ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಮಾಜಿ ಸಚಿವ ಬಿ. ಎ. ಜೀವಿಜಯ

|
Google Oneindia Kannada News

ಮಡಿಕೇರಿ, ಡಿಸೆಂಬರ್ 09 : ಮಾಜಿ ಸಚಿವ, ಜೆಡಿಎಸ್ ನಾಯಕ ಬಿ. ಎ. ಜೀವಿಜಯ ಪಕ್ಷ ತೊರೆದಿದ್ದಾರೆ. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಅವರು ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದರು.

ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಬಿ. ಎ. ಜೀವಿಜಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರ ಜೊತೆ ಅಪಾರ ಬೆಂಬಲಿಗರು ಸಹ ಪಕ್ಷ ಸೇರಿದರು.

ಜೆಡಿಎಸ್ ತೊರೆದ ಮತ್ತೊಬ್ಬ ನಾಯಕ; ಡಿ.10ಕ್ಕೆ ಬಿಜೆಪಿ ಸೇರ್ಪಡೆ! ಜೆಡಿಎಸ್ ತೊರೆದ ಮತ್ತೊಬ್ಬ ನಾಯಕ; ಡಿ.10ಕ್ಕೆ ಬಿಜೆಪಿ ಸೇರ್ಪಡೆ!

2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ ಕೊಡಗು ಕಾಂಗ್ರೆಸ್‌ನಲ್ಲಿ ಅಸಮಾಧಾನ ಉಂಟಾಗಿತ್ತು. ಮಾಜಿ ಸಚಿವ ಬಿ. ಎ. ಜೀವಿಜಯ ಪಕ್ಷ ತೊರೆಯುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದರು.

ಜೆಡಿಎಸ್‌ನಲ್ಲಿ ನಾಯಕತ್ವ ಬದಲಾವಣೆ; ಕುಮಾರಸ್ವಾಮಿ ರಾಜೀನಾಮೆ? ಜೆಡಿಎಸ್‌ನಲ್ಲಿ ನಾಯಕತ್ವ ಬದಲಾವಣೆ; ಕುಮಾರಸ್ವಾಮಿ ರಾಜೀನಾಮೆ?

ಮೈಸೂರು-ಕೊಡಗು ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ. ಎಚ್. ವಿಜಯಶಂಕರ್ ಸಹ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸೋಲು ಕಂಡಿದ್ದರು.

ಜೆಡಿಎಸ್ ಪಕ್ಷ ಬಿಡುವ ಕುರಿತು ದೇವೇಗೌಡರ ಸ್ಪಷ್ಟನೆ ಜೆಡಿಎಸ್ ಪಕ್ಷ ಬಿಡುವ ಕುರಿತು ದೇವೇಗೌಡರ ಸ್ಪಷ್ಟನೆ

ಜಿಲ್ಲಾ ಘಟಕದ ಅಧ್ಯಕ್ಷರ ನೇಮಕ

ಜಿಲ್ಲಾ ಘಟಕದ ಅಧ್ಯಕ್ಷರ ನೇಮಕ

ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಹಿಂದೆ ಕೆ. ಎಂ. ಗಣೇಶ್ ಅವರನ್ನು ಜೆಡಿಎಸ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಇದಕ್ಕೆ ಬಿ. ಎ. ಜೀವಿಜಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗಲೇ ಪಕ್ಷ ತೊರೆಯುವುದಾಗಿ ಹೇಳಿದ್ದರು.

ಪಕ್ಷದ ನಾಯಕರ ವಿರುದ್ದ ಆಕ್ರೋಶ

ಪಕ್ಷದ ನಾಯಕರ ವಿರುದ್ದ ಆಕ್ರೋಶ

2018ರ ವಿಧಾನಸಭೆ ಚುನಾವಣೆಯಲ್ಲಿ ಕೆ. ಎಂ. ಗಣೇಶ್ ಬಿ. ಎ. ಜೀವಿಜಯ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಜೀವಿಜಯ ಅವರ ಗಮನಕ್ಕೆ ತರದೇ ಪಕ್ಷದ ನಾಯಕರು ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು ಎಂಬುದು ಅಸಮಾಧಾನಕ್ಕೆ ಕಾರಣವಾಗಿತ್ತು.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

2018ರ ಚುನಾವಣೆ ಸೋಲು

2018ರ ಚುನಾವಣೆ ಸೋಲು

2018ರ ಚುನಾವಣೆಗೆ ಬಿ. ಎ. ಜೀವಿಜಯ ಮಡಿಕೇರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 54,616 ಮತಗಳನ್ನು ಪಡೆದು ಬಿಜೆಪಿಯ ಅಪ್ಪಚ್ಚು ರಂಜನ್ ವಿರುದ್ಧ ಸೋಲು ಕಂಡಿದ್ದರು.

Recommended Video

ಸಿದ್ದರಾಮಯ್ಯಗೆ ತೀವ್ರ ಮುಜುಗರ ತಂದೊಡ್ಡಿದ ಅವರು ಬರೆದಿದ್ದ 7ವರ್ಷದ ಹಿಂದಿನ ಆ ಪತ್ರ | Oneindia Kannada
ಕೆ. ಎಂ. ಗಣೇಶ್ ಆರೋಪ

ಕೆ. ಎಂ. ಗಣೇಶ್ ಆರೋಪ

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಎಂ. ಗಣೇಶ್ ಜೀವಿಜಯ ವಿರುದ್ದ ಆರೋಪ ಮಾಡಿದ್ದರು. "ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಬೆಂಬಲ ನೀಡಿದ್ದಾರೆ. ಇದಕ್ಕೆ ಜೀವಿಜಯ ಕಾರಣ" ಎಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು.

English summary
Former minister and Kodagu district JD(S) rebellion leader B.A. Jeevijaya quit the party. He joined Congress in the presence of KPCC president D. K. Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X