ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲರಂತಲ್ಲ ಕುಮಾರಣ್ಣ, ಹೂ ಮಾರುವ ಮಗುವಿನ ಶಿಕ್ಷಣಕ್ಕೆ ಸಹಾಯ

By Gururaj
|
Google Oneindia Kannada News

Recommended Video

ಬಡ ಹುಡುಗಿಯ ಶಿಕ್ಷಣಕ್ಕೆ ನೆರವಾದ ಹೆಚ್ ಡಿ ಕುಮಾರಸ್ವಾಮಿ | Oneindia Kannada

ಮಂಡ್ಯ, ಆಗಸ್ಟ್ 29 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಲ್ಲರಂತಲ್ಲ, ಅವರು ಭಾವನಾಜೀವಿ. ಇದು ಇಂದು ಮತ್ತೊಮ್ಮೆ ಸಾಬೀತಾಗಿದೆ. ರಸ್ತೆ ಬದಿ ಹೂ ಮಾರುತ್ತಾ ನಿಂತಿದ್ದ ಬಾಲಕಿಗೆ ಶಿಕ್ಷಣ ಕೊಡಿಸಲು ಅವರು ನೆರವಾಗಲಿದ್ದಾರೆ.

ಹೌದು... ಮುಖ್ಯಮಂತ್ರಿಗಳು ಇಂದು ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಕೆ.ಆರ್‌.ಎಸ್‌ನಿಂದ ಅವರು ರಾಮನಗರಕ್ಕೆ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆಗ ಶ್ರೀರಂಗಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದ ಮಗುವನ್ನು ನೋಡಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಸರ್ಕಾರ 3 ತಿಂಗಳಿನಲ್ಲಿ ಎದುರಿಸಿದ ಸವಾಲುಗಳು!ಎಚ್.ಡಿ.ಕುಮಾರಸ್ವಾಮಿ ಸರ್ಕಾರ 3 ತಿಂಗಳಿನಲ್ಲಿ ಎದುರಿಸಿದ ಸವಾಲುಗಳು!

ಕುಮಾರಸ್ವಾಮಿ ಅವರು ಇತರ ಕೆಲವು ರಾಜಕೀಯ ನಾಯಕರಂತೆ ಕಾರಿನ ಗ್ಲಾಸು ಏರಿಕೊಂಡು ಅಕ್ಕ-ಪಕ್ಕ ನೋಡದೆ ಸಾಗುವುದಿಲ್ಲ. ಹೂ ಮಾರುವುದನ್ನು ನೋಡಿದ ಅವರು ಕಾರು ನಿಲ್ಲಿಸಿ ಮಗುವನ್ನು ಮಾತನಾಡಿಸಿದ್ದಾರೆ.

CM HD Kumaraswamy to help for poor girl education

ಹೂವನ್ನು ಮಾರುತ್ತ ನಿಂತಿದ್ದ ಮಗುವಿನ ಹೆಸರು ಶಾಬಾಬ್ತಾಜ್. ಬಾಲಕಿಯ ತಂದೆ-ತಾಯಿಯ ಬಗ್ಗೆ ವಿಚಾರಿಸಿದ ಕುಮಾರಸ್ವಾಮಿ ಅವರು ತಂದೆಯನ್ನು ಬಂದು ತಮ್ಮನು ಕಾಣುವಂತೆ ತಿಳಿಸು ಎಂದು ಹೇಳಿದ್ದಾರೆ. ನಿನ್ನ ವಿದ್ಯಾಬ್ಯಾಸಯಕ್ಕೆ ಸಹಾಯಮಾಡುವುದಾಗಿ ಭರವಸೆ ನೀಡಿದ್ದಾರೆ.

ಇದೇ ಮೊದಲಲ್ಲ : ಎಚ್.ಡಿ.ಕುಮಾರಸ್ವಾಮಿ ಅವರು ಹೀಗೆ ಕಾರು ನಿಲ್ಲಿಸಿ ಜನರನ್ನು ಮಾತನಾಡಿಸುವುದು ಇದೇ ಮೊದಲಲ್ಲ. ಹಿಂದೆ ಜೆ.ಪಿ.ನಗರ ನಿವಾಸದಿಂದ ಅವರು ವಿಧಾನಸೌಧಕ್ಕೆ ಹೊರಟಿದ್ದರು ಕಾರು ಹೊರಟಾಗಿತ್ತು.

ಆಗ ಹತ್ತು ವಿದ್ಯಾರ್ಥಿಗಳು ಸರ್ ಸರ್ ಎಂದು ಕೂಗಿದ್ದನ್ನು ಕೇಳಿಸಿಕೊಂಡು, ಕಾರನ್ನು ನಿಲ್ಲಿಸಿ ವಿದ್ಯಾರ್ಥಿಗಳ ಬಳಿ ಬಂದು ಅವರ ಸಮಸ್ಯೆಯನ್ನು ಆಲಸಿದ್ದರು. ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದರು.

ಬೆಂಗಳೂರಿನಲ್ಲಿ ಒಮ್ಮೆ ಕಾರಿನಲ್ಲಿ ಹೋಗುವಾಗ ಹತ್ತಾರು ಯುವಕರು ಅವರನ್ನು ಅಭಿನಂದಿಸಲು ರಸ್ತೆ ಬದಿ ನಿಂತಿದ್ದರು. ಆಗ ಕಾರನ್ನು ನಿಲ್ಲಿಸಿ ಎಲ್ಲರನ್ನು ಮಾತನಾಡಿಸಿ ಕುಮಾರಸ್ವಾಮಿ ಮುಂದೆ ಸಾಗಿದ್ದರು.

English summary
Karnataka Chief Minister H.D.Kumaraswamy will help for the poor girl education. Kumaraswamy identified poor girl on August 29, 2018 who selling flower in the Belagola village of Srirangapatna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X