ಮಡಿಕೇರಿಯಲ್ಲಿ ಗುಂಡು ಹಾರಿಸಿಕೊಂಡು ಮಾಜಿ ಸೈನಿಕ ಆತ್ಮಹತ್ಯೆ
ಮಡಿಕೇರಿ, ಜೂನ್ 11: ಬಂದೂಕಿನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಸೈನಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಗ್ರಾಮದ ತೋಣಕೆರೆ ಎಂಬಲ್ಲಿ ನಡೆದಿದೆ.
Recommended Video
Kumaraswamy spoke about issues facing from Bengaluru Mysore highway | Oneindia Kannada
ಕಾಫಿ ಬೆಳೆಗಾರರೂ ಆಗಿದ್ದ ಚೀಯಕಪೂವಂಡ ಉತ್ತಯ್ಯ (74) ಆತ್ಮಹತ್ಯೆ ಮಾಡಿಕೊಂಡವರು. ಇವರು ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದ ಜುಗುಪ್ಸೆಗೊಂಡು ಇಂದು ಬೆಳಗಿನ ಜಾವ ಕೊಠಡಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ಸ್ ಪೆಕ್ಟರ್ ದಿವಾಕರ್, ಠಾಣಾಧಿಕಾರಿ ಆರ್.ಕಿರಣ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.












Click it and Unblock the Notifications