ಒಂದೇ ದಿನ 8 ಕೇಸ್; ಆರೆಂಜ್ ಝೋನ್ ನಿಂದ ರೆಡ್ ಝೋನ್ ಗೆ ಮಂಡ್ಯ
ಮಂಡ್ಯ, ಮೇ 01: ಒಂದೆಡೆ ರೆಡ್ ಝೋನ್ ಆಗಿರುವ ಮೈಸೂರಿನಲ್ಲಿ ಕೊರೊನಾ ಹತೋಟಿಗೆ ಬರುತ್ತಿದೆ. ಒಟ್ಟು ದಾಖಲಾಗಿದ್ದ 89 ಪ್ರಕರಣಗಳಲ್ಲಿ 25 ಮಾತ್ರ ಸಕ್ರಿಯವಾಗಿವೆ. ಆದರೆ ಪಕ್ಕದ ಮಂಡ್ಯ ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಮತ್ತೆ ಭೀತಿ ಹುಟ್ಟಿಸಿದೆ.
ಪೊಲೀಸರು ಮಾಡುತ್ತಿರೋ ಕೆಲಸಕ್ಕೆ ನಮ್ಮದೊಂದು ಚಿಕ್ಕ ಸಲಾಂ | Oneindia Kannada
ಇಂದು ಒಂದೇ ದಿನ ಮಂಡ್ಯ ಜಿಲ್ಲೆಯಲ್ಲಿ 8 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮಳವಳ್ಳಿಯ 4 , ಮಂಡ್ಯದ 3, ಕೆ.ಆರ್.ಪೇಟೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಮುಂಬೈ ವ್ಯಕ್ತಿಯಿಂದ ಮಂಡ್ಯದ ನಾಗಮಂಗಲಕ್ಕೆ ಬಂತು ಕೊರೊನಾ
ನಿನ್ನೆತನಕ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಇದರಲ್ಲಿ ಹಲವರು ಚೇತರಿಸಿಕೊಳ್ಳುತ್ತಿದ್ದರು. ಇದೀಗ ಅವರ ಜೊತೆಗೆ 8 ಮಂದಿ ಸೇರ್ಪಡೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 22ಕ್ಕೇರಿದೆ. ಇದುವರೆಗೆ ಮಂಡ್ಯ ಜಿಲ್ಲೆಯಲ್ಲಿ 26 ಮಂದಿಗೆ ಸೋಂಕು ತಗುಲಿದ್ದು, 4 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಂಖ್ಯೆ 22ಕ್ಕೇರಿದ್ದರಿಂದಾಗಿ ಆರೆಂಜ್ ಝೋನ್ ನಲ್ಲಿದ್ದ ಮಂಡ್ಯ ಈಗ ರೆಡ್ ಝೋನ್ ಗೆ ಸೇರಿದೆ.