ಲವ್ ಜಿಹಾದ್: ಕಾನೂನು ರಚನೆಗೆ ಉ.ಪ್ರದೇಶ ಗೃಹ ಸಚಿವಾಲಯದಿಂದ ಪ್ರಸ್ತಾವನೆ

ಲಕ್ನೋ, ನವೆಂಬರ್ 20: 'ಲವ್ ಜಿಹಾದ್ ' ವಿರುದ್ಧ ಕಠಿಣ ಕಾನೂನು ರಚನೆ ಕುರಿತು ಉತ್ತರ ಪ್ರದೇಶ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.

ಕರ್ನಾಟಕದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ನಡೆಯುವ ಮತಾಂತರ ತಡೆಗೆ ಪ್ರಬಲ ಕಾನೂನು ರೂಪಿಸಲು ಬಿಜೆಪಿ ಕೋರ್ ಕಮಿಟಿಯು ಮೂರು ವಾರಗಳ ಹಿಂದೆ ಒಪ್ಪಿಗೆ ನೀಡಿತ್ತು.

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರುದ್ಧದ ಕಠಿಣ ಕಾನೂನನ್ನು ಶೀಘ್ರದಲ್ಲೇ ತರಲಾಗುವುದು. ಈ ವಿಚಾರವಾಗಿ ಉತ್ತರ ಪ್ರದೇಶದ ಗೃಹ ಇಲಾಖೆಯು ಅಲ್ಲಿನ ಕಾನೂನು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ.

Uttar Pradesh To Bring Law Against Love Jihad Proposal Sent

ಲವ್ ಜಿಹಾದ್ ಪ್ರಕರಣಗಳ ಕಡಿವಾಣಕ್ಕೆ ಕಾಯ್ದೆ ರೂಪಿಸಲು ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ಮಂಗಳವಾರ ತೀರ್ಮಾನಿಸಿತ್ತು.

ಮಧ್ಯ ಪ್ರದೇಶದಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ಜಾರಿಗೆ ತರುವ ಸುಳಿವು ನೀಡಿದ್ದು ಶಿವರಾಜ್ ಸಿಂಗ್ ಚೌಹಾಣ್ ಅವರು, ವಿವಾಹದ ಕಾರಣಕ್ಕಾಗಿ ನಡೆಯುವ ಧಾರ್ಮಿಕ ಮತಾಂತರ ನಿಷೇಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸುವುದಾಗಿ ಮಂಗಳವಾರ ಹೇಳಿದ್ದಾರೆ.

ಮುಂಬರುವ ಅಧಿವೇಶನದಲ್ಲಿ ಮಧ್ಯ ಪ್ರದೇಶದ ಧರ್ಮ ಸ್ವತಂತ್ರ 2020 ಮಸೂದೆಯನ್ನು ಮಂಡಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಈ ಮಸೂದೆಯು ಬಲವಂತವಾಗಿ, ಮೋಸದಿಂದ ಅಥವಾ ಧಾರ್ಮಿಕ ಮತಾಂತರಕ್ಕಾಗಿ ನಡೆಯುವ ಎಲ್ಲಾ ವಿವಾಹಗಳನ್ನು ಅನೂರ್ಜಿತಗೊಳಿಸಲಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಲವ್ ಜಿಹಾದ್ ನಲ್ಲಿ ಭಾಗಿಯಾಗುವ ಆರೋಪಿಗಳಿಗೆ ಐದು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ಇದೆ ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಭೋಪಾಲ್‌ನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+