ಕಾರಿಗೆ ಲಾರಿ ಡಿಕ್ಕಿ, ಸಂಬಂಧಿಕರ ಮನೆಗೆ ಹೋಗುತ್ತಿದ್ದ ಮಹಿಳೆ ಸಾವು

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಸುಂಟಿಕೊಪ್ಪ, ಫೆಬ್ರವರಿ 3: ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ 7ನೇ ಹೊಸಕೋಟೆ ಬಳಿ ಸಂಭವಿಸಿದೆ. ಸುಳ್ಯದ ನಿವಾಸಿ ದಿನಮಣಿ (30) ಎಂಬ ಮಹಿಳೆಯೇ ಸಾವನ್ನಪ್ಪಿದ ದುರ್ದೈವಿ.

ಸುಳ್ಯದ ನಿವಾಸಿ ದಿನಮಣಿ ಮತ್ತು ತೇಜು ಅವರು ಶಿಫ್ಟ್ ಡಿಸೈರ್ ಕಾರಿನಲ್ಲಿ (ಕೆಎ.20-ಎನ್.6413) ಗುರುವಾರ ಮಧ್ಯರಾತ್ರಿ ಕುಶಾಲನಗರಕ್ಕೆ ತೆರಳುತ್ತಿದ್ದಾಗ 7ನೇ ಹೊಸಕೋಟೆ ಬಳಿ ಮೈಸೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿ (ಕೆಎ19 ಡಿ7338) ಮುಖಾಮುಖಿ ಡಿಕ್ಕಿ ಹೊಡೆದಿದೆ.[ವಿಜಯಪುರದಲ್ಲಿ ಬೈಕ್ ಡಿಕ್ಕಿ, ರಸ್ತೆ ಮಧ್ಯದಲ್ಲಿ ಬೈಕ್ ಸವಾರ ಭಸ್ಮ]

Car-Lorry collision in Suntikoppa, woman dead

ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಿನಮಣಿ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ತೇಜುವಿಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ದಿನಮಣಿ ಅವರು ಕುಶಾಲನಗರದ ತಮ್ಮ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Car-Lorry collision in Elane Hosakote near, Suntikoppa, Kodagu district. Dinamani (30) woman dies in accident.
Please Wait while comments are loading...