ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಸಮರ್ಥರು ಎಂದ ವಿಶ್ವನಾಥ್
ಮಡಿಕೇರಿ, ಜೂನ್ 12: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಕೂಡ ಸಮರ್ಥರು ಎಂದು ಎಚ್‌ಡಿ ವಿಶ್ವನಾಥ್ ಹೇಳಿದ್ದಾರೆ.
ಬುಧವಾರ ಮಡಿಕೇರಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ನೀಡಿದ ರಾಜೀನಾಮೆ ಅಂಗೀಕಾರವಾಗಿದೆ ಎಂದು ಸ್ವತಃ ತಿಳಿಸಿದ ಅವರು ನಿಖಿಲ್ ಕುಮಾರಸ್ವಾಮಿ ಕೂಡ ಆ ಜಾಗಕ್ಕೆ ಸೂಕ್ತ ವ್ಯಕ್ತಿ, ಅವರೇ ರಾಜ್ಯಾಧ್ಯಕ್ಷರು ಯಾಕಾಗಬಾರದು ಎಂದಿದ್ದಾರೆ.
ನಮ್ಮದು ಜಾತ್ಯತೀತ ಪಕ್ಷವಾಗಿದೆ. ಹಾಗಾಗಿ ಎಲ್ಲ ಜಾತಿಯವರನ್ನು ಪರಿಗಣನೆ ಮಾಡಬೇಕು. ಇದಕ್ಕೆ ನರೇಂದ್ರ ಮೋದಿ, ಯಡಿಯೂರಪ್ಪ ಉದಾಹರಣೆಯಾಗಿದ್ದಾರೆ.

ಮಾಧ್ಯಮದವರ ಮೇಲೆ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಧ್ಯಮದವರು ತೋರಿಸಬಾರದನ್ನು ತೋರಿಸಿಲ್ಲ. ಮುಖ್ಯಮಂತ್ರಿಗಳು ಹೇಳಬಾರದನ್ನು ಹೇಳಿಲ್ಲ. ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕು. ರಾಜ್ಯ ರಾಜಕಾರಣ ಮಲಿನವಾಗಿದೆ.
ಸಮಾನ ಮನಸ್ಕರು ಕೂತು ಚರ್ಚೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಜೆಡಿಎಸ್‌ನಲ್ಲಿ ಎರಡು ಸಚಿವ ಸ್ಥಾನ ಖಾಲಿ ಇದೆ. ಒಬ್ಬ ದಲಿತರಿಗೆ ಅಥವಾ ಅಲ್ಪಸಂಖ್ಯಾತರಿಗೆ ಸಚಿವಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.












Click it and Unblock the Notifications