ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳ ಸರ್ಕಾರದ ಆ್ಯಪ್ ಬಳಕೆ ಮೂಲಕ ನಕಲಿ ಕೋವಿಡ್ ವರದಿ ಪತ್ತೆಗೆ ಕೊಡಗು ಜಿಲ್ಲಾಡಳಿತ ಕ್ರಮ

By Coovercolly Indresh
|
Google Oneindia Kannada News

ಮಡಿಕೇರಿ, ಮಾರ್ಚ್ 30: ಕೊರೊನಾ 2ನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರರಾಜ್ಯಗಳಿಂದ ಬರುವವರಿಗೆ 72 ಗಂಟೆಗಳ ಒಳಗಿನ ಕೋವಿಡ್ ನೆಗೆಟಿವ್‌ ವರದಿಯನ್ನು ಕಡ್ಡಾಯ ಮಾಡಿದೆ.

ಆದರೆ, ನೆರೆಯ ಕೇರಳದಿಂದ ಬರುವವರು ವರದಿ ನೀಡುವುದನ್ನು ತಪ್ಪಿಸಿಕೊಳ್ಳಲು ನಕಲಿ ನೆಗೆಟಿವ್‌ ವರದಿಗಳನ್ನು ಹಾಜರುಪಡಿಸಿ ಒಳ ಪ್ರವೇಶಿಸತೊಡಗಿದ್ದಾರೆ. ಮಾಕುಟ್ಟ ಅಂತರರಾಜ್ಯ ಗಡಿಯಲ್ಲಿ ಈ ರೀತಿಯ ಅನೇಕ ಪ್ರಕರಣಗಳು ವರದಿ ಆಗಿವೆ.

ಮಾಕುಟ್ಟ ಚೆಕ್‌ ಪೋಸ್ಟ್‌ನಲ್ಲಿ ಸಾಲುಗಟ್ಟಿ ನಿಂತ ಕೇರಳದ ವಾಹನಗಳುಮಾಕುಟ್ಟ ಚೆಕ್‌ ಪೋಸ್ಟ್‌ನಲ್ಲಿ ಸಾಲುಗಟ್ಟಿ ನಿಂತ ಕೇರಳದ ವಾಹನಗಳು

ಇದೀಗ ಕೊಡಗು ಜಿಲ್ಲಾಡಳಿತ ನಕಲಿ ಕೋವಿಡ್ ನೆಗೆಟಿವ್ ವರದಿಯನ್ನು ಬಳಸುತ್ತಿದ್ದವರ ಪತ್ತೆ ಹಚ್ಚಲು ಹೊಸ ಉಪಾಯ ಕಂಡುಕೊಂಡಿದೆ. ವರದಿ ಅಸಲಿಯೇ ಅಥವಾ ನಕಲಿಯೋ ಎನ್ನುವುದನ್ನು ಪತ್ತೆ ಹಚ್ಚಲು ಕೇರಳ ಸರ್ಕಾರವೇ ಅಭಿವೃದ್ಧಿಗೊಳಿಸಿರುವ ಸಿಟಿಜನ್ ರಿಜಿಸ್ಟ್ರೇಷನ್ ಆ್ಯಪನ್ನು ಚೆಕ್ ಪೋಸ್ಟ್ ಗಳಲ್ಲಿ ಬಳಕೆ ಮಾಡುತ್ತಿದೆ.

 Fake Covid Report Through Kerala Govt App; Detected By Kodagu District Administration

ಕೇರಳ ರಾಜ್ಯದಿಂದ ಕೊಡಗಿಗೆ ಮೂರು ಚೆಕ್ ಪೋಸ್ಟ್ ಮೂಲಕ ಬರಲು ಅವಕಾಶವಿದೆ. ಅದರಲ್ಲಿ ವಿರಾಜಪೇಟೆ ತಾಲ್ಲೂಕಿನ ಮಾಕುಟ್ಟ ಚೆಕ್ ಪೋಸ್ಟ್ ಮೂಲಕ ಅತೀ ಹೆಚ್ಚು ಅಂದರೆ, ದಿನಕ್ಕೆ ಕನಿಷ್ಠ ಮುನ್ನೂರು ವಾಹನಗಳು ಕೇರಳದಿಂದ ಕೊಡಗಿಗೆ ಬರುತ್ತವೆ. ಕೆಲವು ಬಾರಿ ಜಾಸ್ತಿ ವಾಹನಗಳು ಅಥವಾ ಜಾಸ್ತಿ ಜನರು ಒಂದೇ ಬಾರಿಗೆ ಬಂದಾಗ ಅವರೆಲ್ಲರ ರಿಪೋರ್ಟ್‍ಗಳು ನಕಲಿಯೋ ಅಥವಾ ಅಸಲಿಯೋ ಎಂದು ಪತ್ತೆಹಚ್ಚುವುದು ಕಷ್ಟವಾಗುತ್ತಿತ್ತು.

ಹೀಗಾಗಿ ಕೊಡಗು ಜಿಲ್ಲಾಡಳಿತ ಕೇರಳ ಸರ್ಕಾರ ಅಭಿವೃದ್ಧಿಗೊಳಿಸಿರುವ ಸಿಟಿಜನ್ ರಿಜಿಸ್ಟ್ರೇಷನ್ ಆ್ಯಪನ್ನು ಚೆಕ್ ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯ ನಿರ್ವಹಿಸುತ್ತಿರುವ ತಂಡಗಳಿಗೆ ನೀಡಿದೆ.

ಈ ಆ್ಯಪಿನಲ್ಲಿ ತಪಾಸಣಾ ತಂಡ ಕೇರಳದಿಂದ ಕೊಡಗಿಗೆ ಬರುತ್ತಿರುವವರ ಫೋನ್ ನಂಬರ್ ಎಂಟ್ರಿ ಮಾಡಿದರೆ ಸಾಕು ಕೋವಿಡ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸ್ಥಳದಲ್ಲಿಯೇ ಸಿಗಲಿದೆ. ಇದು ಕೇರಳದಿಂದ ಬರುತ್ತಿರುವವರ ವರದಿ ನಕಲಿಯೇ ಅಥವಾ ಅಸಲಿಯೇ ಎನ್ನುವುದು ಕ್ಷಣ ಮಾತ್ರದಲ್ಲೇ ಗೊತ್ತು ಮಾಡಲು ಸಹಕಾರಿ ಆಗಲಿದೆ.

ಆ ಮೂಲಕ ಕೊಡಗು ಜಿಲ್ಲಾಡಳಿತ ರಾಜ್ಯದಲ್ಲಿ ಕೋವಿಡ್ ಮಹಾಮಾರಿಯ ಎರಡನೇ ಅಲೆ ಅಬ್ಬರಿಸುತ್ತಿದ್ದರುವುದರಿಂದ ಕೊಡಗಿನಲ್ಲಿ ಅದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ನೂತನ ಆ್ಯಪ್ ಬಳಕೆಯಿಂದ ನಕಲಿ ವರದಿಗಳನ್ನು ತೋರಿಸಿ ಕೊಡಗಿಗೆ ಬರುವವರ ಪ್ರಯತ್ನವನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು.

Recommended Video

CD lady ಹಿಂದೆ ಇದ್ಯ ಡಿಕೆ ಕೈವಾಡ! | Oneindia Kannada

ವರ್ಷದ ಹಿಂದೆ ಕೋವಿಡ್ ಆರಂಭವಾದಾಗ ಹೇಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆವೋ ಅದೇ ರೀತಿ ಎರಡನೇ ಅಲೆಯ ಕೋವಿಡ್ ತಡೆಗೆ ಯೋಜಿತ ಪ್ರಯತ್ನ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳುತ್ತಾರೆ.

English summary
Kodagu District administration traced People from Kerala are entering Karnataka with fake negative reports got from kerala govt app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X