ಗ್ರಾ.ಪಂ ಚುನಾವಣೆ: ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ ಅಭ್ಯರ್ಥಿ

ಮಡಿಕೇರಿ, ಡಿಸೆಂಬರ್ 30: ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಡಿ.30 ರಂದು ಪ್ರಕಟವಾಗಿದ್ದು, ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತಿಯ ಎಮ್ಮೆಗುಂಡಿ ಕ್ಷೇತ್ರದಲ್ಲಿ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿದ್ದಾರೆ.

ಪಾಲಿಬೆಟ್ಟ ಎಮ್ಮೆಗುಂಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪುಲಿಯಂಡ ಬೋಪಣ್ಣ, ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಸುದ್ದಿಯಾಗಿದ್ದರು. ಬುಧವಾರ ವಿರಾಜಪೇಟೆಯಲ್ಲಿ ಮತ ಎಣಿಕೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಬೋಪಣ್ಣ ಗೆಲುವಿನ ನಗೆ ಬೀರಿದ್ದಾರೆ.

ಹಿಂದಿನಂತೆ ಈ ಬಾರಿಯೂ ಚುನಾವಣೆಗೆ ನಿಲ್ಲುವ ತಯಾರಿ ನಡೆಸುತ್ತಿರುವಾಗ ಇವರ ವಿರುದ್ಧದ ದಲಿತ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಜಾಮೀನಿಗಾಗಿ ಪ್ರಯತ್ನಿಸಿದರೂ ಜಾಮೀನು ಇನ್ನೂ ಸಿಕ್ಕಿರಲಿಲ್ಲ. ನಂತರ ನ್ಯಾಯಾಲಯದಿಂದ ಒಪ್ಪಿಗೆ ಪಡೆದು ಜೈಲಿನಿಂದಲೇ ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.

Gram Panchayat Election Result 2020: Candidate Who Contest From Jail And Wins In Kodagu

ಗ್ರಾ.ಪಂ ಚುನಾವಣೆಗೆ ಕೆಲವೇ ಗಂಟೆಗಳಿರುವಾಗ ನ್ಯಾಯಾಲಯದಿಂದ ಬೇಲ್ ಪಡೆದು, ಜನರ ಬಳಿ ತೆರಳಿ ಮತಯಾಚಿಸಿದ್ದರು. ಪಾಲಿಬೆಟ್ಟ್ ಗ್ರಾಮ ಪಂಚಾಯತಿಯಲ್ಲಿ ಸಾಕಷ್ಟು ಅಭಿವೃದ್ಧಿಗೆ ಕೆಲಸ ಮಾಡಿರುವ ಬೋಪಣ್ಣ ಅವರು, ರಾಷ್ಟ್ರ ಮಟ್ಟದಲ್ಲಿ ಗ್ರಾಮ ಪಂಚಾಯತಿಗೆ ಪ್ರಶಸ್ತಿ ಬರಲು ಶ್ರಮಿಸಿದ್ದರು. ಹೀಗಾಗಿ ಪುಲಿಯಂಡ ಬೋಪಣ್ಣ ಬೆಂಬಲಕ್ಕೆ ಮತದಾರರು ನಿಂತಿದ್ದಾರೆ ಎಂದು ಹೇಳಬಹುದು.

ಬೋಪಣ್ಣ ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಯೂಸುಫ್ ಅವರನ್ನು 66 ಮತಗಳಿಂದ ಸೋಲಿಸಿ ಆಯ್ಕೆ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+