ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿ ಮಸೀದಿಗೆ ಕೊಡಗು ಜಿಲ್ಲೆಯಿಂದ ಹೋಗಿ ಬಂದವರೆಷ್ಟು?

|
Google Oneindia Kannada News

ಮಡಿಕೇರಿ, ಏಪ್ರಿಲ್ 2: ದೆಹಲಿ ನಿಜಾಮುದ್ದೀನ್ ಮಸೀದಿಯ ಧಾಮಿ೯ಕ ಸಭೆಯಲ್ಲಿ ಕೊಡಗು ಜಿಲ್ಲೆಯಿಂದ ಪಾಲ್ಗೊಂಡಿದ್ದವರ ಮಾಹಿತಿ ಪಡೆಯಲಾಗಿದೆ. ಜಿಲ್ಲೆಯಿಂದ ಭಾಗವಹಿಸಿದ್ದ 11 ಜನರನ್ನು ವಿಳಾಸದೊಂದಿಗೆ ಪತ್ತೆಹಚ್ಚಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

Recommended Video

ಮಾನವೀಯತೆ ಇನ್ನು ಜೀವಂತವಾಗಿದೆ ಎಂದು ಸಾಬೀತುಪಡಿಸಿದ ಯುವಕ

ಜಿಲ್ಲಾಡಳಿತದ ತಂಡವು ಅವರ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, 11 ಜನರ ಪೈಕಿ 5 ಜನರು ದೆಹಲಿಯಲ್ಲಿ ಕ್ವಾರಂಟೈನ್ ನಲ್ಲಿ ಇರುತ್ತಾರೆ ಮತ್ತು ಇನ್ನೂ 5 ಜನರು ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಈ ಬಗ್ಗೆ ಸಂಬಂಧಪಟ್ಟ ಜಿಲ್ಲೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಿಎಂ ಪರಿಹಾರ ನಿಧಿಗೆ 1 ವರ್ಷದ ವೇತನ ಘೋಷಿಸಿದ ಯಡಿಯೂರಪ್ಪ ಸಿಎಂ ಪರಿಹಾರ ನಿಧಿಗೆ 1 ವರ್ಷದ ವೇತನ ಘೋಷಿಸಿದ ಯಡಿಯೂರಪ್ಪ

ಉಳಿದ 1 ಪ್ರಕರಣದಲ್ಲಿ ಮಾತ್ರ ವ್ಯಕ್ತಿಯು ಈ ಜಿಲ್ಲೆಯಲ್ಲಿ ವಾಸವಿದ್ದು, 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿರುತ್ತದೆ. ಆದಾಗ್ಯೂ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ನಲ್ಲಿಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

11 Madikeri People Was Participeted In Nizamuddin Mosque Prayer

ಆದ್ದರಿಂದ ಈ ಬಗ್ಗೆ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದಾಗ್ಯೂ ನಮ್ಮ ಪರಿಶೀಲನೆಯಿಂದ ದೆಹಲಿ ಧಾಮಿ೯ಕ ಸಭೆಯಲ್ಲಿ ಪಾಲ್ಗೊಂಡಿದ್ದವರು ಬಿಟ್ಟು ಹೋಗಿದ್ದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.

English summary
11 Madikeri People Was Participeted In Nizamuddin Mosque Prayer. Kodagu district DC Anis Kanmini Joy Confirms it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X