ತಾಳೆ ಎಂಬುದನ್ನೂ ಸಹ ನೋಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಯತ್ರಿ ಕೆ.ಎಂ. ವಸುಂಧರ ಕದಲೂರು, ಡಾ. ಎಸ್.ಸಿ. ಮಂಗಳ, ಡಾ. ರಮ್ಯ, ಡಾ.ಅನಸೂಯ, ಡಾ. ಎಸ್.ಬಿ.ಜ್ಯೋತಿ, ಡಾ. ತೇಜಸ್ವಿನಿ, ಡಾ.ಅನಿತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+