ಐಟಿ ದಾಳಿ; ರಶ್ಮಿಕಾ ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರ
ಕೊಡಗು, ಜನವರಿ 16: ಕರ್ನಾಟಕ ಕ್ರಶ್, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ವಿರಾಜಪೇಟೆ ಮನೆ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
Recommended Video
ರಶ್ಮಿಕಾ ಮಂದಣ್ಣ ಮನೆಯಲ್ಲಿ ಐಟಿ ಅಧಿಕಾರಿಗಳ ದಾಖಲೆ ಪರಿಶೀಲನೆ ಇನ್ನೂ ಮುಂದುವರೆದಿದೆ. ಬೆಳಿಗ್ಗೆ ಏಳು ಗಂಟೆಯಿಂದ ನಿರಂತರವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಮದನ್ ಮಂದಣ್ಣ ಅವರ ಕಿರಿಯ ಮಗಳನ್ನು ಮನೆಗೆ ಕರೆತರಲಾಗಿದೆ. ವೀರಾಜಪೇಟೆಯ ಖಾಸಗಿ ಶಾಲೆಯಲ್ಲಿ ರಶ್ಮಿಕಾ ಮಂದಣ್ಣ ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಕುಟುಂಬದ ಬಳಿ ಇರುವ ಆಸ್ತಿ ಎಷ್ಟು?
ಕೊಡಗಿನ ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿ ಎರಡು ಅಂತಸ್ತಿನ ಕೋಟಿ ರೂ, ಮೌಲ್ಯದ ಐಷಾರಾಮಿ ಕಟ್ಟಡ ಇದೆ.
ಜೊತೆಗೆ ಎರಡು ಐಷಾರಾಮಿ ಕಾರುಗಳನ್ನು ರಶ್ಮಿಕಾ ತಂದೆ ಮದನ್ ಮಂದಣ್ಣ ಹೊಂದಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಹುಟ್ಟಿದ ಊರು ವೀರಾಜಪೇಟೆ ಸಮೀಪದ ಮೈತಾಡಿ ಗ್ರಾಮದಲ್ಲಿ 24 ಎಕರೆ ಕಾಫಿ ತೋಟ ಹೊಂದಿದ್ದಾರೆ.
ಇತ್ತೀಚೆಗೆ ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗವನ್ನು ಖರೀದಿ ಮಾಡಿದ್ದರು. ಪೆಟ್ರೋಲ್ ಬಂಕ್ ಹಾಗೂ ಶಾಲೆ ನಿರ್ಮಾಣಕ್ಕೆ ಜಾಗ ಖರೀದಿ ಮಾಡಿದ್ದರು ಎನ್ನಲಾಗಿದೆ.

ಸೆರೆನಿಟಿ ಹಾಲ್ ನಲ್ಲಿ ದಿನಕ್ಕೆ ಒಂದೂವರೆ ಲಕ್ಷ ಬಾಡಿಗೆ
ವಿರಾಜಪೇಟೆಯ ವಿಜಯನಗರದಲ್ಲಿದ್ದ ಮನೆಯನ್ನು ಒಂದು ವರ್ಷದ ಹಿಂದೆ ಒಂದು ಕಾಲು ಕೋಟಿ ರೂ ಗೆ ಮಾರಾಟ ಮಾಡಿದ್ದರು. ಇದಲ್ಲದೇ ವಿರಾಜಪೇಟೆಯಲ್ಲಿ ಐಷಾರಾಮಿ ಕಲ್ಯಾಣ ಮಂಟಪ "ಸೆರಿನಿಟ್ ಹಾಲ್' ಹೊಂದಿದ್ದು, ಇಲ್ಲಿ ಒಂದು ಮದುವೆಗೆ ದಿನಕ್ಕೆ ಒಂದುವರೆ ಲಕ್ಷ ರೂ, ಬಾಡಿಗೆ ವಿಧಿಸಲಾಗುತ್ತದೆ.

ಪೊಲೀಸರನ್ನೂ ನಂಬದ ಐಟಿ ಅಧಿಕಾರಿಗಳು
ದಾಳಿ ಸಮಯದಲ್ಲಿ ಐಟಿ ಅಧಿಕಾರಿಗಳು ಸ್ಥಳೀಯ ಪೊಲೀಸರ ಮೊಬೈಲ್ ಅನ್ನು ಅವರಿಂದ ತೆಗೆದಿಟ್ಟುಕೊಂಡಿದ್ದಾರೆ. ರಶ್ಮಿಕಾ ಮನೆಯಿಂದ ಮಾಹಿತಿ ಹೊರಗೆ ಹೋಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ತಿಳಿದುಬಂದಿದೆ.

"ಮದನ್ ಮಂದಣ್ಣ ದೇವರಂಥ ವ್ಯಕ್ತಿ'
"ಮಂದಣ್ಣ ಕುಟುಂಬದವರು ಯಾವುದೇ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಅವರಲ್ಲಿ ಅಷ್ಟು ದೊಡ್ಡ ಪ್ರಮಾಣದ ಆಸ್ತಿಯೇನಿಲ್ಲ. ಇತ್ತೀಚೆಗೆ ವ್ಯವಹಾರದಲ್ಲಿ ನಷ್ಟದಲ್ಲಿದ್ದರು. ರಾಜಕೀಯವಾಗಿ ಯಾವ ನಾಯಕರ ಜತೆಗೂ ಸಂಬಂಧ ಇಲ್ಲ" ಎಂದು ಮದನ್ ಸ್ನೇಹಿತ ಹರೀಶ್ ಹೇಳಿಕೆ ನೀಡಿದ್ದಾರೆ. ರಶ್ಮಿಕಾ ಹಣದಲ್ಲಿ ಬಿಟ್ಟಂಗಾಲ ಬಳಿ ಜಾಗ ಖರೀದಿಸಿದ್ದರು. ಕಾನೂನು ಬಾಹಿರವಾಗಿ ಆಸ್ತಿ ಅವರ ಬಳಿ ಇಲ್ಲ. ಸುಮ್ಮನೆ ತಪ್ಪು ಮಾಹಿತಿ ರವಾನೆಯಾಗ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.












Click it and Unblock the Notifications