ಅಯೋಧ್ಯೆಯಲ್ಲಿ ಕೊಳೆತ ಶವದೊಂದಿಗೆ 2 ತಿಂಗಳು ಕಳೆದ ಮಹಿಳೆ

ಅಯೋಧ್ಯೆ, ನವೆಂಬರ್ 8: ಭಯಾನಕ ಎನಿಸಿದರೂ ಇದು ಸತ್ಯ, ತಾಯಿ ಹಾಗೂ ಸಹೋದರಿ ಶವದೊಂದಿಗೆ ಎರಡು ತಿಂಗಳು ಮಹಿಳೆ ಕಾಲ ಕಳೆದಿದ್ದಾಳೆ.

ಒಂದೆಡೆ ರಾಮಜನ್ಮಭೂಮಿ, ಬಾಬ್ರಿ ಮಸೀದಿ ತೀರ್ಪು ಸನ್ನಿಹಿತವಾಗುತ್ತಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಭಯಾನಕ ಘಟನೆ ನಡೆದೇ ಹೋಗಿದೆ.

ಆಯೋಧ್ಯೆಯ ದೇವಕಾಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಆದರ್ಶ ನಗರ ಕಾಲೊನಿಯಲ್ಲಿ ಈ ಘಟನೆ ನಡೆದಿದೆ.ಆ ಮನೆಯಿಂದ ದುರ್ವಾಸನೆ ಬರುತ್ತಿತ್ತು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಕೊಳೆತ ಹೆಣದ ಜೊತೆಗೆ ಮಹಿಳೆಯೊಬ್ಬಳು ಮಲಗಿರುವುದು ಕಂಡು ಬಂದಿತ್ತು.

Woman Found Living With Dead Bodies Of Mother And Sister For 2 Months

ಶವಗಳ ಜತೆಗೆ ಇದ್ದ ಮಹಿಳೆಯ ಹೆಸರು ದೀಪಾ. ಅವರು ಮಾಜಿ ಸಬ್​ಡಿವಿಷನಲ್ ಮ್ಯಾಜಿಸ್ಟ್ರೇಟ್​ ವಿಜೇಂದ್ರ ಶ್ರೀವಾಸ್ತವ ಅವರ ಪುತ್ರಿ. ವಿಜೇಂದ್ರ ಅವರು 1990ರಲ್ಲಿ ಮೃತಪಟ್ಟಿದ್ದು, ನಂತರ ಆ ಮನೆಯಲ್ಲಿ ಅವರ ಪತ್ನಿ ಪುಷ್ಪಾ ಮತ್ತು ದೀಪಾ ಸೇರಿ ಮೂವರು ಪುತ್ರಿಯರು ವಾಸವಿದ್ದರು.

ಪುಷ್ಪಾ ಮತ್ತು ವಿಭಾ ಎರಡು ತಿಂಗಳ ಹಿಂದೆ ಮೃತರಾಗಿದ್ದು, ಹೊರಗಿನವರ ಜತೆ ಸಂಪರ್ಕ ಇಲ್ಲದ ಕಾರಣ ದೀಪಾ ಯಾರಿಗೂ ವಿಷಯ ತಿಳಿಸಿರಲಿಲ್ಲ.

ಈ ಮೂವರ ಪೈಕಿ ರೂಪಾಲಿ ಎಂಬ ಸಹೋದರಿ ಕೆಲವು ವರ್ಷಗಳ ಹಿಂದೆ ಮೃತರಾಗಿದ್ದಾರೆ. ಅಲ್ಲಿಂದೀಚೆಗೆ ದೀಪಾ, ವಿಭಾ ಮತ್ತು ಆಕೆಯ ತಾಯಿ ಉಳಿದುಕೊಂಡಿದ್ದರು. ಎಲ್ಲರೂ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಹೀಗಾಗಿ ನೆರೆಯವರ ಜತೆಗೆ ಮಾತುಕತೆಯನ್ನೇ ನಿಲ್ಲಿಸಿದ್ದರು.

ಸದ್ಯ ಕೊಳೆತ ಶವವನ್ನು ಪೋಸ್ಟ್​ಮಾರ್ಟಂಗೆ ಕಳುಹಿಸಲಾಗಿದೆ. ಮಾನಸಿಕವಾಗಿ ಕುಗ್ಗಿರುವ ದೀಪಾ ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+