ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಥೋದ್ಭವ; ತಲಕಾವೇರಿಯಲ್ಲಿ ಭಕ್ತರಿಗೆ ತೀರ್ಥಸ್ನಾನವಿಲ್ಲ

|
Google Oneindia Kannada News

ಮಡಿಕೇರಿ, ಅಕ್ಟೋಬರ್ 04 : ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ಬಾರಿ ತಲಕಾವೇರಿಯಲ್ಲಿ ಭಕ್ತರು ತೀರ್ಥಸ್ನಾನ ಮಾಡುವಂತಿಲ್ಲ. ಈ ವರ್ಷದ ಕಾವೇರಿ ತೀರ್ಥೋದ್ಭವ ಅಕ್ಟೋಬರ್ 17ರಂದು ಬೆಳಗ್ಗೆ 7.30ಕ್ಕೆ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿದೆ. ತುಲಾ ಸಂಕ್ರಮಣ ಜಾತ್ರೆಯನ್ನು ಸಂಪ್ರದಾಯದಂತೆ ಆಚರಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು. ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 2870, ಸಕ್ರಿಯ ಪ್ರಕರಣಗಳು 503.

ತಲಕಾವೇರಿಯಲ್ಲಿ ಅ.17 ರಂದು ಬೆಳಿಗ್ಗೆ 7.03 ಗಂಟೆಗೆ ತೀರ್ಥೋದ್ಭವತಲಕಾವೇರಿಯಲ್ಲಿ ಅ.17 ರಂದು ಬೆಳಿಗ್ಗೆ 7.03 ಗಂಟೆಗೆ ತೀರ್ಥೋದ್ಭವ

"ಪೂಜಾ ವಿಧಿ ವಿಧಾನಗಳಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು" ಎಂದು ವಿ. ಸೋಮವಣ್ಣ ಸಲಹೆ ನೀಡಿದರು.

ತಲಕಾವೇರಿ ಭೂಕುಸಿತ; 10 ದಿನಗಳ ನಂತರ ಮೂರನೇ ಮೃತದೇಹ ಪತ್ತೆ ತಲಕಾವೇರಿ ಭೂಕುಸಿತ; 10 ದಿನಗಳ ನಂತರ ಮೂರನೇ ಮೃತದೇಹ ಪತ್ತೆ

"ಪಿಂಡ ಪ್ರಧಾನ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಲಾಗುತ್ತದೆ. ಕೊಳದಲ್ಲಿ ತೀರ್ಥಸ್ನಾನ ಬದಲಾಗಿ ಪ್ರೋಕ್ಷಣೆ ಮಾಡಲಾಗುತ್ತದೆ" ಎಂದು ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಎಸ್. ತಮ್ಮಯ್ಯ ಹೇಳಿದರು.

ಕೊಡಗು ಜಿಲ್ಲೆಯಲ್ಲಿನ ತಾಲೂಕುವಾರು ಮಳೆ ವಿವರಕೊಡಗು ಜಿಲ್ಲೆಯಲ್ಲಿನ ತಾಲೂಕುವಾರು ಮಳೆ ವಿವರ

ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ

ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ

"ಕಾವೇರಿ ತೀರ್ಥೋದ್ಭವದ ದಿನ ಬರುವ ಹೊರ ರಾಜ್ಯದ ಭಕ್ತರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರಬೇಕು. ನಗೆಟೀವ್ ವರದಿಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ವೃದ್ಧರು, ಮಕ್ಕಳು ಆದಷ್ಟು ಬರಬಾರದು" ಎಂದು ಸಚಿವ ವಿ. ಸೋಮಣ್ಣ ಮನವಿ ಮಾಡಿದರು.

ವಾಹನಗಳಿಗೆ ಪಾಸ್ ಇಲ್ಲ

ವಾಹನಗಳಿಗೆ ಪಾಸ್ ಇಲ್ಲ

ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಎಸ್. ತಮ್ಮಯ್ಯ, "ಪೊಲೀಸ್ ಇಲಾಖೆಯವರು ಅಗತ್ಯ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು. ಆರೋಗ್ಯ ಇಲಾಖೆಯವರು ಕೋವಿಡ್ ಕುರಿತು ಅರಿವು ಮೂಡಿಸಬೇಕು. ಈ ಬಾರಿ ಯಾವುದೇ ರೀತಿಯ ವಾಹನಗಳಿಗೆ ಪಾಸ್ ಇರುವುದಿಲ್ಲ" ಎಂದು ಹೇಳಿದರು.

ಸಂಪ್ರದಾಯದಂತೆ ಪೂಜೆ

ಸಂಪ್ರದಾಯದಂತೆ ಪೂಜೆ

ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ ಯಾವುದೇ ಲೋಪ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಮಾತನಾಡಿ, "ತಲಕಾವೇರಿ ಜಾತ್ರೆಗೆ ತೆರಳುವವರು ಕೋವಿಡ್ 19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಹೋಗಬೇಕು" ಎಂದು ಸಲಹೆ ನೀಡಿದರು.

ಭಕ್ತರಿಗೆ ಅಗತ್ಯ ವ್ಯವಸ್ಥೆಗಳು

ಭಕ್ತರಿಗೆ ಅಗತ್ಯ ವ್ಯವಸ್ಥೆಗಳು

ಭಾಗಮಂಡಲ-ತಲಕಾವೇರಿಗಳಲ್ಲಿ ಚಿಕಿತ್ಸಾ ಘಟಕಗಳನ್ನು ತೆರೆಯಬೇಕು. ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಬೇಕು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಜಾತ್ರಾ ದಿನದಂದು ಸಮರ್ಪಕ ವಿದ್ಯುತ್ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

English summary
No thirtha snana for devotees in Talakaveri during theerthodbhava time. Theerthodbhava will be held on 7.30 am on October 17, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X