ಯೋಗಿ ಆದಿತ್ಯನಾಥ್ 2.0 ಸಂಪುಟ ಸೇರಿದ ಸಚಿವರ ಪಟ್ಟಿ
ಲಕ್ನೋ ಮಾರ್ಚ್ 25: ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಈ ವಿಜಯದ ನಂತರ ಯೋಗಿ ಆದಿತ್ಯನಾಥ್ ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಯೋಗಿ ಆದಿತ್ಯನಾಥ್ ಅವರ ಎರಡನೇ ಅವಧಿಗೆ ಯುಪಿ ಸಿಎಂ ಆಗಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದ 2.0 ರ ಅದ್ಧೂರಿ ಪ್ರಮಾಣ ವಚನ ಸಮಾರಂಭ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ಪ್ರಾರಂಭಗೊಂಡಿದೆ. ಹಾಗಾಗಿ ವೇದಿಕೆಯಲ್ಲಿ 70 ಆಸನಗಳ ವ್ಯವಸ್ಥೆ ಮಾಡಲಾಗಿದ್ದು ಗಣ್ಯ ವ್ಯಕ್ತಿಗಳು ಆಸನವನ್ನು ಅಲಂಕರಿಸಿದ್ದಾರೆ. ಜೊತೆಗೆ ಇವರೆಲ್ಲರಿಗೂ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಜ್ಯದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಯೋಗಿ ಆದಿತ್ಯನಾಥ್ ಮತ್ತು ಅವರ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಏಕನಾ ಕ್ರೀಡಾಂಗಣದಲ್ಲಿ ಸುಮಾರು 70 ಸಾವಿರ ಜನರು ಉಪಸ್ಥಿತರಿದ್ದಾರೆ. ಯೋಗಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವ ಎಲ್ಲ ಸಚಿವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಆಹ್ವಾನಿತರನ್ನು ಕ್ರೀಡಾಂಗಣದ ಮುಖ್ಯ ಮೈದಾನದಲ್ಲಿ ಕೂರಿಸಲಾಗಿದೆ.
ಉಪಮುಖ್ಯಮಂತ್ರಿಗಳಾಗಿ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಹಾಗೂ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ತರಾಖಂಡದ ರಾಜ್ಯಪಾಲ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೇಬಿ ರಾಣಿ ಮೌರ್ಯ ಅವರು ಎರಡು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹೊಸ ಯುಪಿ ಕ್ಯಾಬಿನೆಟ್‌ನಲ್ಲಿ ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಪರಿಶಿಷ್ಟ ಜಾತಿಯಿಂದ ಪ್ರಭಾವಿ ಜಾತವ್ ಸಮುದಾಯದ ಸದಸ್ಯೆ ಬೇಬಿ ರಾಣಿ ಮೌರ್ಯ ಅವರು ಹೊಸ ಸರ್ಕಾರದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಯೋಗಿ ಸಂಪುಟಕ್ಕೆ ಸೇರಿರುವ ಸಚಿವರ ಪಟ್ಟಿ ಇಲ್ಲಿದೆ.(ಬದಲಾವಣೆಗೆ ಒಳಪಟ್ಟಿದೆ)

ಉಪ ಮುಖ್ಯಮಂತ್ರಿಗಳು
ಕೇಶವ್ ಪ್ರಸಾದ್ ಮೌರ್ಯ
ಬ್ರಿಜೇಶ್ ಪಾಠಕ್
ಸಚಿವರು
ಬೇಬಿ ರಾಣಿ ಮೌರ್ಯ
ಮಾಜಿ ಐಪಿಎಸ್ ಅಸೀಮ್ ಅರುಣ್
ಸ್ವತಂತ್ರ ದೇವ್ ಸಿಂಗ್ - ಯುಪಿ ಬಿಜೆಪಿ ಮುಖ್ಯಸ್ಥ
ಸುನಿಲ್ ಶರ್ಮಾ
ಶ್ರೀಕಾಂತ್ ಶರ್ಮಾ
ಸಿದ್ಧಾರ್ಥ್ ನಾಥ್ ಸಿಂಗ್
ಬ್ರಿಜೇಶ್ ಪಾಠಕ್
ಜಿತಿನ್ ಪ್ರಸಾದ
ಮಹೇಂದ್ರ ಸಿಂಗ್
ಅನಿಲ್ ರಾಜಭರ್
ಮೊಹ್ಸಿನ್ ರಜಾ
ರಾಜೇಶ್ವರ್ ಸಿಂಗ್
ಸಂಜಯ್ ನಿಶಾದ್ (ನಿಶಾದ್ ಪಕ್ಷ)
ಆಶಿಶ್ ಪಟೇಲ್ (ಅನುಪ್ರಿಯಾ ಪಟೇಲ್ ಅವರ ಪತಿ, ಅಪ್ನಾ ದಳದ ಮುಖ್ಯಸ್ಥ)
ಅಶುತೋಷ್ ಟಂಡನ್
ಭೂಪೇನ್ ಚೌಧರಿ
ಸಂದೀಪ್ ಸಿಂಗ್
ಗಿರ್ ರಾಜ್ ಸಿಂಗ್ ಧರ್ಮೇಶ್
ಸುರೇಶ್ ಖನ್ನಾ - ಸ್ಪೀಕರ್ ಆಗುವ ಸಾಧ್ಯತೆ












Click it and Unblock the Notifications