'ಹಿಂದು ಯುವತಿಯನ್ನು ಮುಟ್ಟಿದರೆ...' ಅನಂತ್ ಹೊಸ ವಿವಾದ!
Recommended Video

ಮಡಿಕೇರಿ, ಜನವರಿ 28: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವುದರಲ್ಲೇ ಸಿದ್ದಿಯಾಗುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಇದೀಗ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾನುವಾರ ಮಾತನಾಡುತ್ತಿದ್ದ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ, "ನಾವು ನಮ್ಮ ಸಮಾಜದ ಆದ್ಯತೆಯ ಬಗ್ಗೆ ಯೋಚಿಸಬೇಕು. ಜಾತಿಯ ಬಗ್ಗೆ ಯೋಚಿಸಬೇಕು. ಅಕಸ್ಮಾತ್ ಒಬ್ಬ ಹಿಂದು ಮಹಿಳೆಯನ್ನು ಯಾರಾದರೂ ಮುಟ್ಟಿದರೆ... ಮುಟ್ಟಿದ ಕೈ ಅಸ್ತಿತ್ವದಲ್ಲೇ ಇರಬಾರದು..." ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಹಾಗೇ ಮುಂದುವರಿದ ಹೆಗಡೆ, "ತಾಜ್ ಮಹಲ್ ಅನ್ನು ಕಟ್ಟಿದ್ದು ಮುಸ್ಲಿಮರಲ್ಲ. ಇತಿಹಾಸ ಅದನ್ನು ಸ್ಪಷ್ಟಪಡಿಸುತ್ತದೆ. ತನ್ನ ಆತ್ಮಕಥೆಯಲ್ಲಿ ಷಹಝಾನ್, ಈ ಅರಮನೆಯನ್ನು ತಾನು ರಾಜಾ ಜಯಸಿಂಹನಿಂದ ಪಡೆದೆ ಎಂದು ಬರೆದಿದ್ದಾನೆ. ಇದು ರಾಜ ಪರಮತೀರ್ಥ ನಿರ್ಮಿಸಿದ ಶಿವ ದೇವಾಲಯ. ತೇಜೋ ಮಹಾಲಯ ಎಂದು ಅದನ್ನು ಕರೆಯಲಾಗುತ್ತಿತ್ತು. ಆದರೆ ತೇಜೋ ಮಹಾಲಯ ತಾಜ್ ಮಹಲ್ ಆಗಿದೆ. ನಾವು ಹಗೇ ನಿದ್ರಿಸುತ್ತಿದ್ದರೆ ನಮ್ಮ ಮನೆಗಳನ್ನೂ ಮಂಜಿಲ್ ಎಂದು ಕರೆಯಲಾಗುತ್ತದೆ! ರಾಮ ಜಹನ್ ಪನಾ ಆದರೆ ಸೀತೆ ಬೀಬಿ ಆಗುತ್ತಾಳೆ" ಎಂದು ಅವರು ಹೇಳಿದ್ದಾರೆ.












Click it and Unblock the Notifications