ಉತ್ತರ ಪ್ರದೇಶ ಪೊಲೀಸ್ ಸಾವಿನ ಪ್ರಕರಣ ಹೊಸ ತಿರುವಿನತ್ತ!

ಲಕ್ನೋ, ಡಿಸೆಂಬರ್ 04: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಮೃತರಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಕುರಿತು ಆಘಾತಕಾರಿ ಮಾಹಿತಿಯೊಂದು ಲಭ್ಯವಾಗಿದೆ.

ಈ ಮೂಲಕ ಬುಲಂದ್ ಶಹರ್ ಹಿಂಸಾಚಾರ ಹೊಸ ರೂಪ ಪಡೆದುಕೊಂಡಿದೆ. 2015 ರಲ್ಲಿ ನಡೆದ ಅಖ್ಲಾಕ್ ಪ್ರಕರಣದಲ್ಲಿ ಗೋಹತ್ಯೆಯ ವದಂತಿಯ ಮೇಲೆ ವ್ಯಕ್ತಿಯೊಬ್ಬನ್ನನ್ನು ಹೊಡೆದು ಕೊಲ್ಲಲಾಗಿತ್ತು. ಸೋಮವಾರ ಮೃತರಾದ ಸುಬೋಧ್ ಅವರು ‌2015 ರಲ್ಲಿ ನಡೆದ ಈ ಪ್ರಕರಣದ ತನಿಖೆ ನಡಸುತ್ತಿದ್ದ ಅಧಿಕಾರಿಗಳಲ್ಲೊಬ್ಬರಾಗಿದ್ದರು. ಅವರ ಸಾವಿಗೂ ಇದಕ್ಕೂ ಏನಾದರೂ ಸಂಬಂದವಿದೆಯೇ ಎಂಬ ಬಗ್ಗೆ ಇದೀಗ ಅನುಮಾನ ವ್ಯಕ್ತವಾಗಿದೆ.

ಅಖ್ಲಾಕ್ ಪ್ರಕರಣವನ್ನು ತನಿಕೆ ನಡೆಸುತ್ತಿದ್ದ ಇವರನ್ನು ದಾದ್ರಿಯಿಂದ ವಾರಣಾಸಿಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಬುಲಂದ್ ಶಹರ್ ಗೆ ಅಧಿಕಾರಿಯಾಗಿ ಅವರು ಬಂದಿದ್ದರು.

Uttar Pradesh: Bulandshahr violence taking a new twist

ಅಕ್ರಮ ಕಸಾಯಿ ಖಾನೆಗಳು ನಡೆಯುತ್ತಿವೆ ಎಂದು ಆರೋಪಿಸಿ, ಅದರ ವಿರುದ್ಧ ಬುಲಂದ್ ಶಹರ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಸುಬೋಧ್ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಹಿಂದು ಸಂಘಟನೆ ಬಜರಂಗ ದಳದ ಜಿಲ್ಲಾ ಮುಖಂಡರೊಬ್ಬರನ್ನು ಬಂಧಿಸಲಾಗಿದೆ.

ಬುಲಂದ್ ಶಹರ್ ನಲ್ಲಿ ಇಂದು ಸಹ ಪ್ರತಿಭಟನೆ ಮುಂದುವರಿದಿದ್ದು, ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+