ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ, ಶಾಸಕರ ಪುತ್ರನಿಗೆ ಜಾಮೀನು

Posted By:
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 17 : ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಪುತ್ರನಿಗೆ ಜಾಮೀನು ಸಿಕ್ಕಿದೆ. ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪೊಲೀಸರು ಶಾಸಕರ ಪುತ್ರನನ್ನು ಬಂಧಿಸಿದ್ದರು.

ಕುಶಾಲನಗರದ ಜೆಎಂಎಫ್‌ಸಿ ಕೋರ್ಟ್ ಶನಿವಾರ ಎಂ.ಟಿ.ಕೃಷ್ಣಪ್ಪ ಪುತ್ರ ಕೆ.ರಾಜೀವ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರತಿಯೊಬ್ಬ ಆರೋಪಿಗಳು ಪ್ರತಿ ಶನಿವಾರ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕು ಎಂದು ಕೋರ್ಟ್ ಷರತ್ತು ಹಾಕಿದೆ.[ವೇಶ್ಯವಾಟಿಕೆ, ಜೆಡಿಎಸ್ ಶಾಸಕರ ಮಗ ಬಂಧನ]

law

ಕೂರ್ಗ್ ರಿವರ್ ವ್ಯೂ ರೆಸಾರ್ಟ್ ಮಾಲೀಕ ಪ್ರಸನ್ನ, ಕೆ.ರಾಜೀವ್, ಮಧು, ಪ್ರಮೋದ್‌ ಸೇರಿದಂತೆ ಎಲ್ಲಾ 4 ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಪ್ರತಿ ಆರೋಪಿಗಳೂ ತಲಾ 25 ಸಾವಿರ ರೂ. ಬಾಂಡ್ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.

ಸೆಪ್ಟೆಂಬರ್ 11ರಂದು ಕುಶಾಲನಗರ ಪೊಲೀಸರು ಕೂರ್ಗ ರಿವರ್ ವ್ಯೂ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದರು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಕೆ.ರಾಜೀವ್ ಸೇರಿದಂತೆ ಇತರ ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kushalnagar JMFC court granted bail to K.Rajeev and other 3 accused. Kushalnagar on September 11, 2016 arrested Turuvekere JDS MLA MT Krishnappa son K.Rajeev and others for running brothel.
Please Wait while comments are loading...