ಚಿಪ್ಸ್, ಚಾಕೊಲೇಟ್ ಎತ್ತಿಹಾಕಿಕೊಂಡ ಮಹಿಳಾ ಪ್ರತಿಭಟನಾನಿರತರು

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 2: ಭಾರತ್ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು, ಬಂದ್ ಮಾಡದ ಕಾಂಡಿಮೆಂಟ್ಸ್ ಗೆ ನುಗ್ಗಿ ಆಹಾರ- ತಿನಿಸುಗಳನ್ನು ತಿಂದು ದಾಂದಲೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಕನಿಷ್ಠ ಕೂಲಿ, ಬೆಲೆ ಏರಿಕೆ, ನಿರುದ್ಯೋಗ ಪರಿಸ್ಥಿತಿ, ಕಾರ್ಪೋರೇಟ್ ಕಂಪೆನಿಗಳ ಪರವಾಗಿ ತಿದ್ದುಪಡಿ ಮಾಡುವುದನ್ನು ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯುತ್ತಿತ್ತು. ನಗರದ ಆರ್.ಪಿ. ರಸ್ತೆಯಲ್ಲಿ ಸಿಐಟಿಯುನ ಸಿ.ಕುಮಾರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ತೆರಳುತ್ತಿದ್ದ ಸಂದರ್ಭ ವಿನಾಯಕ ಕಾಂಡಿಮೆಂಟ್ಸ್ ತೆರೆದಿತ್ತು.[ಶ್ರೀರಂಗಪಟ್ಟಣ ಸಿಡಿಎಸ್ ನಾಲಾ ಏರಿ ಕಳಪೆ ಸಾಬೀತು!]

Mandya shop

ಅದನ್ನು ಕಂಡ ಕಾರ್ಯಕರ್ತೆಯರು, ಚಾಕೋಲೇಟ್, ಬಿಸ್ಕೆಟ್, ಲೇಸ್ ಪ್ಯಾಕೆಟ್, ಚಿಪ್ಸ್ ಸೇರಿದಂತೆ ಇತರೆ ವಸ್ತುಗಳನ್ನು ಎತ್ತಿಹಾಕಿಕೊಂಡಿದ್ದಾರೆ. ಕೆಲ ಅಂಗನವಾಡಿ ಕಾರ್ಯಕರ್ತೆಯರು ಲೇಸ್ ಹಾಗೂ ಚಿಪ್ಸ್ ಪ್ಯಾಕೆಟ್ ಗಳನ್ನು ಕಿತ್ತು ತಮ್ಮ ವ್ಯಾನಿಟಿ ಬ್ಯಾಗ ನಲ್ಲಿ ಹಾಕಿಕೊಂಡು ಹೊರಟು ಹೋಗಿದ್ದಾರೆ. ಇದರಿಂದ ಅಂಗಡಿ ಮಾಲೀಕರಿಗೆ ಸಾವಿರಾರು ರುಪಾಯಿ ನಷ್ಟವಾಗಿದೆ.[ಮಾಜಿ ಸಂಸದೆ ರಮ್ಯಾ ವಿರುದ್ಧ ಮಂಡ್ಯ ಎಸ್ಪಿಗೆ ದೂರು]

ಈ ಸಂಬಂಧ ಕಾಂಡಿಮೆಂಟ್ಸ್ ಮಾಲೀಕ ಎ.ಎಸ್.ಮಹೇಶ್ ಅವರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಷ್ಟವನ್ನು ಭರಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Woman protesters taken out chips, chocolates from a shop which is opened at the time of strike in Mandya. Complaint registered against protesters by shop owner.
Please Wait while comments are loading...