ಯುಪಿ: ಕಾರ್ಮಿಕರೊಂದಿಗೆ ಕಾರನ್ನು ಸ್ಫೋಟಿಸುವ ಬೆದರಿಕೆ: ಎಸ್‌ಪಿ ನಾಯಕ ಬಂಧನ

ಲಕ್ನೋ, ಸೆಪ್ಟೆಂಬರ್ 20: ಆಟೋಮೊಬೈಲ್ ಸೇವಾ ಕೇಂದ್ರದಲ್ಲಿ ಕಾರ್ಮಿಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ನಾಯಕ ಸಂಗಮ್ ಯಾದವ್ ಅವರನ್ನು ಬಂಧಿಸಲಾಗಿದೆ. ಸಂಗಮ್ ಯಾದವ್ ಬೆದರಿಕೆ ಹಾಕಿದ ಆಡಿಯೋ ಕ್ಲಿಪ್ ವೈರಲ್ ಆದ ಬಳಿಕ ಉತ್ತರ ಪ್ರದೇಶದ ಡಿಯೋರಿಯಾದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸಂಗಮ್ ಯಾದವ್ ತಮ್ಮ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡು ಕಾರ್ಮಿಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.

'ಅಖಿಲೇಶ್ ಯಾದವ್ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೆ, ನಾನು ಇನ್ನೂ ರಾಷ್ಟ್ರೀಯ ಕಾರ್ಯದರ್ಶಿ; ನನ್ನ ಕಾರನ್ನು ರಿಪೇರಿ ಮಾಡದಿದ್ದರೆ, ನಾನು ಎಲ್ಲಾ ಕಾರ್ಮಿಕರೊಂದಿಗೆ ಕಾರನ್ನು ಸ್ಫೋಟಿಸುತ್ತೇನೆ" ಎಂದು ಸಂಗಮ್ ಯಾದವ್ ಆಡಿಯೊ ಕ್ಲಿಪ್‌ನಲ್ಲಿ ಹೇಳಿದ್ದಾರೆ.

ಸೆಪ್ಟೆಂಬರ್ 16 ರಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಘಟನೆ ನಡೆದಿದೆ. ಸಂಗಮ್ ಯಾದವ್ ಅವರು ಅಪಘಾತಕ್ಕೀಡಾದ ತಮ್ಮ ಸ್ವಿಫ್ಟ್ ಕಾರನ್ನು ಅಧಿಕೃತ ಸೇವಾ ಕೇಂದ್ರವಾದ ಕ್ಲಾಸಿಕ್ ಮೋಟಾರ್ಸ್‌ಗೆ ರಿಪೇರಿ ಮಾಡಲು ಕಳುಹಿಸಿದರು.

UP: Threat to blow up car with activists: SP leader arrested

ವಿಮಾ ಕಂಪನಿಯ ಸರ್ವೇಯರ್ ವಿಮಾ ಕ್ಲೈಮ್‌ನಲ್ಲಿ ಕಾರಿನ ಮುಂಭಾಗದ ಭಾಗವನ್ನು ಮಾತ್ರ ರಿಪೇರಿ ಮಾಡಲು ಅನುಮೋದಿಸಿದ್ದಾರೆ. ಆದರೆ ಯಾದವ್ ಇಡೀ ಕಾರನ್ನು ರಿಪೇರಿ ಮಾಡಲು ಒತ್ತಾಯಿಸಿದ್ದಾರೆ. ಅಂಗಡಿಯಲ್ಲಿದ್ದ ಕೆಲಸಗಾರರು ನಿರಾಕರಿಸಿದಾಗ ಅವರು ನಿಂದಿಸಲು ಮತ್ತು ಬೆದರಿಕೆ ಹಾಕಲು ಪ್ರಾರಂಭಿಸಿದರು.

ಎಸ್‌ಪಿ ನಾಯಕನ ಆಕ್ರೋಶದ ಬಳಿಕ ಕ್ಲಾಸಿಕ್ ಮೋಟಾರ್ಸ್ ಮಾಲೀಕ ವಿಕ್ರಮ್ ಪಟೇಲ್ ಅವರು ಸಂಗಮ್ ಯಾದವ್ ವಿರುದ್ಧ 18 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಸಂಗಮ್ ಯಾದವ್ ವಿರುದ್ಧ ಸದರ್ ಕೊತ್ವಾಲಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಯಾದವ್ ಅವರನ್ನು ಬಂಧಿಸಲಾಗಿದೆ ಎಂದು ಸಿಒ ಸಿಟಿ ಶ್ರೇಯಸ್ ತ್ರಿಪಾಠಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಮೇಲೆ ಬಿಜೆಪಿ ದಾಳಿ ನಡೆಸಿದ್ದು, ಸಂಗಮ್ ಯಾದವ್ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾಗೊಳಿಸುವಂತೆ ಒತ್ತಾಯಿಸಿದೆ.

"ಇದು ಅಧಿಕಾರದಲ್ಲಿಲ್ಲದಿದ್ದರೂ ಎಸ್‌ಪಿಯ ನಿಜವಾದ ಮುಖ. ಅದು ಗುಂಡವಾಡಿ ಪಕ್ಷ. ಸಂಗಮ್ ಯಾದವ್ ಅರೆಸ್ಟ್ ಆಗಿದ್ದಾರೆ. ಅಖಿಲೇಶ್ ಯಾದವ್ ಈ ಗುಂಡಾನನ್ನು ವಜಾ ಮಾಡುವುದಿಲ್ಲ. ಏಕೆಂದರೆ ಎಸ್ಪಿ ಗೂಂಡಾಗಳ ಪಕ್ಷ! ಅವರು ಯಾರನ್ನು ವಜಾ ಮಾಡುವುದಿಲ್ಲ" ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+