ಮಡಿಕೇರಿಯಲ್ಲಿ ತರಕಾರಿ ಜೊತೆ ಬಂದಿತ್ತು ಗೋಮಾಂಸ
ಮಡಿಕೇರಿ, ಏಪ್ರಿಲ್ 22: ಹುಣಸೂರಿನಿಂದ ಕೊಡಗಿನ ಸಿದ್ದಾಪುರಕ್ಕೆ ತರಕಾರಿ ಜೊತೆಗೆ ಗೋ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಇಂದು ಜೀಟೊ ವಾಹನದಲ್ಲಿ ತರಕಾರಿ ಸಾಗಾಟದ ನೆಪದಲ್ಲಿ ಈತ ಗೋ ಮಾಂಸವನ್ನು ಸಾಗಿಸುತ್ತಿದ್ದ. ಈ ಕುರಿತು ಸುಳಿವು ಪಡೆದ ಪೊಲೀಸರು ಇಂದು ಬೆಳಗಿನ ಜಾವ ಮಾಲ್ದರೆಯ ಚೆಕ್ ಪೋಸ್ಟ್ ನಲ್ಲಿ ವಾಹನ ತಡೆದು ಪರಿಶೀಲಿಸಿದ್ದಾರೆ.

ಆಗ ತರಕಾರಿ ಜೊತೆ 25 ಕೆ.ಜಿ ಗೋ ಮಾಂಸ ಪತ್ತೆಯಾಗಿದೆ. ಕೂಡಲೇ ವಾಹನವನ್ನು, ಚಾಲಕ ಸಿದ್ದಾಪುರದ ಮುಸ್ತಾಫ ಎಂಬಾತನನ್ನೂ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಪೋಲೀಸರು ತನಿಖೆ ನಡೆಸುತಿದ್ದಾರೆ.












Click it and Unblock the Notifications