ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿಡ್ಡಳ್ಳಿ ಅರಣ್ಯದಲ್ಲಿ ಮತ್ತೆ ತಲೆ ಎತ್ತಿದ ಗುಡಿಸಲು!

ಒಂದೆಡೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ದಿಡ್ಡಳ್ಳಿಯ ನಿರಾಶ್ರಿತರಿಗೆ ಕಾನೂನಾತ್ಮಕವಾಗಿ ಜಾಗ ಗುರುತಿಸಿ ವಸತಿ ವ್ಯವಸ್ಥೆ ಮಾಡುತ್ತಿದ್ದರೂ ಅದಕ್ಕೆ ಸೊಪ್ಪು ಹಾಕದೆ ಈ ಹಿಂದೆ ತೆರವುಗೊಳಿಸಿದ ಅರಣ್ಯ ಪ್ರದೇಶದಲ್ಲಿ ಮತ್ತೆ ಆದಿವಾಸಿಗಳು ಗುಡಿ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮೇ 04: ಸಿದ್ದಾಪುರ ಬಳಿಯ ದಿಡ್ಡಳ್ಳಿಯಲ್ಲಿನ ಆದಿವಾಸಿಗಳ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಸರ್ಕಾರ ಇವರಿಗೆ ಈಗಿರುವ ಪ್ರದೇಶ ಹೊರತು ಪಡಿಸಿ ಜಿಲ್ಲೆಯ ಬೇರೆಡೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರೂ ಅದಕ್ಕೆ ಸೊಪ್ಪು ಹಾಕದೆ ದಿಡ್ಡಳ್ಳಿಯಲ್ಲೇ ಮನೆಕಟ್ಟಿಕೊಡಬೇಕೆಂದು ಹಠಕ್ಕೆ ಬಿದ್ದು ನಿರ್ಬಂಧಿತ ಜಾಗದಲ್ಲಿಯೇ ಗುಡಿಸಲು ನಿರ್ಮಾಣಕ್ಕೆ ಮುಂದಾಗಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಈ ಹಿಂದೆ ಆದಿವಾಸಿಗಳು ನಿರ್ಮಿಸಿದ್ದ ಸ್ಥಳವು ಅರಣ್ಯ ಇಲಾಖೆಗೆ ಒಳಪಡುವುದರಿಂದ ಅವರ ಗುಡಿಸಲನ್ನು ತೆರವುಗೊಳಿಸಲಾಗಿತ್ತು. ಈ ಸಂಬಂಧ ಭಾರೀ ಹೋರಾಟವೂ ನಡೆದಿತ್ತು. ಸರ್ಕಾರ ಇಲ್ಲಿನ ನಿರಾಶ್ರಿತರಿಗೆ ಬೇರೆಡೆ ನಿವೇಶನ ಗುರುತು ಮಾಡಿ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಇದನ್ನು ತಿರಸ್ಕರಿಸಿದ ಆದಿವಾಸಿಗಳು ತಮಗೆ ಇಲ್ಲಿಯೇ ನಿವೇಶನ ನೀಡಲಿ. ಇಲ್ಲವಾದರೆ ಇಲ್ಲಿಯೇ ಸಾಯುತ್ತೇವೆ ಎಂದರಲ್ಲದೇ, ದಿಡ್ಡಳ್ಳಿಯಿಂದ ಕದಲುವುದಿಲ್ಲ. ಲಾಠಿ ಬೀಸಿದರೂ ಹೆದರುವುದಿಲ್ಲ. ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಬೆದರಿಕೆವೊಡ್ಡಿದ್ದರು.[ಡ್ಡಳ್ಳಿ ಗುಂಡಿನ ದಾಳಿ ಪ್ರಕರಣ:ಆರೋಪಿ ಬಂಧನ]

Diddalli tribal people are in news again!

ಒಂದೆಡೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ದಿಡ್ಡಳ್ಳಿಯ ನಿರಾಶ್ರಿತರಿಗೆ ಕಾನೂನಾತ್ಮಕವಾಗಿ ಜಾಗ ಗುರುತಿಸಿ ವಸತಿ ವ್ಯವಸ್ಥೆ ಮಾಡುತ್ತಿದ್ದರೂ ಅದಕ್ಕೆ ಸೊಪ್ಪು ಹಾಕದೆ ಈ ಹಿಂದೆ ತೆರವುಗೊಳಿಸಿದ ಅರಣ್ಯ ಪ್ರದೇಶದಲ್ಲಿ ಮತ್ತೆ ಆದಿವಾಸಿಗಳು ಗುಡಿಸಲು ನಿರ್ಮಿಸಿಕೊಂಡಿದ್ದಾರೆ.

ಮಡಿಕೇರಿ ಡಿ.ವೈ.ಎಸ್.ಪಿ ಛಬ್ಬಿ ಹಾಗೂ ಅರಣ್ಯ ಇಲಾಖೆಯ ವೀರಾಜಪೇಟೆ ವಲಯ ಉಪ ಸಂರಕ್ಷಣಾಧಿಕಾರಿ ಮರಿಯ ಕೃಷ್ಟರಾಜ್, ಎ.ಸಿ.ಎಫ್ ಶ್ರೀಪತಿ ಆದಿವಾಸಿಗಳ ಮನವೊಲಿಕೆಗೆ ಮುಂದಾಗಿದ್ದು, ಮುತ್ತಮ್ಮ ಹಾಗೂ ಇನ್ನಿತರರ ಬಳಿ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಗುಡಿಸಲುಗಳಿಂದ ಹೊರಬರುವಂತೆಯೂ, ಈಗಾಗಲೇ ಸರಕಾರದ ವತಿಯಿಂದ ಜಿಲ್ಲಾಡಳಿತದ ಮುಖಾಂತರ ಗುರುತಿಸಿರುವ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಲಾಗಿದೆ.[ಆದಿವಾಸಿ ಗುಡಿಸಿಲಿನ ಮೇಲೆ ಗುಂಡಿನ ದಾಳಿ: ಕೊಡಗಿನಲ್ಲಿ ನಕ್ಸಲರ ಅಟ್ಟಹಾಸ?!]

Diddalli tribal people are in news again!

ಇದಕ್ಕೆ ಆದಿವಾಸಿಗಳು ಒಲಿಯುವ ಲಕ್ಷಣಗಳು ಕಾಣುತ್ತಿಲ್ಲ ಹೀಗಾಗಿ ಮತ್ತೆ ತೆರವು ಕಾರ್ಯಾಚರಣೆ ಅನಿವಾರ್ಯವಾಗಲಿದೆ. ಒಂದೆಡೆ ಮೀಸಲು ಅರಣ್ಯದಲ್ಲಿ ಅಕ್ರಮ ಗುಡಿಸಲು ನಿರ್ಮಿಸಿಕೊಂಡಿರುವ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯಕ್ಕೆ ಹಾಗೂ ಅಕ್ರಮ ಪ್ರವೇಶ ಹಾಗೂ ಜೀವ ಬೆದರಿಕೆಒಡ್ಡಿರುವ ಆರೋಪದಡಿ ಅರಣ್ಯ ಅಧಿಕಾರಿಗಳು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಜೆ.ಕೆ ಅಪ್ಪಾಜಿ, ಜೆ.ಕೆ ಮುತ್ತಮ್ಮ, ಅಪ್ಪು, ಮುತ್ತ ಹಾಗೂ ಮಲ್ಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಸದ್ಯ ಈ ಪ್ರದೇಶದಲ್ಲಿ ಮಡಿಕೇರಿ ಡಿ.ವೈ.ಎಸ್.ಪಿ ಛಬ್ಬಿ ಹಾಗೂ ಸಿದ್ದಾಪುರ ಠಾಣಾಧಿಕಾರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ 80 ಕ್ಕೂ ಅಧಿಕ ಪೊಲೀಸರು ಹಾಗೂ 40ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಬೀಡುಬಿಟ್ಟಿದ್ದು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

English summary
Diddalli tribal people are in news again! Even though government has allotted land to the tribals of Diddalli, the tribal people are not ready to leave their huts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X