ಸದಾನಂದ ಗೌಡರು ಕಿವಿಹಿಂಡಿದ ಮೇಲೆ ಕೊಡಗು ಬಿಜೆಪಿಯಲ್ಲಿ ಒಗ್ಗಟ್ಟಿನ ಬಲ!

Posted By: ಬಿ.ಎಂ.ಲವಕುಮಾರ್
Subscribe to Oneindia Kannada

ಮಡಿಕೇರಿ, ಸೆಪ್ಟೆಂಬರ್ 12: ಕೊಡಗಿನ ಬಿಜೆಪಿಯಲ್ಲಿದ್ದ ಆಂತರಿಕ ಬಿಕ್ಕಟ್ಟನ್ನೆಲ್ಲ ತಮ್ಮೊಳಗೇ ಶಮನಗೊಳಿಸಿಕೊಂಡು ಒಗ್ಗಟ್ಟಿನ ಮಂತ್ರವನ್ನು ಜಪಿಸಲು ಎಲ್ಲ ನಾಯಕರು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ಬಿಜೆಪಿ ಆಧಿಪತ್ಯ ಸಾಧಿಸಿದೆ. ಮಂದೆಯೂ ಅದನ್ನೇ ಮುಂದುವರೆಸಿಕೊಂಡು ಹೋಗಬೇಕಾದರೆ ಒಗ್ಗಟ್ಟಿನ ಮಂತ್ರ ಅನಿವಾರ್ಯವಾಗಿದೆ. ಈಗಾಗಲೇ ಬಿಜೆಪಿಯ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಒಕ್ಕೊರಲಿನಿಂದ ಎರಡು ಕ್ಷೇತ್ರಗಳಲ್ಲೂ ಹಾಲಿ ಶಾಸಕರನ್ನೇ ಮುಂದಿನ ವಿಧಾನಸಭಾ ಚುನಾವಣೆಗೂ ಅಭ್ಯರ್ಥಿಗಳನ್ನಾಗಿಸಲು ಒಪ್ಪಿಗೆ ನೀಡಿದ್ದಾರೆ.

ಮುಂದಿನ ಚುನಾವಣೆಗೆ ಕೊಡಗಿನಲ್ಲಿ ಹಾಲಿ ಶಾಸಕರೇ ಅಭ್ಯರ್ಥಿಗಳು!

ಈ ನಡುವೆ ಕಾಂಗ್ರೆಸ್ ಕೂಡ ತನ್ನಲ್ಲಿದ್ದ ಗೊಂದಲಗಳನ್ನು ಬದಿಗೆ ಸರಿಸಿಕೊಂಡು ಚುನಾವಣೆಗೆ ಸಜ್ಜಾಗುತ್ತಿದೆಯಾದರೂ ಟಿ.ಪಿ.ರಮೇಶ್ ಅವರಿಂದಾದ ಮುಜುಗರವನ್ನು ಸಹಿಸಿಕೊಂಡು ಮುನ್ನಡೆಯುವುದು ಕಷ್ಟವಾಗಿದೆ. ಜತೆಜತೆಯಲ್ಲೇ ಅಲ್ಲೂ ಟಿಕೇಟ್ ಗಾಗಿ ನಾಯಕರು ಮುಗಿಬೀಳುವ ಸಾಧ್ಯತೆ ಹೆಚ್ಚಿದೆ. ಎಲ್ಲರನ್ನು ಸಂಭಾಳಿಸಿ ಒಬ್ಬರನ್ನು ಆಯ್ಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಒಂದು ವೇಳೆ ಆಯ್ಕೆ ಮಾಡಿದರೂ ಅವರನ್ನು ಒಪ್ಪಿಕೊಂಡು ಕೆಲಸ ಮಾಡಲು ನಾಯಕರು ಮತ್ತು ಕಾರ್ಯಕರ್ತರು ಮುಂದಾಗಬೇಕಾಗುತ್ತದೆ. ಅದಕ್ಕೊಂದಿಷ್ಟು ಒಂದಷ್ಟು ಸಮಯವೂ ಬೇಕಾಗುತ್ತದೆ.

ಆದರೆ ಬಿಜೆಪಿ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿರುವುದರಿಂದ ಮುಂದಿನ ಚುನಾವಣೆಗೆ ಮತದಾರರ ಮುಂದೆ ಹೋಗುವುದು ಕಷ್ಟವಾಗಲಾರದು. ಅದಕ್ಕೆಂದೇ ಈಗಾಗಲೇ ಬಿಜೆಪಿಯಲ್ಲಿದ್ದ ಎಲ್ಲ ಗೊಂದಲಗಳನ್ನು ಬದಿಗೊತ್ತುವ ಪ್ರಯತ್ನ ಮಾಡಲಾಗುತ್ತಿದೆ.

ಫಲ ನೀಡಿತು ರಹಸ್ಯ ಸಭೆ!

ಫಲ ನೀಡಿತು ರಹಸ್ಯ ಸಭೆ!

ಕಳೆದ ಆರು ತಿಂಗಳಿನಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಬಿ.ಬಿ. ಭಾರತೀಶ್ ಆಯ್ಕೆ ಬಳಿಕ ಪಕ್ಷದೊಳಗೆ ಒಂದಷ್ಟು ಅಸಮಾಧಾನಗಳು ಹೊಗೆಯಾಡುತ್ತಿದ್ದವು. ಹೀಗಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಸಮ್ಮುಖ ಎಲ್ಲ ನಾಯಕರನ್ನು ಒಂದೆಡೆ ಸೇರಿಸಿ ರಹಸ್ಯ ಸಮಾಲೋಚನಾ ಸಭೆಯನ್ನು ಇತ್ತೀಚೆಗೆ ನಡೆಸಲಾಗಿದೆ.

ಭಿನ್ನಾಭಿಪ್ರಾಯವಿಲ್ಲ

ಭಿನ್ನಾಭಿಪ್ರಾಯವಿಲ್ಲ

ಈ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಸೇರಿದಂತೆ ಹಲವರು ಪಾಲ್ಗೊಂಡು ಇದುವರೆಗೆ ಇದ್ದ ಎಲ್ಲ ಗೊಂದಲಗಳನ್ನು ಬದಿಗೊತ್ತಿ, ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಒಗ್ಗಟ್ಟು ಅವಶ್ಯವಾಗಿದೆ. ಆದ್ದರಿಂದ ತಮ್ಮೊಳಗಿನ ಎಲ್ಲ ಭಿನ್ನಾಭಿಪ್ರಾಯ ಮರೆತು ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಸ್ತಾರಕ್ ಪ್ರಭಾವ

ವಿಸ್ತಾರಕ್ ಪ್ರಭಾವ

ಈಗಾಗಲೇ ಬಿಜೆಪಿ ವಿಸ್ತಾರಕ್ ಯೋಜನೆಯಿಂದ ಲಭಿಸಿರುವ ಲಾಭ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನತೆಗೆ ತಲುಪಿಸುವಲ್ಲಿ ಕಾರ್ಯತರ್ಕರ ಮನೋಭೂಮಿಕೆ ಬಗ್ಗೆ ಗಂಭೀರ ಚರ್ಚಿಸಲಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ಜನರ ಮುಂದೆ ತೆರಳಿ ಮತ ಕೇಳುವಂತೆ ಸದಾನಂದಗೌಡ ಹೇಳಿದ್ದಾರೆ ಎನ್ನಲಾಗಿದೆ.

ಎರಡು ಸ್ಥಾನ ಉಳಿಸಿಕೊಲ್ಳುವ ಯತ್ನ

ಎರಡು ಸ್ಥಾನ ಉಳಿಸಿಕೊಲ್ಳುವ ಯತ್ನ

ಒಟ್ಟಾರೆ ಚುನಾವಣೆ ಬರುತ್ತಿದ್ದಂತೆ ಕೊಡಗಿನ ಬಿಜೆಪಿ ತನ್ನೆಲ್ಲ ಗೊಂದಲಗಳನ್ನು ಕೊಡವಿಕೊಂಡು ಮೇಲೆದ್ದು ನಿಂತಿದೆ. ಅಷ್ಟೇ ಅಲ್ಲ ತನ್ನೆರಡು ಸ್ಥಾನಗಳನ್ನು ಉಳಿಸಿಕೊಳ್ಳಲು ಬೇಕಾದ ತಂತ್ರಗಳನ್ನು ಮಾಡಲು ಈಗಿನಿಂದಲೇ ಮುಂದಾಗಿರುವುದು ಗೋಚರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is no differences in Kodagu BJP leaders. The leaders have decided to win Karnataka assembly elections 2018 with unity.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ