ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯ ಪಂಚಾಯತ್‌ರಾಜ್ ಇಂಜಿನಿಯರಿಂಗ್ ನೌಕರರಿಂದ 3.51 ಕೋಟಿ ರೂ. ದುರುಪಯೋಗ: ಸಿಎಂ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಸೆಪ್ಟೆಂಬರ್‌, 22: ಮಂಡ್ಯ ಜಿಲ್ಲಾ ಪಂಚಾಯಿತಿಯ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಈವರೆಗೆ 3.51 ಕೋಟಿ ಹಣ ದುರುಪಯೋಗ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿಗಳು, 2010-11 ರಿಂದ 2019-20ನೇ ಸಾಲಿನವರೆಗೆ ಇಂಜಿನಿಯರಿಂಗ್ ವಿಭಾಗದಲ್ಲಿ ಅಧಿಕಾರಿ ಮತ್ತು ನೌಕರರು 3.51 ಕೋಟಿ ರೂ. ದುರುಪಯೋಗ ಆಗಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಕಾರ್ಯಪಾಲಕ ಅಭಿಯಂತರರಾದ ಪ್ರಕಾಶ್ ಗೋಪಾಲಕೃಷ್ಣ, ಎಸ್.ವಿ. ಪದ್ಮನಾಭ, ಲೆಕ್ಕಾಧೀಕ್ಷಕ ವಿ.ಪಿ. ಆನಂದ್‌ ಕುಮಾರ್ ಸೇರಿದಂತೆ 10 ಜನ ಅಧಿಕಾರಿಗಳು, ನೌಕರರ ವಿರುದ್ಧ ಪ್ರಕರಣ ದಾಖಲಾಗಿದೆ. ಇಲಾಖಾ ತನಿಖೆ ಪ್ರಗತಿಯಲ್ಲಿದೆ ಎಂದು ಸಿಎಂ ಉತ್ತರಿಸಿದ್ದಾರೆ.

Breaking: ಮಂಡ್ಯ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 29 ಶಾಲಾ ಮಕ್ಕಳು ಅಸ್ವಸ್ಥBreaking: ಮಂಡ್ಯ: ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 29 ಶಾಲಾ ಮಕ್ಕಳು ಅಸ್ವಸ್ಥ

3.51 ಕೋಟಿ ರೂಪಾಯಿ ದುರುಪಯೋಗ
ವಿಚಾರಣಾಧಿಕಾರಿಗಳು ವರದಿ ನೀಡಿದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಂಬಂಧಿಸಿದ ಬ್ಯಾಂಕುಗಳಿಗೂ ತಿಳಿಸಿದ್ದು, ಲೋಪವೆಸಗಿರುವವರಿಂದ ಸರ್ಕಾರಕ್ಕೆ ಹಣ ಮರುಪಾವತಿಸುವ ಬಗ್ಗೆ ಕರ್ನಾಟಕ ರಾಜ್ಯ ಗ್ರಾಹಕರ ವಿವಾದ ಪರಿಹಾರ ಆಯೋಗ, ಬೆಂಗಳೂರಿನಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಜೊತೆಗೆ ಸದರಿ ಅಧಿಕಾರಿ, ನೌಕರರ ವಿರುದ್ಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಅಪರಾಧ ಎಸಗಿದ್ದಾರೆನ್ನಲಾದ ಗ್ರೂಪ್ ಡಿ ನೌಕರ ಎಚ್.ಎಲ್. ನಾಗರಾಜು ಅವರು ಕಳೆದ ಮೇ 8ರಂದು ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

3.51 crore misappropriated from Panchayat Raj Engineering employees: Bommai

ರಾಜಧನ ವಸೂಲಿಯಲ್ಲಿ ಮಂಡ್ಯ ಜಿಲ್ಲೆಗೆ ಕೊನೆಯ ಸ್ಥಾನ: ಸುಮಲತಾ ಅಸಮಧಾನರಾಜಧನ ವಸೂಲಿಯಲ್ಲಿ ಮಂಡ್ಯ ಜಿಲ್ಲೆಗೆ ಕೊನೆಯ ಸ್ಥಾನ: ಸುಮಲತಾ ಅಸಮಧಾನ

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರರಾದ ಚಂದ್ರಹಾಸ, ರಾಮಕೃಷ್ಣ, ಎಸ್.ವಿ. ಪದ್ಮನಾಭ, ಪ್ರಕಾಶ್ ಗೋಪಾಲಕೃಷ್ಣ ಪವರ್, ಎಸ್. ಕುಮಾರ್, ಲೆಕ್ಕ ಪರಿಶೋಧಕರಾದ ಕೆ. ಪುಟ್ಟಭೈರಯ್ಯ, ಆರ್. ರಾಜು, ಎ.ಪಿ. ಆನಂದ್‌ಕುಮಾರ್, ನಗದು ಸಹಾಯಕರಾದ ಬಿ.ಆರ್. ರಮೇಶ್ ಹಾಗೂ ಎಚ್.ಎಲ್. ನಾಗರಾಜು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 2014ರಿಂದ 2020ರವರೆಗೆ ಕರ್ತವ್ಯದಲ್ಲಿದ್ದ ಅಧಿಕಾರಿ, ನೌಕರರು ಎಷ್ಟು ಮೊತ್ತದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ. ಈ ಅವಧಿಯಲ್ಲಿ ಒಟ್ಟಾರೆ 3.51 ಕೋಟಿಗೂ ಹೆಚ್ಚು ದುರುಪಯೋಗಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವರಣೆ ನೀಡಿದರು.

English summary
Chief Minister Basavaraja Bommai in reply to a question during the assembly session said 3.51 crores of money misappropriated in Panchayat Raj Engineering Department of Mandya Zilla Panchayat, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X