ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ನಿರ್ಲಕ್ಷ್ಯ ಬೀದಿಯಲ್ಲಿ ಮಕ್ಕಳು: ಶಾಲೆಯಲ್ಲಿ ಹಳ್ಳಿ ಮೇಷ್ಟ್ರು ಸುಖ ನಿದ್ದೆ

|
Google Oneindia Kannada News

ಲಕ್ನೋ, ಅಕ್ಟೋಬರ್ 21: ಕೌನ್ಸಿಲ್ ಶಾಲೆಗಳನ್ನು ಕಾನ್ವೆಂಟ್ ಮಾದರಿಯನ್ನಾಗಿಸಲು ಕೇಂದ್ರದಲ್ಲಿರುವ ಮೋದಿ ಸರ್ಕಾರ ಮತ್ತು ರಾಜ್ಯದ ಯೋಗಿ ಸರ್ಕಾರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದರಿಂದ ಸರ್ಕಾರಿ ಶಾಲೆಗಳ ಸ್ಥಿತಿ ಸುಧಾರಿಸಬಹುದು ಎನ್ನುವ ಉದ್ದೇಶ ಅವರದ್ದಾಗಿದೆ. ಆದರೆ ಕೆಲವು ಅಜಾಗರೂಕ ಮತ್ತು ಬೇಜವಾಬ್ದಾರಿಯುತ ಶಿಕ್ಷಕರು ಸರ್ಕಾರದ ಉದ್ದೇಶವನ್ನು ಹಾಳುಮಾಡುತ್ತಿದ್ದಾರೆ.

ಶಾಲೆಗೆ ಆಗಮಿಸುವ ಮಕ್ಕಳನ್ನು ಕಡೆಗಣಿಸುತ್ತಿರು ಶಿಕ್ಷಕರು ತಮ್ಮ ಜವಾಬ್ದಾರಿಯಿಂದ ದೂರವಾಗುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ಬದಲು ಅವರ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ರೂಪಿಸಬೇಕಾದ ಶಿಕ್ಷಕರು ಮಕ್ಕಳನ್ನು ಶಾಲೆಯ ಇತರ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇಂಥದ್ದೊಂದು ಪ್ರಕರಣ ಉತ್ತರಪ್ರದೇಶ ಚಂದೌಲಿಯಿಂದ ಬೆಳಕಿಗೆ ಬಂದಿದೆ. ಇಲ್ಲಿನ ಎರಡು ಪ್ರಾಥಮಿಕ ಶಾಲೆಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ವೈರಲ್ ವೀಡಿಯೋಗಳನ್ನು ಎಬಿಎಸ್ಎ ಪರಿಶೀಲಿಸಿದೆ. ಜೊತೆಗೆ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ.

ಮೊದಲ ಪ್ರಕರಣ

ಮೊದಲನೇ ಪ್ರಕರಣ ಪ್ರಾಥಮಿಕ ಶಾಲೆ ಭುಡ್ಕುರಾ ಮತ್ತು ಎರಡನೇ ಪ್ರಕರಣ ಶಹಾಬಗಂಜ್ ಡೆವಲಪ್‌ಮೆಂಟ್ ಬ್ಲಾಕ್‌ನ ಪ್ರಾಥಮಿಕ ಶಾಲೆಯ ಡೆಹ್ರಿಯಿಂದ ವೈರಲ್ ಅಗಿದೆ. ಮೊದಲನೇ ಪ್ರಕರಣದಲ್ಲಿ ಕೆಲವು ಶಿಕ್ಷಕರು ತಮ್ಮ ಹುದ್ದೆಯ ಘನತೆಗೆ ಧಕ್ಕೆ ತರುವುದು ಕಂಡುಬರುತ್ತದೆ. ಭುಡ್ಕುಡದಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಕಲಿಯಲು ಬಂದ ಮಕ್ಕಳಿಗೆ ಅಡುಗೆಮನೆಯಲ್ಲಿ ಮಿಡ್ ಡೇ ಮೀಲ್ ಆಹಾರವನ್ನು ಬೇಯಿಸಲು ಬಿಡಲಾಗಿರುವುದು ಕಂಡು ಬಂದಿದೆ. ಮಕ್ಕಳು ಮಿಡ್ ಮಿಲ್ ಅಹಾರವನ್ನು ಬೇಯಿಸಲು ತಯಾರಿಕೆ ನಡೆಸಿರುವುದನ್ನು ವೈರಲ್ ಫೋಟೋದಲ್ಲಿ ಕಾಣಬಹುದು. ಈ ಸಮಯದಲ್ಲಿ ಮಕ್ಕಳು ಅಡುಗೆ ಮಾಡುವುದನ್ನು ನೋಡಿ ಗ್ರಾಮಸ್ಥರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಮಕ್ಕಳು ಶಾಲೆಗೆ ಹೋಗುವುದು ಕಲಿಯಲಾ? ಅಥವಾ ಅಡುಗೆ ಮಾಡಲಿಕ್ಕಾ? ಎನ್ನುವ ಪ್ರಶ್ನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Uttar Pradesh: Sleeping job for teacher - cooking job for children

ಎರಡನೇ ಪ್ರಕರಣ

ಎರಡನೆಯ ಪ್ರಕರಣವು ಡೆಹ್ರಿಯಾದ ಪ್ರಾಥಮಿಕ ಶಾಲೆಯಿಂದ ವೈರಲ್ ಆಗಿದೆ. ಮೂರು ಮಕ್ಕಳು ತಮ್ಮ ಪಾಡಿಗೆ ಶಾಲೆಯಲ್ಲಿ ಓದಿಕೊಳ್ಳುತ್ತಿದ್ದಾರೆ. ಆದರೆ ಗುರೂಜಿ ಮಾತ್ರ ಶಾಂತಿಯುತವಾಗಿ ತಮ್ಮ ಕಾಲುಗಳನ್ನು ಮೇಜಿನ ಮೇಲೆ ಹರಡಿಕೊಂಡು ಮಲಗಿದ್ದಾರೆ. ಮಕ್ಕಳು ನೆಲದ ಮೇಲೆ ಕುಳಿತು ಅಧ್ಯಯನ ಮಾಡುತ್ತಿರುವುದು ಕಂಡುಬರುತ್ತದೆ. ಅದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ದುರಾದೃಷ್ಟ ಅಂದ್ರೆ ಈ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುವ ಬದಲು ನಿರ್ಲಕ್ಷ್ಯ ತೋರಿದೆ. ದೂರಿನ ನಂತರವೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಇದು ನಿಜಕ್ಕೂ ವಿಪರ್ಯಾಸವೇ ಸರಿ.

ABSA ಹೇಳುವುದೇನು?

ಶಾಲೆಯಲ್ಲಿ ಶಿಕ್ಷಕರ ಬೇಜವಬ್ದಾರಿತನದಿಂದಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಅಸಡ್ಡೆ ಶಿಕ್ಷಕರ ದುಷ್ಕೃತ್ಯಗಳನ್ನು ಬ್ಲಾಕ್ ಶಿಕ್ಷಣ ಅಧಿಕಾರಿ (ಎಬಿಎಸ್‌ಎ) ಶಹಬ್‌ಗಂಜ್ ಅರವಿಂದ್ ಯಾದವ್‌ಗೆ ಹೇಳಿದಾಗ, ಅವರ ಅಸಮಾಧಾನಗೊಂಡಿದ್ದಾರೆ. ವಿಷಯವು ತುಂಬಾ ಗಂಭೀರವಾಗಿದೆ ಎಂದು ಅವರು ಹೇಳಿದರು. ಈ ವಿಷಯದಲ್ಲಿ ತನಿಖೆ ನಡೆಯಲಿದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಆದರೆ ಏನೇ ಆಗಲಿ ಇಂದಿನ ಮಕ್ಕಳು ಮುಂದಿನ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ತಂದೆ-ತಾಯಿಯೊಂದಿಗೆ ಶಿಕ್ಷರ ಪಾತ್ರ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಜ್ಞಾನ ದಾನ ಮಾಡಬೇಕಾದ ಶಿಕ್ಷಕರೇ ಮೈಮರೆತು ನಿದ್ದೆ ಮಾಡಿದರೆ, ಮಕ್ಕಳು ಅವರಿಂದ ಕಲಿಯುವುದಾದರೂ ಏನು? ಇದರಿಂದ ಯಾರ ಭವಿಷ್ಯ ಉತ್ತಮವಾಗಿ ನಿರ್ಮಾಣಗೊಳ್ಳಲು ಸಾಧ್ಯವಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು. ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಗುವ ಇಂಥ ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಇಲ್ಲವಾದರೇ ಈಗಾಗಲೇ ಕೊರೊನಾ ಕಾರಣದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಿರುವಾಗ ಇಂಥ ಶಿಕ್ಷರನ್ನು ಹಾಗೂ ಶಾಲೆಯಲ್ಲಿ ಮಕ್ಕಳು ಅಡುಗೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾದರೆ ಪೋಷಕರು ಮಕ್ಕಳನ್ನು ಓದಿಸುವುದಿರಲಿ, ಶಾಲೆ ಕಡೆಗೆ ಮುಖಹಾಕಿ ನೋಡದಂತೆ ಮಾಡಿಬಿಡಬಹುದು.

English summary
Modi government at the center and the Yogi government of the state are spending crores of rupees to make the council schools a convent model, But condition of government schools not improved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X