ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Viral Video: ಸ್ಪರ್ಧಿಸಲು ಟಿಕೆಟ್ ಸಿಗಲಿಲ್ಲವೆಂದು ಕಣ್ಣೀರಿಟ್ಟ ಅಭ್ಯರ್ಥಿ

|
Google Oneindia Kannada News

ಲಕ್ನೋ, ಜನವರಿ 14: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದೆ. ಬಹುತೇಕ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‌ ವಿಚಾರದಲ್ಲಿ ಜಟಾಪಟಿ ಶುರುವಾಗಿದೆ. ಟಿಕೆಟ್ ಸಿಗದ ಕಾರಣ ಅನೇಕರು ಪಕ್ಷದಿಂದ ಪಕ್ಷಕ್ಕೆ ಹಾರಿದ್ದಾರೆ. ಈ ನಡುವೆ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖಂಡರೊಬ್ಬರು ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಮುಜಾಫರ್‌ನಗರದ ಚಾರ್ತಾವಾಲ್ ಕ್ಷೇತ್ರದಿಂದ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖಂಡರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಪಕ್ಷದ ಹಿರಿಯ ನಾಯಕರೊಬ್ಬರು ಟಿಕೆಟ್‌ಗಾಗಿ 67 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು ಎಂದು ಪೊಲೀಸರ ಮುಂದೆ ಅಳುತ್ತಾ ಅರ್ಷದ್ ರಾಣಾ ಆರೋಪಿಸಿದ್ದಾರೆ. ತನಗೆ ಗೊತ್ತಿಲ್ಲದೆ ಟಿಕೆಟ್ ತಪ್ಪಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಷ್ಟೇ ಅಲ್ಲದೆ, ತನಗೆ ನ್ಯಾಯ ಸಿಗದಿದ್ದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ರಾಣಾ ಬೆದರಿಕೆ ಹಾಕಿದ್ದಾರೆ.

ವಿಡಿಯೋ: ದಲಿತರ ಮನೆಯಲ್ಲಿ ಯುಪಿ ಸಿಎಂ ಸಹ ಭೋಜನವಿಡಿಯೋ: ದಲಿತರ ಮನೆಯಲ್ಲಿ ಯುಪಿ ಸಿಎಂ ಸಹ ಭೋಜನ

ವಿಶೇಷವೆಂದರೆ, ಚಾರ್ತವಾಲ್ ವಿಧಾನಸಭಾ ಕ್ಷೇತ್ರದ ದಧೇಡು ಗ್ರಾಮದ ನಿವಾಸಿ ಅರ್ಷದ್ ರಾಣಾ ಅವರು ದೀರ್ಘಕಾಲದವರೆಗೆ ಬಿಎಸ್ಪಿಯಲ್ಲಿ ಸಕ್ರಿಯರಾಗಿದ್ದಾರೆ. ಅವರ ಪತ್ನಿ ಕೂಡ ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದರು. ಪಕ್ಷದ ಟಿಕೆಟ್ ಸಿಗುವ ನಿರೀಕ್ಷೆಯೊಂದಿಗೆ ರಾಣಾ ಬಹಳ ಹಿಂದಿನಿಂದಲೂ ಬಿಎಸ್ಪಿಯಿಂದ ಚಾರ್ತಾವಾಲ್ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದರು.

Viral Video: Up Elections 2022: Bsp Worker Arshad Rana Bitterly Cries for Not Getting Ticket

ಆದರೆ, ಟಿಕೆಟ್ ಬಗ್ಗೆ ಘೋಷಣೆಗೂ ಒಂದು ದಿನ ಮುಂಚಿತವಾಗಿ, ಬಿಎಸ್‌ಪಿ ವರಿಷ್ಠೆ ಮಾಯಾವತಿ ಟ್ವೀಟ್ ಮಾಡಿ, ಪಕ್ಷವು ಚಾರ್ತಾವಾಲ್ ವಿಧಾನಸಭಾ ಕ್ಷೇತ್ರದಿಂದ ಸಲ್ಮಾನ್ ಸಯೀದ್ ಅವರನ್ನು ಕಣಕ್ಕಿಳಿಸಿದೆ ಎಂದು ತಿಳಿಸಿದ್ದರು. ಸಲ್ಮಾನ್ ಸಯೀದ್ ಗೃಹ ಖಾತೆಯ ಮಾಜಿ ರಾಜ್ಯ ಸಚಿವ ಸಯೀದುಜ್ಜಮಾನ್ ಅವರ ಪುತ್ರ ಮತ್ತು ಕಾಂಗ್ರೆಸ್ ನಾಯಕ. ಈ ಘೋಷಣೆಯಿಂದ ತೀವ್ರವಾಗಿ ನೊಂದಿರುವ ರಾಣಾ ಫೇಸ್‌ಬುಕ್‌ನಲ್ಲಿ ತಮ್ಮ ಸಂಕಷ್ಟದ ಬಗ್ಗೆ ಬರೆದು ನಂತರ ತಮ್ಮ ಬೆಂಬಲಿಗರೊಂದಿಗೆ ಕೊತ್ವಾಲಿ ನಗರವನ್ನು ತಲುಪಿದ್ದಾರೆ. ಪಕ್ಷದ ಮುಖಂಡರಿಂದ ಅನ್ಯಾಯವಾಗಿದೆ ಎಂದಿರುವ ಅರ್ಷದ್, ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತಂತೆ ಹಣ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬಿಎಸ್‌ಪಿ ಕಾರ್ಯಕರ್ತರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಕೊತ್ವಾಲಿ ಪ್ರಭಾರಿ ಇನ್ಸ್‌ಪೆಕ್ಟರ್ ಆನಂದ್ ದೇವ್ ಮಿಶ್ರಾ ತಿಳಿಸಿದ್ದಾರೆ.

''ಬಹುಜನ ಸಮಾಜವಾದಿ ಪಕ್ಷದ ಟಿಕೆಟ್‌ಗಾಗಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಪಕ್ಷಕ್ಕೆ 4.5 ಲಕ್ಷ ರೂ. ನೀಡಲಾಗಿತ್ತು ಎಂದು ಆಕಾಂಕ್ಷಿ ಶಾಸಕ ಅಭ್ಯರ್ಥಿ ಆರೋಪಿಸಿದ್ದಾರೆ. ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಅವರ ಪತ್ನಿ ಬಿಎಸ್ಪಿ ಟಿಕೆಟ್‌ನಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು,'' ಎಂದು ಒಪಿಂಡಿಯಾದಲ್ಲಿನ ವರದಿ ಮಾಡಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

Recommended Video

Virat Kohli ಹೀಗೆ ಮೈಕ್ ನಲ್ಲಿ ಹೇಳಿದ ಮೇಲೆ ಮೊದಲ ಬಾರಿಗೆ ಪ್ರತಿಕ್ರಿಯೆ | Oneindia Kannada

English summary
BSP worker Arshad Rana has bitterly cried claiming that he was promised a ticket in the forthcoming Uttar Pradesh election only to be denied the ticket at the last moment despite putting up hoardings for the polls
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X