Election flashback: 'ದೈತ್ಯ ಸಂಹಾರಿ' ಜನತಾ ಪರಿವಾರದ ಜೀವಿಜಯ

Posted By:
Subscribe to Oneindia Kannada

1983ರಲ್ಲಿ ಹಾಲಿ ಮುಖ್ಯಮಂತ್ರಿಗಳನ್ನು ಸೋಲಿಸಿದ ಅಭ್ಯರ್ಥಿ 'ದೈತ್ಯ ಸಂಹಾರಿ' ಬಿ.ಎ ಜೀವಿಜಯ ಅವರು ಈ ಬಾರಿ ಮಡಿಕೇರಿ ಕ್ಷೇತ್ರದಿಂದ ಜಾತ್ಯಾತೀತ ಜನತಾದಳ ಟಿಕೆಟ್ ಪಡೆದು ಸ್ಪರ್ಧೆಗಿಳಿಯುತ್ತಿದ್ದಾರೆ.

ಅಂದಿನ ಸಿಎಂ ಆರ್. ಗುಂಡೂರಾವ್ ಮತ್ತು ಬಿ.ಎ. ಜೀವಿಜಯ ನಡುವಿನ ರಾಜಕೀಯ ಕದನ ಆ ಕಾಲಕ್ಕೆ ರೋಚಕವಾಗಿತ್ತು. ಅಂದಿನ ಕಾಲದಲ್ಲಿ ಎಲ್ಲೆಡೆ ಕಾಂಗ್ರೆಸ್ ತನ್ನ ಪ್ರಭುತ್ವ ಹೊಂದಿತ್ತು. ಜನತಾ ಪರಿವಾರದಿಂದ ಸ್ಪರ್ಧಿಸಿದ್ದ ಜೀವಿಜಯ ಅವರು ಅವರಿಗೆ ಗೆಲುವು ತಂದು ಕೊಟ್ಟಿದ್ದು ರೈತ ಸಮೂಹ.

ಕ್ಷೇತ್ರ ಪರಿಚಯ: ಮಡಿಕೇರಿಯಲ್ಲಿ ಒಡೆಯುವುದೇ ಬಿಜೆಪಿ ಭದ್ರಕೋಟೆ?

1972 ಹಾಗೂ 78ರಲ್ಲಿ ಸತತವಾಗಿ ಗೆಲುವು ದಾಖಲಿಸಿದ್ದ ಕುಶಾಲನಗರ ಮೂಲದ ಗುಂಡೂರಾಯರು ಕೂಡಾ ಪ್ರಭಾವಿ ನಾಯಕರಾಗಿ, ಸಿಎಂ ಆಗಿ ಬೆಳೆದಿದ್ದು ಕೂಡಾ ಕುತೂಹಲಕಾರಿ. ಡಿ. ದೇವರಾಜ ಅರಸು ಅವರನ್ನು ಹಿಂದಿಕ್ಕಿ ಸಿಎಂ ಸ್ಥಾನಕ್ಕೇರಿದ್ದ ಗುಂಡೂರಾಯರಿಗೆ 1983ರಲ್ಲಿ ಸೋಲಿನ ಕಹಿಯುಣಿಸಿದ್ದು ಜೀವಿಜಯ.

Karnataka Election Flashback : Giant killer former minister B.A Jivijaya

ರೈತರ ಮೇಲಿನ ದೌರ್ಜನ್ಯ, ಆಂತರಿಕ ಭಿನ್ನಮತ ಹೀಗೆ ಕೆಲ ಕಾರಣಗಳು ಗುಂಡೂರಾಯರ ವಿರುದ್ಧವಾಗಿ ನಿಂತು, ಜೀವಿಜಯ ಅವರ ಕೈಗೆ ಗೆಲುವಿನ ಕಾಣಿಕೆ ನೀಡಿತ್ತು.

ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

1983ರ ಚುನಾವಣೆ ಫಲಿತಾಂಶ:
* ಜನತಾ ಪರಿವಾರದ ಬಿ.ಎ ಜೀವಿಜಯ -31,544 ಮತಗಳು (52.66% ಮತ ಪಾಲು)
* ಕಾಂಗ್ರೆಸ್ಸಿನ ಗುಂಡೂರಾವ್ -26,162 ಮತಗಳು (43.67% ಮತ ಪಾಲು)

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಹಿಂದೆ ಇದ್ದ ಸೋಮವಾರ ಪೇಟೆ 2008ರ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ರದ್ದಾಯಿತು. ಇಲ್ಲಿಂದಲೇ ಗೆದ್ದು ಆರ್. ಗುಂಡೂರಾವ್ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಆದರೆ ಆ ಕ್ಷೇತ್ರವೇ ಇವತ್ತು ನೆನಪು ಮಾತ್ರ.

1983ರಲ್ಲಿ ಗೆಲುವು ಸಾಧಿಸಿದ ಬಳಿಕ ಸತತ 9 ಬಾರಿ ಸ್ಪರ್ಧಿಸಿರುವ ಜೀವಿಜಯ ಅವರು ಈಗ 10ನೇ ಬಾರಿಗೆ ಕಣಕ್ಕಿಳಿದಿದ್ದಾರೆ. 1983, 85, 2004ರಲ್ಲಿ ಗೆಲುವು ಸಾಧಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veteran B A Jivijaya of the JD(S), who is contesting for the record tenth time. Jivijaya emerged a giant killer by defeating the then chief minister R Gundu Rao of the Congress in 1983.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ