ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ ಮಳೆಯಲ್ಲಿ ಸಿಲುಕಿದವರ ಕರುಣಾಜನಕ ಕಥೆ

|
Google Oneindia Kannada News

ಕೊಡಗು, ಆಗಸ್ಟ್ 17: ನೆರೆಯ ಕೇರಳ ರಾಜ್ಯದಂತೆಯೇ ನೈಸರ್ಗಿಕ ಸೊಗಡಿನ, ಪ್ರವಾಸಿಗರನ್ನು ಸದಾ ಸೆಳೆಯುವ ಕೊಡಗು ಜಿಲ್ಲೆ ಕೂಡ ಮಳೆಯ ಅಬ್ಬರದಿಂದ ತತ್ತರಿಸಿದೆ.

ಕಳೆದ ಒಂದು ವಾರದಿಂದ ಸುರಿಯುತ್ತಲೇ ಇರುವ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಒಂದೆಡೆ ಬಿಟ್ಟೂ ಬಿಡದೆ ಅಬ್ಬರಿಸುತ್ತಿರುವ ಮಳೆ, ಇನ್ನೊಂದೆಡೆ ಇದ್ದಕ್ಕಿದ್ದಂತೆ ಕುಸಿಯುವ ಭೂಮಿ. ಇವುಗಳ ಜತೆಗೆ ಹಾನಿಯಾದ ರಸ್ತೆಗಳು, ಸಾರಿಗೆ, ವಿದ್ಯುತ್ ಸಂಪರ್ಕಗಳ ಕಡಿತ, ಆಹಾರದ ಕೊರತೆ, ಕೆಲಸ-ಕೂಲಿಯ ನಷ್ಟ. ಹೀಗೆ ಒಂದೆರಡು ಕೊಡಗಿನ ಜನರನ್ನು ಕಾಡುತ್ತಿರುವುದು ಒಂದೆರಡು ಸಮಸ್ಯೆಯಲ್ಲ.

ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ

ವಿಪರೀತ ಮಳೆ ಮತ್ತು ಭೂಕುಸಿತದ ಕಾರಣ ಅನೇಕ ಕಡೆ ಊರಿಗೆ ಊರೇ ಖಾಲಿಯಾಗಿವೆ. ರಕ್ಷಣಾ ಪಡೆಗಳು ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಲ್ಲಿ ನಿರ್ಮಿಸಿರುವ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ.

ಇನ್ನು ಅನೇಕರು ಜೀವ ಭಯದಿಂದಾಗಿ ಮನೆಯಲ್ಲಿನ ಗಂಟುಮೂಟೆಗಳನ್ನು ಕಟ್ಟಿಕೊಂಡು ಶಿಬಿರಗಳತ್ತ ದೌಡಾಯಿಸುತ್ತಿದ್ದಾರೆ.

kodagu flood people shifting their homes to relief camps

ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದ ಸಮೀಪ, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮತ್ತು ಮೈತ್ರೇಯಿ ಹಾಲ್‌ಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ತಮ್ಮ ಮನೆಗಳನ್ನು ತೊರೆದು ಬಂದ ಇನ್ನೂರಕ್ಕೂ ಹೆಚ್ಚು ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

'ಭೂಮಿ ಕುಸಿದು ಭಯ ಉಂಟಾದ ಬಳಿಕ ನಾವು ಮಕ್ಕಂದೂರು ತೊರೆಯಲು ನಿರ್ಧರಿದೆವು. ನಮ್ಮ ಹಳ್ಳಿಗೆ ಒಂದು ವಾರದಿಂದ ರಸ್ತೆ ಸಂಪರ್ಕವೇ ಇಲ್ಲ. ಹೀಗಾಗಿ ಮನೆಯಲ್ಲಿದ್ದ ಸಾಮಾನುಗಳನ್ನು ಸಾಧ್ಯವಾದಷ್ಟು ಚೀಲಕ್ಕೆ ತುಂಬಿ ಕಾಡಿನೊಳಗೆ ಒಂದು ಗಂಟೆಗೂ ಹೆಚ್ಚು ಸಮಯ ಹೊತ್ತುಕೊಂಡು ನಡೆದೆವು. ಮಕ್ಕಂದೂರು ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಶಿಬಿರ ತಲುಪಿದೆವು.

ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ

ಅಲ್ಲಿ ಕೆಲವು ಗಂಟೆ ಇದ್ದೆವು. ಆದರೆ, ಪೊಲೀಸರು ನಾವು ಮತ್ತೆ ಹೊರಡಬೇಕು ಎಂದು ಸೂಚಿಸಿದರು. ಈ ಬಾರಿ ಮಡಿಕೇರಿಯತ್ತ ಹೊರಟೆವು' ಎಂದು ಗುರುವಾರ ಮಳೆಗೆ ಕೊಚ್ಚಿಹೋದ ಮಕ್ಕಂದೂರು ಗ್ರಾಮದ 35 ವರ್ಷದ ಕಾವೇರಿ ವಿವರಿಸಿದರು.

ಮತ್ತೆ ಹೊರಟ ಕಾವೇರಿ, ಆಕೆಯ ಪತಿ ಸುಬ್ರಮಣಿ ಮತ್ತು ಮೂವರು ಹೆಣ್ಣಮಕ್ಕಳಾದ ಪ್ರೇಮಕಲಾ, ಮನಸ್ವಿ ಹಾಗೂ ಚಂದನ ಜತೆ ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪರಿಹಾರ ಶಿಬಿರ ತಲುಪುವಾಗ ಗುರುವಾರ ರಾತ್ರಿಯಾಗಿತ್ತು.

'ನಮ್ಮ ಹಳ್ಳಿ ಕೊಚ್ಚಿಕೊಂಡು ಹೋಯಿತು. ನಮ್ಮ ಚೀಲಗಳನ್ನು ತುಂಬಿಕೊಂಡು ಮನೆಯಿಂದ ಹೊರಡುವಾಗ ನಾವು ಬದುಕುಳಿಯುತ್ತೇವೆಯೇ ಎಂಬ ಖಾತರಿಯೇ ಇರಲಿಲ್ಲ' ಎನ್ನುವಾಗ ಕಾವೇರಿ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು.

ಕೆಆರ್‌ಎಸ್‌ ನೀರು: ಶ್ರೀರಂಗಪಟ್ಟಣದಲ್ಲಿ 500 ಎಕರೆ ಕೃಷಿ ಭೂಮಿ ನಾಶಕೆಆರ್‌ಎಸ್‌ ನೀರು: ಶ್ರೀರಂಗಪಟ್ಟಣದಲ್ಲಿ 500 ಎಕರೆ ಕೃಷಿ ಭೂಮಿ ನಾಶ

ಮಕ್ಕಂದೂರು, ಉದಯಗಿರಿ, ಎಮ್ಮೆತಾಳು, ಕೋಟಗಿರಿ, ತಂತಿಪಾಲ ಮುಂತಾದ ಗ್ರಾಮಗಳಿಂದ ಜನರು ತಮಗೆ ಸಾಧ್ಯವಾದಷ್ಟು ಸಾಮಗ್ರಿಗಳನ್ನು ಹೊತ್ತುಕೊಂಡು ಮಡಿಕೇರಿಯಲ್ಲಿರುವ ಪರಿಹಾರ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ.

ಆದರೆ, ಮಕ್ಕಂದೂರು, ಹಾಲೇರಿ, ದೊಡ್ಡಾನೆಕುಂದಿ ಬೆಟ್ಟ ಮತ್ತು ಕಟಕೇರಿಗಳಲ್ಲಿ ನೂರಾರು ಜನರು ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭೂಕುಸಿತದಿಂದಾಗಿ ಅನೇಕ ಕಡೆ ರಸ್ತೆ ಸಂಪರ್ಕ ಕಡಿದುಹೋಗಿವೆ.

ಮಕ್ಕಂದೂರುವಿನ ಶಾಲೆಯಲ್ಲಿ ನಿರ್ಮಿಸಲಾಗಿದ್ದ ಪರಿಹಾರ ಕೇಂದ್ರದಿಂದಲೂ ಜನರನ್ನು ಮಡಿಕೇರಿಯತ್ತ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ 41.5 ಮಿ.ಮೀಯಷ್ಟು ವಾಡಿಕೆ ಮಳೆಯಾಗುತ್ತಿದ್ದು, ಈ ಬಾರಿ 146.4 ಮಿ.ಮೀ. ಮಳೆ ಸುರಿದಿದೆ. ಅಂದರೆ ವಾಡಿಕೆಗಿಂತ 253% ರಷ್ಟು ಅಧಿಕ ಮಳೆಯಾಗಿದೆ. ವಿರಾಜಪೇಟೆಯಲ್ಲಿ 115 ಮಿ.ಮೀ. ಮಳೆಯಾಗಿದೆ.

English summary
Rain and landlside in Kodagu made people life worsen. People from many villages are heading towards relief camps with their belongings by walking miles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X