ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಒಳ ಒಪ್ಪಂದ: ಪರಮೇಶ್ವರ್

Posted By:
Subscribe to Oneindia Kannada

ಮಡಿಕೇರಿ, ಜನವರಿ 09: ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಸುದ್ದಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಹೇಳಿದರು.

ಮಡಿಕೇರಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ, ಕುಮಾರಸ್ವಾಮಿ ಅವರನ್ನು ನಂಬುವಂತಿಲ್ಲ ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ-ಪರಮೇಶ್ವರ್ ನಡುವೆ ಭಿನ್ನಮತ ಸ್ಫೋಟ!

ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ನಡುವೆ ವಿರಸ ಇದೆ ಎನ್ನುವ ಗಾಳಿಸುದ್ದಿಗೆ ತೆರೆ ಎಳೆದ ಪರಮೇಶ್ವರ್ ಅವರು 'ನಾನು ಸಿದ್ದರಾಮಯ್ಯ ಅವರು 7 ವರ್ಷಗಳಿಂದ ಆತ್ಮೀಯ ಗೆಳೆಯರು, ನಮ್ಮಿಬ್ಬರ ಅನುಬಂಧ, ನಮ್ಮ ಸಾಧನೆ ನೋಡಿ ಸಹಿಸದವರು ನಮ್ಮ ಸ್ನೇಹಕ್ಕೆ ಬೆಂಕಿ ಇಡುವ ಕಾರ್ಯ ಮಾಡುತ್ತಿದ್ದಾರೆ' ಎಂದರು.

JDS-BJP both trying to defeat congress: parameshwar

ಉತ್ತರ ಪ್ರದೇಶ ಮುಖ್ಯಮಂತ್ರಿ ಅವರ ಮೇಲೆ ಹರಿಹಾಯ್ದ ಪರಮೇಶ್ವರ್ ಅವರು ಯೋಗಿ ಆದಿತ್ಯನಾಥ ಅವರು ಸಂವಿಧಾನ ವಿರೋಧಿ, ಬಿಜೆಪಿ ಎಷ್ಟೇ ಅಡ್ಡಗಾಲು ಹಾಕಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KPCC president Parameshwar said BJP and JDS both parties trying to defeat congress. He also said 'me and Siddaramaiah are good friends from 7 years, some people simply creating roamers about our friendship.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ