• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಲ್ವಾಮಾ ದಾಳಿ: ಉತ್ತರ ಪ್ರದೇಶದಲ್ಲಿ ಸೆರೆ ಸಿಕ್ಕ ಇಬ್ಬರು ಜೈಷ್ ಉಗ್ರರು

|
   Pulwama : ಪುಲ್ವಾಮಾ ದಾಳಿ ನಂತರ ಇಬ್ಬರು ಶಂಕಿತ ಉಗ್ರರ ಬಂಧನ

   ಲಕ್ನೋ, ಫೆಬ್ರವರಿ 22: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದನೆಯ ಶಮನಕ್ಕೆ ಟೊಂಕಕಟ್ಟಿ ನಿಂತಿರುವ ಭಾರತ, ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

   ಉತ್ತರ ಪ್ರದೇಶದಲ್ಲಿ ಉಗ್ರ ನಿಗ್ರಹ ದಳದ ಅಧಿಕಾರಿಗಳು, ಜೈಷ್ ಇ ಮೊಹಮ್ಮದ್ ನ ಶಹನ್ವಾಜ್ ಅಹ್ಮದ್ ಮತ್ತು ಅಖಿಬ್ ಅಹ್ಮದ್ ಮಲೀಕ್ ಎಂಬುವವರನ್ನು ಬಂಧಿಸಿದ್ದಾರೆ. ಶಹನ್ವಾಜ್ ಕುಲ್ಗಾಂನವನಾದರೆ, ಮಲೀಕ್ ಪುಲ್ವಾಮಾದವನು ಎಂದು ಗುರುತಿಸಲಾಗಿದೆ. ಇಬ್ಬರೂ ಜೈಶ್ ಇ ಮೊಹಮ್ಮದ್ ಸಂಘಟನೆಗೆ ಸೇರಿದವರೆಂಬುದು ಸಾಬೀತಾಗಿದೆ.

   ಪಾಕಿಸ್ತಾನದ ಕಪಟ ನಾಟಕಕ್ಕೆ ಭಾರತದ ಖಡಕ್ ಉತ್ತರ

   ಪುಲ್ವಾಮಾ ಘಟನೆಗೂ ಈ ಉಗ್ರರಿಗೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

   ಕಾಶ್ಮೀರಿ ಅಮ್ಮಂದಿರಿಗೆ ಪತ್ರ : ನಿಮ್ಮ ಮಗ ಬೀದಿ ಹೆಣವಾಗುವುದು ಬೇಕಾ?

   ಫೆಬ್ರವರಿ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಸಿಆರ್ ಪಿಎಫ್ ನ 44 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯನ್ನು ತಾನೇ ಮಾಡಿದ್ದಾಗಿ ಜೈಷ್ ಇ ಮೊಹಮ್ಮದ್ ಒಪ್ಪಿಕೊಂಡಿತ್ತು.

   English summary
   Uttar Pradesh Anti-Terrorist Squad (ATS) on Friday arrested two alleged members of terror group Jaish-e-Mohammed (JeM) from Deoband, Saharanpur.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X