ಮಡಿಕೇರಿಯಲ್ಲಿ ಹಿಂಬದಿ ಗೋಡೆ ಒಡೆದು ಬ್ಯಾಂಕ್ ದರೋಡೆಗೆ ಯತ್ನ
ಮಡಿಕೇರಿ, ಜುಲೈ 29: ಇಲ್ಲಿಗೆ ಸಮೀಪದ ಮಕ್ಕಂದೂರಿನ ಕೆನರಾ ಬ್ಯಾಂಕ್ ದರೋಡೆಗೆ ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ. ಮಡಿಕೇರಿ - ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಬದಿಯಲ್ಲೇ ಇರುವ ಬ್ಯಾಂಕ್ ಕಟ್ಟಡದ ಹಿಂಬದಿಯ ಗೋಡೆ ಒಡೆದಿರುವ ಚೋರರು ಕೊಠಡಿಗಳಲ್ಲಿ ಜಾಲಾಡಿ ಏನೂ ಸಿಗದೆ ಪರಾರಿಯಾಗಿದ್ದಾರೆ.
Recommended Video
ಮಂಗಳವಾರ ಮಧ್ಯ ರಾತ್ರಿ ಘಟನೆ ನಡೆದಿದೆ. ಆದರೆ ಏನೂ ಕಳ್ಳತನವಾಗಿಲ್ಲ ಎಂದು ಸದ್ಯಕ್ಕೆ ತಿಳಿದುಬಂದಿದೆ. ಬ್ಯಾಂಕ್ ಗೆ ಕನ್ನ ಹಾಕಲು ಸಂಚು ರೂಪಿಸಿರುವ ಕಳ್ಳರು, ಮೊದಲು ಬ್ಯಾಂಕಿನ ವಿದ್ಯುತ್ ತಂತಿ ಕತ್ತರಿಸಿ ಸಿಸಿಟಿವಿ ಸಂಪರ್ಕ ತಪ್ಪಿಸಿದ್ದಾರೆ. ಕಬ್ಬಿಣದ ಸಲಾಕೆಗಳಿಂದ ಬ್ಯಾಂಕ್ ಹಿಂಬದಿಯ ಗೋಡೆಯನ್ನು ಒಡೆದು ಒಳ ನುಗ್ಗಿದ್ದಾರೆ. ಆದರೆ ಅವರಿಗೆ ಕಳ್ಳತನ ಮಾಡಲು ಏನೂ ಸಿಕ್ಕಿಲ್ಲ. ಹೀಗಾಗಿ ಜಾಗದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಹಿತ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮಡಿಕೇರಿ ಗ್ರಾಮೀಣ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಚೋರರ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.












Click it and Unblock the Notifications