ತ್ರಿವೇಣಿ ಸಂಗಮದಲ್ಲಿ ಕಳೆದು ಹೋಗಿದ್ದ ಕೊಕ್ಕೆತಾತಿ ಪತ್ತೆ
ಮಡಿಕೇರಿ, ಅಕ್ಟೋಬರ್ 18: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ಪಾಲಾಗಿದ್ದ ಕೊಡಗಿನ ಸಾಂಪ್ರದಾಯಿಕ ಆಭರಣ ಕೊಕ್ಕೆತಾತಿಯನ್ನು ಪತ್ತೆ ಹಚ್ಚುವಲ್ಲಿ ಮುಳುಗು ತಜ್ಞ ಕೊತ್ತೋಳಿರ ರವಿಮುತ್ತಪ್ಪ ಯಶಸ್ವಿಯಾಗಿದ್ದಾರೆ.
ಕಾವೇರಿ ಸಂಕ್ರಮಣದಂದು ಬಿರುನಾಣಿಯ ಚೆಟ್ಟಿಯಪ್ಪ ಎಂಬುವರು ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ನೆರವೇರಿಸಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಸಂದರ್ಭ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಕೊಡವ ಸಾಂಪ್ರದಾಯಿಕ ಕೊಕ್ಕೆತಾತಿಯನ್ನು ಕಳೆದುಕೊಂಡಿದ್ದರು.

ಸಕಾಲದಲ್ಲಿ ಹಾಜರಿದ್ದ ರವಿಮುತ್ತಪ್ಪ ಅವರು ನದಿಗೆ ಮುಳುಗಿ ಕೊಕ್ಕೆತಾತಿಯನ್ನು ಹೊರತರುವಲ್ಲಿ ಯಶಸ್ವಿಯಾದರು. ಚಿನ್ನದ ಕೊಕ್ಕೆತಾತಿಯನ್ನು ನೀರಿನೊಳಗೆ ಪತ್ತೆ ಹಚ್ಚಿದ ಮುಳುಗು ತಜ್ಞ ರವಿ ಅವರ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications