ತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯ ಸಜೀವ ದಹನ
ಲಕ್ನೋ, ಆಗಸ್ಟ್ 19: ತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಪತಿಯು ಮಹಿಳೆಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಪೊಲೀಸರು ವರದಕ್ಷಿಣೆ ಕಿರುಕುಳ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಆಕೆ ತಲಾಖ್ ನೀಡಲು ನಿರಾಕರಿಸಿದ್ದಕ್ಕೆ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಎಸ್‌ಪಿ ಆಶಿಶ್ ಶ್ರೀವಾಸ್ತವ ಅವರ ಮಾಹಿತಿ ಪ್ರಕಾರ ಇಂಡಿಯಾ-ನೇಪಾಳ ಗಡಿ ಬಳಿ ಇರುವ ಗಾದ್ರಾದಲ್ಲಿ ಘಟನೆ ನಡೆದಿದೆ. ಸಯೀದ್ ಹಾಗೂ ನಫೀಸ್ ಇಬ್ಬರೂ ಒಂದೇ ಗ್ರಾಮದವರು, ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ನಫೀಸ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಸಯೀದಾ ಅವರ ಗಂಡ ಹಾಗೂ ಅತ್ತೆ ಮನೆಯವರು ಹಿಂಸೆ ನೀಡುತ್ತಿದ್ದರು. ಫೋನಿನಲ್ಲಿ ತಲಾಖ್ ನೀಡುವಂತೆ ಒತ್ತಾಯಿಸಿದ್ದರು. ಆಕೆ ತಲಾಖ್ ನೀಡಲು ನಿರಾಕರಿಸಿದ್ದಳು.












Click it and Unblock the Notifications