ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ಎಸ್‌ ನೀರು: ಶ್ರೀರಂಗಪಟ್ಟಣದಲ್ಲಿ 500 ಎಕರೆ ಕೃಷಿ ಭೂಮಿ ನಾಶ

By Nayana
|
Google Oneindia Kannada News

ಮಂಡ್ಯ, ಆಗಸ್ಟ್ 17: ಕೃಷ್ಣರಾಜ ಜಲಾಶಯದಿಂದ ನಿತ್ಯ ಒಂದೂವರೆ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಮಂಡ್ಯ ಸುತ್ತಮುತ್ತಲ ಪ್ರದೇಶದಲ್ಲಿರುವ 500ಎಕರೆಗೂ ಹೆಚ್ಚು ಕೃಷಿ ಭೂಮಿ ನಾಶವಾಗಿದೆ.

ಮಂಡ್ಯ, ಮೈಸೂರು, ಮಂಗಳೂರು, ಕೊಡಗು ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದ್ದು ಮಂಗಳವಾರ ಒಂದು ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದ್ದು, ನಂತರ ಎರಡು ದಿನ ಒಂದೂವರೆ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ.

ಕೆಆರ್‌ಎಸ್‌ನಿಂದ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ: ನದಿ ತೀರದ ಜನರಿಗೆ ಎಚ್ಚರಿಕೆ ಕೆಆರ್‌ಎಸ್‌ನಿಂದ ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ: ನದಿ ತೀರದ ಜನರಿಗೆ ಎಚ್ಚರಿಕೆ

ಶ್ರೀನಿವಾಸ ಅಗ್ರಹಾರ, ಗಂಜಮ್‌, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಹಂಗರಹಳ್ಳಿ ಹಾಗೂ ಮಹದೇವಪುರ ಹಳ್ಳಿಯಲ್ಲಿ ಜಮೀನು ಸಂಪೂರ್ಣವಾಗಿ ನಾಶವಾಗಿದೆ. ಕೆಆರ್‌ಎಸ್‌ನಿಂದ ಬಿಡುಗಡೆ ಮಾಡಿದ ನೀರು ಶ್ರೀರಂಗಪಟ್ಟಣ ಕೋಟೆಯ ಸುತ್ತಮುತ್ತಲು ಹೋಗುತ್ತದೆ. ವಿವೇಕಾನಂದ ರಾಮಕೃಷ್ಣ ಆಶ್ರಮ ಸೇತುವೆ ಕೂಡ ಮುಳುಗಡೆ ಹಂತ ತಲುಪಿದೆ.

500 acres of agri land flooded in Mandya district

ಮಳೆ ವಿಪರೀತವಾದರೆ 1.50 ಲಕ್ಷ ಕ್ಯೂಸೆಕ್‌ನಿಂದ 1.25 ಕ್ಯೂಸೆಕ್‌ ನೀರುವರೆಗೂ ಹರಿಸಲಾಗುತ್ತದೆ. ಅಪಾಯಮಟ್ಟವನ್ನು ಮೀರಿ ನೀರು ಹರಿಯುತ್ತಿದೆ. ಮುತ್ತತ್ತಿ ಅರಣ್ಯಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ನದಿ ತೀರದಲ್ಲಿರುವ ಜನರನ್ನು ಅಪಾಯವಿಲ್ಲದಿರುವ ಜಾಗಕ್ಕೆ ತೆರಳುವಂತೆ ತಿಳಿಸಲಾಗಿದೆ.

English summary
Floods in river cauvery due to heavy rains in the region have inundated around 500 acres of agriculture land in srirangapatna taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X