ಮಂಡ್ಯ: ಮರಕ್ಕೆ ಮದುವೆ ದಿಬ್ಬಣ ಲಾರಿ ಡಿಕ್ಕಿ, ಸಾವಿನ ಸಂಖ್ಯೆ 13ಕ್ಕೆ ಏರಿಕೆ
ಮಂಡ್ಯ, ಅಕ್ಟೋಬರ್ 30 : ಕುಣಿಗಲ್-ಮದ್ದೂರು ಹೆದ್ದಾರಿಯ ತೊರೆಶೆಟ್ಟಹಳ್ಳಿ ಗ್ರಾಮದ ಬಳಿ ಭಾನುವಾರ ಮಿನಿ ಲಾರಿವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ 13ಕ್ಕೆ ಏರಿದೆ.
ಮೃತರು ತಾಲ್ಲೂಕಿನ ಗಡಿ ಗ್ರಾಮಗಳಾದ ಯಡಾನಹಳ್ಳಿ ಹಾಗೂ ಅವಸರದಹಳ್ಳಿ ಗ್ರಾಮಕ್ಕೆ ಸೇರಿದವರಾಗಿದ್ದು, ಇವರೆಲ್ಲರು ರಾಜಣ್ಣ ಎಂಬುವರ ಮಗಳ ವಿವಾಹದಲ್ಲಿ ಪಾಲ್ಗೊಳ್ಳಲು ಮಿನಿ ಲಾರಿವೊಂದರಲ್ಲಿ ಶಿವಪುರಕ್ಕೆ ತೆರಳುತ್ತಿದ್ದರು.
ದುರದೃಷ್ಟ ಚಾಲಕನ ಎಡವಟ್ಟಿನಿಂದಾಗಿ ಮತ್ತೊಂದು ವಾಹನವನ್ನು ಹಿಂದಿಕ್ಕಲು ಹೋಗಿ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೀರಮ್ಮ(50), ಜಯಮ್ಮ (55), ಪಾರ್ವತಮ್ಮ (60), ಮಾದಮ್ಮ(60), ಶಿವಣ್ಣ (45), ಸರೋಜಮ್ಮ (55) ಸೇರಿದಂತೆ ಬಾಲಕಿ ಪೂಜಾ (16), ಕರಿಯಪ್ಪ, ಶ್ರುತಿ (3) ಮೃತಪಟ್ಟಿದ್ದಾರೆ.
ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಮಲಮ್ಮ(75), ಕರಿಯಪ್ಪ(56) ಎಂಬುವವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13ಕ್ಕೇರಿದೆ.
ಈ ದುರ್ಘನೆಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಗೊಂಡವರನ್ನು ಮದ್ದೂರು ತಾಲ್ಲೂಕು ಆಸ್ಪತ್ರೆ ಹಾಗೂ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications