ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ಮಕ್ಕಳಿರುವ ಪೋಷಕರಿಗಿಲ್ಲ ಸರ್ಕಾರಿ ಸೌಲಭ್ಯ: ಇದಪ್ಪಾ ಹೊಸ ಜನಸಂಖ್ಯಾ ನೀತಿ!

|
Google Oneindia Kannada News

ಲಕ್ನೋ, ಜುಲೈ 11: ಉತ್ತರ ಪ್ರದೇಶ ಸರ್ಕಾರವು ಜನಸಂಖ್ಯೆ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಉತ್ತೇಜಿಸಲು ಹೊಸ ಜನಸಂಖ್ಯಾ ನೀತಿಯನ್ನು ಘೋಷಿಸಿದೆ. 2021 ರಿಂದ 2030ರವರೆಗೂ ಈ ಜನಸಂಖ್ಯಾ ನೀತಿಯನ್ನು ಪಾಲನೆ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಸಲು ಸರ್ಕಾರ ಮುಂದಾಗಿದೆ.
ಜುಲೈ 11ರ ವಿಶ್ವ ಜನಸಂಖ್ಯಾ ದಿನ ಆಚರಣೆ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 2021 ರಿಂದ 2030ರವರೆಗಿನ ಹೊಸ ಜನಸಂಖ್ಯಾ ನೀತಿಯನ್ನು ಘೋಷಿಸಿದ್ದಾರೆ. "ಹೆಚ್ಚುತ್ತಿರುವ ಜನಸಂಖ್ಯೆಯು ಸಮಾಜದಲ್ಲಿ ಇರುವ ಅಸಮಾನತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಮೂಲವಾಗಿದೆ. ಅಭಿವೃದ್ಧಿಪರ ಸಮಾಜ ಸ್ಥಾಪನೆಗೆ ಜನಸಂಖ್ಯೆ ನಿಯಂತ್ರಣವೇ ಮೊದಲ ಹೆಜ್ಜೆ ಆಗುತ್ತದೆ," ಎಂದು ಟ್ವೀಟ್ ಮಾಡಿದ್ದಾರೆ.

ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?

ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಸರ್ಕಾರದ ಯಾವುದೇ ವಿನಾಯಿತಿ ಯೋಜನೆಗಳನ್ನು ಪಡೆಯದಂಡೆ ನಿರ್ಬಂಧಿಸಲಾಗುವುದು. ಈ ಕ್ರಮಗಳಿಗೆ ಸಂಬಂಧಿಸಿದ ರಾಜ್ಯ ಕಾನೂನು ಆಯೋಗದ ಜಾಲತಾಣದಲ್ಲಿ ಉಲ್ಲೇಖಿಸಲಾಗಿದೆ.

World Population Day Special: Uttar Pradesh Announces New Population Policy For 2021-2030

ಉತ್ತರ ಪ್ರದೇಶ ಸರ್ಕಾರದ ಹೊಸ ಜನಸಂಖ್ಯಾ ನೀತಿಯಲ್ಲಿ ಹೇಳಿರುವ ಅಂಶಗಳೇನು. ಸರ್ಕಾರ ತೆಗೆದುಕೊಳ್ಳಲು ಮುಂದಾಗಿರುವ ಕ್ರಮಗಳೇನು ಎಂಬುದನ್ನು ತಿಳಿಯಲು ಮುಂದೆ ಓದಿ.

ಇಬ್ಬರು ಮಕ್ಕಳನ್ನು ಹೊಂದಿದವರಿಗೆ ಪ್ರೋತ್ಸಾಹ ಧನ

ಇಬ್ಬರು ಮಕ್ಕಳನ್ನು ಹೊಂದಿದವರಿಗೆ ಪ್ರೋತ್ಸಾಹ ಧನ

ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಮತ್ತು ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಕರಡು ಮಸೂದೆ ಸಿದ್ಧಪಡಿಸಲಾಗಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ನೀಡುವುದನ್ನು ನಿಷೇಧಿಸಲಾಗುತ್ತದೆ. ಅದರ ಜೊತೆಗೆ ಕೇವಲ ಇಬ್ಬರು ಮಕ್ಕಳನ್ನು ಹೊಂದಿರುವ ಪೋಷಕರಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂಬ ಅಂಶವನ್ನು ಕೂಡ ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಜುಲೈ 19ರವರೆಗೂ ಸಾರ್ವಜನಿಕರಿಂದ ಸಲಹೆ ಸೂಚನೆ ಮತ್ತು ಅಭಿಪ್ರಾಯ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

ಪ್ರತಿಪಕ್ಷಗಳಿಂದ ಕರಡು ಮಸೂದೆಹೆ ವಿರೋಧ

ಪ್ರತಿಪಕ್ಷಗಳಿಂದ ಕರಡು ಮಸೂದೆಹೆ ವಿರೋಧ

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಿಜೆಪಿಯು ಈ 'ರಾಜಕೀಯ ಕಾರ್ಯಸೂಚಿ'ಯನ್ನು ರೂಪಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಶನಿವಾರ ಸರ್ಕಾರದ ಕರಡು ಪ್ರತಿಗೆ ಕಾಂಗ್ರೆಸ್ ವಿರೋಧಿಸಿದೆ.

ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ ಮೂಸದೆ ಜಾರಿಗೆ ಚಿಂತನೆ

ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ ಮೂಸದೆ ಜಾರಿಗೆ ಚಿಂತನೆ

ಉತ್ತರಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ, 2021 ಎಂಬ ಶೀರ್ಷಿಕೆಯ ಪ್ರಸ್ತಾವಿತ ಶಾಸನವು ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಒಂದು ವರ್ಷದ ನಂತರ ಜಾರಿಗೆ ಬರಲಿದೆ. ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ (ಯುಪಿಎಸ್‌ಎಲ್‌ಸಿ)ದ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಈ ಶಾಸನದ ನಿಬಂಧನೆಯು ವಿವಾಹಿತ ದಂಪತಿಗಳಿಗೆ ಅನ್ವಯಿಸುತ್ತದೆ. 21 ವರ್ಷ ಮೇಲ್ಪಟ್ಟ ಪುರುಷ ಹಾಗೂ 18 ವರ್ಷ ಮೇಲ್ಪಟ್ಟ ಮಹಿಳೆ ಬಗ್ಗೆ ಉಲ್ಲೇಖಿಸಲಾಗಿದೆ.

ಇಬ್ಬರು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರದ ಪ್ರೋತ್ಸಾಹ

ಇಬ್ಬರು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರದ ಪ್ರೋತ್ಸಾಹ

ಜನಸಂಖ್ಯೆ ಮಸೂದೆ 2021ರ ಕರಡು ಪ್ರತಿಯಲ್ಲಿ ಪ್ರೋತ್ಸಾಹಕಗಳನ್ನು ಘೋಷಿಸಿದೆ. ಇಬ್ಬರೇ ಮಕ್ಕಳನ್ನು ಹೊಂದುವ ನಿಯಮವನ್ನು ಪಾಲಿಸುವ ಸರ್ಕಾರಿ ನೌಕರರಿಗೆ ಇಡೀ ಸೇವಾವಧಿಯಲ್ಲಿ ಎರಡು ಬಾರಿ ಹೆಚ್ಚುವರಿ ವೇತನ ಹೆಚ್ಚಳ ಮಾಡಲಾಗುವುದು. ಅಥವಾ ಪೋಷಕರು 12 ತಿಂಗಳ ಪಿತೃತ್ವ ಹಾಗೂ ಮಾತೃತ್ವ ರಜೆಯನ್ನು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ಪೂರ್ಣ ವೇತನ ಹಾಗೂ ಭತ್ಯೆಯನ್ನು ನೀಡಲಾಗುವುದು. ಇದರ ಜೊತೆ ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಉದ್ಯೋಗದಾತರ ನಿಧಿಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಲಾಗಿದೆ.

ಮಾತೃತ್ವ ಕೇಂದ್ರ ಸ್ಥಾಪಿಸುವ ಬಗ್ಗೆ ಉಲ್ಲೇಖ

ಮಾತೃತ್ವ ಕೇಂದ್ರ ಸ್ಥಾಪಿಸುವ ಬಗ್ಗೆ ಉಲ್ಲೇಖ

ಕರಡು ಮಸೂದೆಯಲ್ಲಿ ಸರ್ಕಾರದ ಎಲ್ಲಾ ಕರ್ತವ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ಸರ್ಕಾರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತೃತ್ವ ಕೇಂದ್ರಗಳನ್ನು ವ್ಯವಸ್ಥಿತವಾಗಿ ಸ್ಥಾಪಿಸಲಾಗುವುದು. ಈ ಕೇಂದ್ರಗಳು ಮತ್ತು ಎನ್‌ಜಿಒಗಳು ಗರ್ಭನಿರೋಧಕ ಮಾತ್ರೆ, ಕಾಂಡೋಮ್‌ಗಳನ್ನು ವಿತರಿಸುತ್ತವೆ, ಸಮುದಾಯ ಆರೋಗ್ಯ ಕಾರ್ಯಕರ್ತರ ಮೂಲಕ ಕುಟುಂಬ ಯೋಜನೆ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ. ರಾಜ್ಯದಾದ್ಯಂತ ಗರ್ಭಧಾರಣೆ, ಹೆರಿಗೆ, ಜನನ ಮತ್ತು ಸಾವುಗಳ ಕಡ್ಡಾಯ ನೋಂದಣಿಯನ್ನು ಖಚಿತಪಡಿಸುತ್ತವೆ ಎಂದು ಕರಡು ಪ್ರತಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣದ ಗುರಿ ಸಾಧಿಸಲು ಗುಣಮಟ್ಟದ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಲಭ್ಯತೆ, ಪ್ರವೇಶ ಮತ್ತು ಸೌಲಭ್ಯವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ಕ್ರಮಗಳ ಮೂಲಕ ಆರೋಗ್ಯಕರ ಜನನ ಅಂತರ ಖಚಿತಪಡಿಸಿಕೊಳ್ಳುವುದು ಅವಶ್ಯಕ ಎಂದು ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಪಠ್ಯಕ್ರಮದಲ್ಲಿ ಜನಸಂಖ್ಯೆ ನಿಯಂತ್ರಣದ ಪಾಠ

ರಾಜ್ಯದ ಪಠ್ಯಕ್ರಮದಲ್ಲಿ ಜನಸಂಖ್ಯೆ ನಿಯಂತ್ರಣದ ಪಾಠ

ಉತ್ತರ ಪ್ರದೇಶದ ಎಲ್ಲಾ ಮಾಧ್ಯಮಿಕ ಶಾಲೆಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಕಡ್ಡಾಯ ವಿಷಯವನ್ನು ಸೇರ್ಪಡೆಗೊಳಿಸುವುದು. ವಿದ್ಯಾರ್ಥಿ ಹಂತದಿಂದಲೇ ಜನಸಂಖ್ಯೆ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವುದು ಸರ್ಕಾರದ ಕರ್ತವ್ಯ ಎಂದು ಕರಡು ಮಸೂದೆ ಹೇಳುತ್ತದೆ. "ರಾಜ್ಯದಲ್ಲಿ ಸೀಮಿತ ಪರಿಸರ ಮತ್ತು ಆರ್ಥಿಕ ಸಂಪನ್ಮೂಲಗಳಿವೆ. ಆಹಾರ, ಸುರಕ್ಷಿತ ಕುಡಿಯುವ ನೀರು, ಯೋಗ್ಯವಾದ ವಸತಿ, ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶ, ಆರ್ಥಿಕ / ಜೀವನೋಪಾಯದ ಅವಕಾಶ ಸೇರಿದಂತೆ ಮಾನವ ಜೀವನದ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು. ಅಗತ್ಯ ಮತ್ತು ತುರ್ತು. ದೇಶೀಯ ಬಳಕೆಗಾಗಿ ವಿದ್ಯುತ್ ಮತ್ತು ಎಲ್ಲಾ ನಾಗರಿಕರಿಗೆ ಸುರಕ್ಷಿತ ಜೀವನಕ್ಕೆ ಜನಸಂಖ್ಯೆ ನಿಯಂತ್ರಣ ಪೂರಕವಾಗಲಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.

ಸುಧಾರಿತ ಆರೋಗ್ಯ ಸೌಲಭ್ಯ, ಬಂಜೆತನಕ್ಕೆ ಪರಿಹಾರ

ಸುಧಾರಿತ ಆರೋಗ್ಯ ಸೌಲಭ್ಯ, ಬಂಜೆತನಕ್ಕೆ ಪರಿಹಾರ

ಪ್ರಸ್ತಾವಿತ ಜನಸಂಖ್ಯಾ ನೀತಿಯ ಕುರಿತು, ಕುಟುಂಬ ಯೋಜನೆ ಕಾರ್ಯಕ್ರಮದಡಿ ಹೊರಡಿಸಲಾದ ಗರ್ಭನಿರೋಧಕ ಕ್ರಮಗಳು ಹಾಗೂ ಸುರಕ್ಷಿತ ಗರ್ಭಪಾತಕ್ಕೆ ಸರಿಯಾದ ವ್ಯವಸ್ಥೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಸುಧಾರಿತ ಆರೋಗ್ಯ ಸೌಲಭ್ಯಗಳ ಮೂಲಕ, ದುರ್ಬಲತೆ, ಬಂಜೆತನಕ್ಕೆ ಪರಿಹಾರಗಳನ್ನು ಒದಗಿಸಲಾಗುವುದು. ಆ ಮೂಲಕ ನವಜಾತ ಶಿಶುಗಳ ಮತ್ತು ತಾಯಿ ಮರಣ ಪ್ರಮಾಣ ಕಡಿಮೆ ಮಾಡುವುದು. 11 ರಿಂದ 19 ವಯೋಮಾನದ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಉತ್ತಮ ನಿರ್ವಹಣೆ ಹೊರತುಪಡಿಸಿ, ವೃದ್ಧರ ಆರೈಕೆಗಾಗಿ ಸಮಗ್ರ ವ್ಯವಸ್ಥೆ ಮಾಡುವುದು ಹೊಸ ನೀತಿಯ ಒಂದು ಪ್ರಮುಖ ಅಂಶವಾಗಿದೆ.

English summary
World Population Day Special: Uttar Pradesh Announces New Population Policy For 2021-2030.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X