Get Updates
Get notified of breaking news, exclusive insights, and must-see stories!

ಯುಪಿ: ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ: 2 ಕಿಮೀ ಬೆತ್ತಲೆ ನಡೆದುಕೊಂಡು ಹೋದ ಬಾಲಕಿ

ಬರೇಲಿ ಸೆಪ್ಟೆಂಬರ್ 22: ಮೊರಾದಾಬಾದ್‌ನಲ್ಲಿ 15 ವರ್ಷದ ಬಾಲಕಿಯನ್ನು ಐವರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಸುಮಾರು ಹದಿನೈದು ದಿನಗಳ ನಂತರ ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ ಅತ್ಯಾಚಾರದ ಬಳಿಕ ಮೊರಾದಾಬಾದ್-ಠಾಕುರ್ದ್ವಾರ ರಸ್ತೆಯಲ್ಲಿ ಸುಮಾರು 2 ಕಿಮೀ ದೂರದವರೆಗೆ ಬೆತ್ತಲೆಯಾಗಿ ನಡೆದು ಮನೆಗೆ ತಲುಪಿದ ಆಘಾತಕಾರಿ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ.

ಬಾಲಕಿಗೆ ಸಹಾಯ ಹಸ್ತ ಚಾಚುವ ಬದಲು ಕೆಲವು ದಾರಿಹೋಕರು ಮೂಕ ಪ್ರೇಕ್ಷಕರಂತೆ ನಿಂತಿದ್ದು ಕಂಡುಬಂದಿದೆ. ಇತರರು ಅವಳನ್ನು ಚಿತ್ರೀಕರಿಸಿದ್ದಾರೆ. ಮಾತ್ರವಲ್ಲದೆ ಆ ವಿಡಿಯೋವನ್ನು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಹುಡುಗಿಯ ಚಿಕ್ಕಪ್ಪ, "ಅವಳು ಮನೆಗೆ ಬಂದಾಗ ಅವಳು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದಳು" ಎಂದು ಹೇಳಿದ್ದಾರೆ. ನಂತರ ಅವರು ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದರು. ಆದರೆ ಅವರು ಈ ವಿಷಯವನ್ನು ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್‌ಎಸ್‌ಪಿ ಹೇಮಂತ್ ಕುಟಿಯಾಲ್ ಅವರ ಮುಂದೆ ಪ್ರಸ್ತಾಪಿಸುವವರೆಗೂ ಯಾವುದೇ ಕ್ರಮವನ್ನು ಪ್ರಾರಂಭಿಸಲಿಲ್ಲ. ನಂತರ ಪೊಲೀಸರು ಕಾರ್ಯಾಚರಣೆಗೆ ಇಳಿದ್ದಾರೆ. ಸೆಪ್ಟೆಂಬರ್ 7 ರಂದು ಎಫ್‌ಐಆರ್ ದಾಖಲಿಸಿ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಕುಟುಂಬ ಸದಸ್ಯರು ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.

Uttar Pradesh: Gang-rape of a minor: girl walked naked

ಮೊರಾದಾಬಾದ್ ಪೊಲೀಸರ ಪ್ರಕಾರ, "ಹುಡುಗಿ ಪಕ್ಕದ ಹಳ್ಳಿಯಲ್ಲಿ ಜಾತ್ರೆಗೆ ಹಾಜರಾಗಲು ಹೋಗಿದ್ದಾಗ ಅವಳನ್ನು ಐದು ಜನರು ಅಪಹರಿಸಿ ಸರದಿಯಲ್ಲಿ ಅತ್ಯಾಚಾರ ಮಾಡಿದ್ದಾರೆ. ಆಕೆಯ ಕಿರುಚಾಟವನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಆದರೆ ಅಷ್ಟರಲ್ಲಿ ಐವರು ಆರೋಪಿಗಳು ಆಕೆಯ ಬಟ್ಟೆ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದರು,".

ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಸಂದೀಪ್ ಕುಮಾರ್ ಮೀನಾ ಅವರು, "ಸೆಕ್ಷನ್ 376 ಡಿ (ಗ್ಯಾಂಗ್ರೇಪ್) ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಆರೋಪಿಗಳಲ್ಲಿ ಒಬ್ಬನನ್ನು ಸೆಪ್ಟೆಂಬರ್ 15 ರಂದು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+