ಮಡಿಯಾಗಿ ಉಳಿಯುವುದೇ ಮಡಿಕೇರಿ?

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ ನವೆಂಬರ್‌ 29: ರಾಜ್ಯದ ಪಟ್ಟಣಗಳಲ್ಲಿ ಕಾಡುತ್ತಿರುವಂತಹ ಕಸದ ಸಮಸ್ಯೆ ಮಡಿಕೇರಿಯನ್ನು ಬಿಟ್ಟಿಲ್ಲ. ಈಗಾಗಲೇ ಅಲ್ಲಲ್ಲಿ ಕಸಗಳ ರಾಶಿ ಕಾಣತೊಡಗಿವೆ. ನಗರಸಭೆಯಿಂದ ಇದೀಗ ಕಸದ ಬುಟ್ಟಿಗಳನ್ನು ನಗರದಾದ್ಯಂತ ವಿತರಿಸುವ ಕಾರ್ಯ ನಡೆದಿದ್ದು ಅದು ನಗರವನ್ನು ಶುಚಿಯಾಗಿಡಲು ಸಹಕರಿಸುತ್ತಾ ಎಂಬುದನ್ನು ನೋಡಬೇಕಾಗಿದೆ.

ಒಂದು ಕಾಲದಲ್ಲಿ ಮಡಿಕೇರಿ ಮಡಿಯಾಗಿತ್ತು. ಮಡಿಯಾಗಿದ್ದರಿಂದ ಮಡಿಕೇರಿ ಎಂಬ ಹೆಸರು ಬಂತು ಎಂದು ಹೇಳುವವರೂ ಇದ್ದಾರೆ. ಈಗ ನಗರ ಅಭಿವೃದ್ಧಿಯಾಗಿದೆ. 23 ವಾರ್ಡ್ ಗಳಿದ್ದು ಸುಮಾರು 33, 381 ರಷ್ಟು ಜನಸಂಖ್ಯೆ ಹೊಂದಿದೆ. 17.04 ಚದರ ಕಿಲೋ ಮೀಟರ್ ವಿಸ್ತೀರ್ಣದ ಪಟ್ಟಣದಲ್ಲಿ ಮನೆಗಳು, ವಾಣಿಜ್ಯ ಸಂಕೀರ್ಣಗಳು ಎಲ್ಲವೂ ಇದೆ. ಆದರೆ ಬೆಟ್ಟಗುಡ್ಡ ಹೊಂದಿರುವ ಕಾರಣ ಕೆಲವು ಕಡೆಗಳಿಗೆ ವಾಹನಗಳು ತೆರಳದ ಪರಿಸ್ಥಿತಿಯೂ ಇದೆ ಹೀಗಾಗಿ ಕಸ ವಿಲೇವಾರಿ ಇಲ್ಲಿ ಅಷ್ಟು ಸುಲಭವಾಗಿ ಉಳಿದಿಲ್ಲ.[ಮಡಿಕೇರಿಯ ರಾಜಾಸೀಟ್ ಬಳಿ ಅಕ್ರಮ ಅಂಗಡಿಗಳ ತೆರವು]

Madikeri garbage problem

ಈಗಾಗಲೇ ಮನೆಮನೆಗಳಿಂದ ಕಸ ಸಂಗ್ರಹಿಸುವ ಗುತ್ತಿಗೆಯನ್ನು ಚಂದನ ಸ್ತ್ರೀಶಕ್ತಿ ಸಂಘವು ವಹಿಸಿಕೊಂಡಿದೆ. ಈ ಸಂಘ ಆರು ಟ್ರ್ಯಾಕ್ಟರ್ ಹಾಗೂ ಟಾಟಾಏಸ್ ವಾಹನವನ್ನು ಹೊಂದಿದ್ದು, ನಗರಸಭೆಯಲ್ಲಿ 3 ಟ್ರ್ಯಾಕ್ಟರ್ ಇವೆ. ಕಸದ ತೆರಿಗೆಯನ್ನು ನಗರಸಭೆ ವಾಸದ ಮನೆಗೆ ರು. 180 ಹಾಗೂ ವಾಣಿಜ್ಯ ಕಟ್ಟಡಕ್ಕೆ ರು. 360ನ್ನು ಜನರು ತೆರಿಗೆ ಕಟ್ಟುವಾಗಲೇ ಸಂಗ್ರಹಿಸುತ್ತಿದೆ. ಆದರೆ ಕಸದ ಟ್ರ್ಯಾಕ್ಟರ್ ಎಲ್ಲ ಕಡೆ ತೆರಳಲು ಅಸಾಧ್ಯವಾದ ಹಿನ್ನಲೆಯಲ್ಲಿ ಕೆಲವಡೆ ಕಂಟೈನರ್‍ಗಳನ್ನು ಅಳವಡಿಸಲಾಗಿತ್ತು. ಅದಕ್ಕೆ ಜನ ಕಸ ತಂದು ಸುರಿಯುತ್ತಿದ್ದರು.

ಆದರೆ ರಾಜ್ಯ ಸರಕಾರದ ಪೌರಾಡಳಿತ ನಿರ್ದೇಶನಾಲಯ 2014ರಲ್ಲಿಯೇ ಕಸ ವಿಲೇವಾರಿಗೆ ಕಂಟೈನರ್‍ಗಳನ್ನು (ಕಸದತೊಟ್ಟಿ) ಖರೀದಿಸದಂತೆ ಹಾಗೂ ಬಳಸದಂತೆ ಸೂಚಿಸಿದೆ. ಆದರೂ ಇಲ್ಲಿ ಅದನ್ನು ಬಳಸಲಾಗುತ್ತಿತ್ತು. ಇದೀಗ ನಗರಸಭೆಗೆ ಆಯುಕ್ತರಾಗಿ ಆಗಮಿಸಿರುವ ಶುಭಾ ಅವರು ಸರಕಾರ 2014ರಲ್ಲಿ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿ ನಗರದ ವಿವಿಧೆಡೆ ಇದ್ದ ಸುಮಾರು 24 ಕಂಟೈನರ್‍ಗಳನ್ನು ತೆರವುಗೊಳಿಸಿದ್ದಾರೆ. ಆದರೆ ಜನ ಮಾತ್ರ ಕಂಟೈನರ್ ಇದ್ದ ಜಾಗದಲ್ಲೇ ಕಸ ಹಾಕುತ್ತಿದ್ದಾರೆ ಪರಿಣಾಮ ಸ್ವಚ್ಛತೆಗೆ ಧಕ್ಕೆ ಬಂದಿದೆ.[ಸರ್ಕಾರಿ ಶಾಲೆಯಂದ್ರೆ ಹಾಕತ್ತೂರು ಶಾಲೆಯಂತಿರಬೇಕು]

Madikeri garbage problem

ಇದೆಲ್ಲದರ ನಡುವೆ ಕೆಲವು ವಾರ್ಡ್ ಗಳಿಗೆ ಕಸದ ತೊಟ್ಟಿಗಳನ್ನು ವಿತರಿಸುವ ಕಾರ್ಯ ನಡೆಯುತ್ತಿದ್ದು, ಜನ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಶುಚಿತ್ವಕ್ಕೆ ಆದ್ಯತೆ ನೀಡಿದರೆ ಮಡಿಕೇರಿ ಮಡಿಯಾಗಿರಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಆಸಕ್ತಿ ವಹಿಸುವುದು ಅಗತ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madikeri is one of the natural city in karnataka. But noway days have garbage problem is started in the city.
Please Wait while comments are loading...