ಈಶ್ವರಪ್ಪ ಬುದ್ಧಿಮಾಂದ್ಯ ; ಮುಖ್ಯಮಂತ್ರಿ ಸಿದ್ದರಾಮಯ್ಯ

Posted By:
Subscribe to Oneindia Kannada

ಮಂಡ್ಯ, ನವೆಂಬರ್ 20 : ಚುನಾವಣೆ ಹತ್ತಿರವಾದಂತೆಲ್ಲಾ ರಾಜಕೀಯ ಮುಖಂಡರ ಪರಸ್ಪರ ಮೂದಲಿಕೆಗಳು ಹೆಚ್ಚಾಗುತ್ತಿವೆ. ಎಲ್ಲಾ ಪಕ್ಷಗಳ ಮುಖಂಡರೂ ರೇಸಿಗೆ ಬಿದ್ದವರಂತೆ ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ: ಈಶ್ವರಪ್ಪ ವ್ಯಂಗ್ಯ

ಅನಂತ್ ಕುಮಾರ್ ಹೆಗ್ಡೆ, ಈಶ್ವರಪ್ಪ ಅವರು ಮುಖ್ಯಮಂತ್ರಿಯ ವಿರುದ್ಧ ತುಚ್ಛ ಭಾಷೆ ಬಳಸಿದ ನಂತರ ಈಗ ಮುಖ್ಯಮಂತ್ರಿಗಳು ಅವರಿಗೆ ಉತ್ತರ ನೀಡುವ ಬರದಲ್ಲಿ ಈಶ್ವರಪ್ಪ ಬುದ್ಧಿಮಾಂದ್ಯ, ಯಡಿಯೂರಪ್ಪಗೂ ಬಿದ್ಧಿ ಇಲ್ಲ ಎಂದಿದ್ದಾರೆ.

CM scolds BJP leaders for using bad words against him

ಇಷ್ಟಕ್ಕೆ ಸುಮ್ಮನಾಗದ ಅವರು ಸಂಸದ ಅನಂತ್ ಕುಮಾರ್ ಹೆಗಡೆಗೆ ಅವರ ಮೇಲೂ ವಾಗ್ದಾಳಿ ನಡೆಸಿ ಅನಂತಕುಮಾರ್ ಹೆಗ್ಡೆಗೆ ಸಂಸ್ಕೃತಿ, ಸಂಸ್ಕಾರ ಗೊತ್ತಿಲ್ಲ. ಅವರಿಗೆ ನನ್ನನ್ನು ಕಂಡರೆ ಹೊಟ್ಟೆ ಕಿಚ್ಚು' ಎಂದು ಹೇಳಿದರು.

ನಾಗಮಂಗಲ ಪಟ್ಟಣದಲ್ಲಿ ಸೋಮವಾರ ನವೆಂಬರ್ 20ರಂದು ಕನಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಬಿಜೆಪಿ ಮುಖಂಡರ ಮೇಲೆ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ನಲ್ಲಿ ಸಿದ್ದು -ಈಶು ಏಟು, ತಿರುಗೇಟು

ವಿಶೇಷವಾಗಿ ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು 'ಜೈಲಿಗೆ ಹೋಗಿ ಬಂದ ಗಿರಾಕಿ ನನ್ನನ್ನು ಕಮಿಷನ್ ಏಜೆಂಟ್ ಅಂದಿದ್ದಾರೆ' ಎಂದರು.

ಬಿಜೆಪಿ ಮುಖಂಡರು ತಮ್ಮನ್ನು ಟೀಕಿಸಲು ಬಳಸಿದ ಭಾಷೆಯ ಬಗ್ಗೆಯ ಆಕ್ಷೇಪ ವ್ಯಕ್ತಪಡಿಸಿದ ಅವರು 'ಬಿಜೆಪಿಯವರದ್ದು ಕೀಳು ಸಂಸ್ಕೃತಿ ಅವರಷ್ಟು ಕೀಳಾಗಿ ನಾನು ಮಾತನಾಡಲಾರೆ' ಎಂದರು.

ಭಾಷಣಗಳಲ್ಲಿ ಮಾತನಾಡುತ್ತಾ ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು 'ದಾಖಲೆ ಸಮೇತ ನಾನು ಮಾಡಿರುವ ಭ್ರಷ್ಟಚಾರ ತೋರಿಸಿದರೆ
ಸಾರ್ವಜನಿಕ ಜೀವನದಲ್ಲೇ ಉಳಿಯುವುದಿಲ್ಲ' ಎಂದು ಅವರು ಸವಾಲು ಹಾಕಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah scolds Eshwarappa and Yeddyurappa are brain less people. CM talks with media in Mandya district Nagamangala.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ