ಅರೇರೆ ಏನಿದು ಮಡಿಕೇರಿ ನಗರಸಭೆ ಪ್ರೊಜೆಕ್ಟರ್ ನಲ್ಲಿ ಬ್ಲೂ ಫಿಲ್ಮ್!

Posted By:
Subscribe to Oneindia Kannada

ಮಡಿಕೇರಿ, ಜುಲೈ 12 : ಇಲ್ಲಿನ ನಗರಸಭೆಯ ಆವರಣದಲ್ಲಿ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ಬಿತ್ತರಿಸಲು ಅಳವಡಿಸಲಾಗಿದ್ದ ಪ್ರೊಜೆಕ್ಟರ್ ನಲ್ಲಿ ಇದ್ದಕ್ಕಿದ್ದಂತೆ ಬ್ಲೂ ಫಿಲ್ಮ್ ಪ್ರದರ್ಶನಗೊಂಡು ಸಾರ್ವಜನಿಕರು ಅಸಹ್ಯಪಡುವಂತಾಗಿದೆ. ಈ ಘಟನೆ ಜುಲೈ 6 ರಂದು ಮಧ್ಯಾಹ್ನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪ್ರೊಜೆಕ್ಟರ್ ಆನ್ ಮಾಡಿದಾಕ್ಷಣ ಪರದೆ ಮೇಲೆ ನೀಲಿ ಚಿತ್ರ ಪ್ರದರ್ಶನಗೊಂಡಿದೆ. ಇದರಿಂದ ಸಿಬಂದಿ ಬೆಚ್ಚಿ ಬಿದ್ದು, ಹೌಹಾರಿದ್ದಾರೆ. ಹೀಗೇನು ಮಾಡ್ಬೇಕೆಂದು ತಿಳಿಯದೇ ಅಲ್ಲಿದ್ದ ಸಿಬಂದಿಯೊಬ್ಬರು ಪ್ರೊಜೆಕ್ಟರ್ ಆಫ್ ಮಾಡಿ ನಿಟ್ಟುಸಿರುವ ಬಿಟ್ಟಿರು.

ಸೇನಾ ಸಭೆಯಲ್ಲಿ ಅಶ್ಲೀಲ ವಿಡಿಯೋ: ತನಿಖೆಗೆ ಆದೇಶ

Porn clip play in Madikeri municipal projector

ಸುಮಾರು 5 ನಿಮಷಗಳ ಕಾಲ ಚಿತ್ರ ಪ್ರದರ್ಶನಗೊಂಡಿದ್ದು, ಇದಕ್ಕೆ ಕಾರಣರಾದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ನಗರ ಸಭಾ ಸಿಬಂದಿ, ಅಧ್ಯಕ್ಷರು ಒತ್ತಯಾಸಿದ್ದಾರೆ.

ಜಿಲ್ಲಾಧಿಕಾರಿ ಅವರು ನಗರ ಸಭೆಯ ಯೋಜನಾ ನಿರ್ದೇಶಕ ಮೊಹಮದ್ ಮುನೀರ್ ಅವರ ಬಳಿ ವರದಿ ಕೇಳಿದ್ದಾರೆ. ಇದೀಗ ನಗರಸಭೆಯ ಸಿಬಂದಿಗಳ ವಿಚಾರಣೆ ನಡೆಸಲಾಗುತ್ತಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಸಾರ್ವಜನಿಕವಾಗಿಯೇ ಈ ರೀತಿ ಸರ್ಕಾರಿ ಸಿಬ್ಬಂದಿಗಳು ಮಾಡಿದರೆ ಹೇಗೆ? ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಕೇಳಿಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a major embarrassment, a porn video was played at a government's schemes awareness program to the public in Madikeri municipal.
Please Wait while comments are loading...