Kodagu Rain: ಕೊಡಗು ಜಿಲ್ಲೆಯ ಹಲವು ಕಡೆ ಧಾರಾಕಾರ ಮಳೆ!

ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಉತ್ತಮ ಮಳೆಯಾಗುವ ಸೂಚನೆ ಸಿಕ್ಕಿದೆ. ಕಳೆದ ಬುಧವಾರದಿಂದ ರಾಜ್ಯದ ಒಂದಿಲ್ಲೊಂದು ಕಡೆ ಮಳೆಯಾಗುತ್ತಿದೆ. ಸೋಮವಾರ ಕೂಡ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದೆ.

ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತದೆ ಎನ್ನುವ ಮುನ್ಸೂಚನೆ ನಡುವೆಯೇ ಹಲವು ಕಡೆಗಳಲ್ಲಿ ಬೇಸಿಗೆಯಲ್ಲೇ ಮಳೆ ಆರಂಭವಾಗಿದೆ. ಬುಧವಾರದಿಂದ ಕೊಡಗು, ಚಿಕ್ಕಮಗಳೂರು, ಮೈಸೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಳೆಯಾಗಿದೆ.

Kodagu Rain Many Places in Kodagu District Experienced Heavy Rain

ಸೋಮವಾರ ಸಂಜೆ ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ವಿರಾಜಪೇಟೆ ಬಳಿಯಿರುವ ಅರಾಜಪಟ್ಟು ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ ಎಂದು @coorgthekashmir ಎಕ್ಸ್ ಖಾತೆಯಲ್ಲಿ ಮಳೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಮಳೆ ಹಂಚಿಕೊಂಡು ಖಷಿ ಪಟ್ಟ ನೆಟ್ಟಿಗರು

ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗುತ್ತಿರುವ ವಿಡಿಯೋಗಳನ್ನು ಹಂಚಿಕೊಂಡಿರುವ ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಸಿದ್ಧಾಪುರದಲ್ಲಿ ಕೂಡ ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ.

ಪೆರಿಯಾಪಟ್ಟಣ, ಕುಶಾಲನಗರದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು ಸೋಮವಾರ ರಾತ್ರಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಭಾನುವಾರ ಬೀದರ್, ಚಿಕ್ಕಮಗಳೂರಿನಲ್ಲಿ ಮಳೆ

ಭಾನುವಾರ ಬೀದರ್ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಬೀದರ್ ಮಾತ್ರವಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಕೂಡ ಮಳೆ ಸುರಿದಿದೆ.

ಬೀದರ್ ನಗರದಲ್ಲಿ ಭಾನುವಾರ 62 ಮಿ.ಮೀ ಮಳೆಯಾಗಿದೆ. ಬಿಸಿಲ ಬೇಗೆಗೆ ಕಾದು ಕೆಂಡದಂತಾಗಿದ್ದ ಭೂಮಿಗೆ ಮಳೆ ತಂಪೆರದಿದೆ. ಮಲಚಾಪುರ 45 ಮಿ.ಮೀ, ಆನದೂರು 37 ಮಿ.ಮೀ, ಬೀದರ್ ದಕ್ಷಿಣ 36.5 ಮಿ.ಮೀ, ಬಾಗಧಾಳ 34.5 ಮಿ.ಮೀ, ಮೀಂಕೆರಾ 25.5 ಮಿ.ಮೀ, ಔರಾದ 21 ಮಿ.ಮೀ, ಕಪಾಲಪುರದಲ್ಲಿ 24 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಕೆಲವು ದಿನಗಳಲ್ಲೆ ಬೆಂಗಳೂರಿನಲ್ಲೂ ಮಳೆ?

ಹವಾಮಾನ ಇಲಾಖೆ ವರದಿಗಳ ಪ್ರಕಾರ ಮಾರ್ಚ್ ಅಂತ್ಯದ ವೇಳೆಗೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ ಮೊದಲನೇ ವಾರ ಅಥವಾ ಎರಡನೇ ವಾರದ ವೇಳೆಗೆ ಬೆಂಗಳೂರಿನಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಒಂದು ವಾರ ನಗರದಲ್ಲಿ ಭಾರಿ ಮಳೆಯಾದರೂ ಸಾಕು ನಗರದ ನೀರಿನ ಬವಣೆ ಎಷ್ಟೋ ಕಡಿಮೆಯಾಗಲಿದೆ. ದಾಖಲೆಯ ತಾಪಮಾನದಿಂದ ಕಂಗೆಟ್ಟಿರುವ ರಾಜಧಾನಿ ಜನತೆಗೆ ಮೊದಲು ಮಳೆಯಾದರೆ ಸಾಕು ಎನ್ನುವಂತಾಗಿದೆ. ಆದರೂ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸೂಚನೆ ಇದ್ದು, ಉತ್ತಮ ಮುಂಗಾರು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+