• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದೇ ಬಾರಿ 25 ಶಾಲೆಗಳಲ್ಲಿ ಪಾಠ: ಆಡಳಿತ ಮಂಡಳಿ ಕಣ್ಣಿಗೆ ಮಣ್ಣೆರಚಿ ಶಿಕ್ಷಕಿ ಗಳಿಸಿದ್ದೆಷ್ಟು?

|

ಲಕ್ನೋ, ಜೂನ್ 5: ಆಡಳಿತ ಮಂಡಳಿ ಕಣ್ಣಿಗೆ ಮಣ್ಣೆರಚಿ 25 ಶಾಲೆಗಳಿಂದ ಸುಮಾರು 1 ಕೋಟಿ ರೂ ವೇತನವನ್ನು ಶಿಕ್ಷಕಿ ಪಡೆದಿದ್ದಾರೆ. ಅನಾಮಿಕ ಶುಕ್ಲ, ಉತ್ತರ ಪ್ರದೇಶದ ಶಿಕ್ಷಕಿಯಾಗಿದ್ದು, ಒಟ್ಟು 25 ಶಾಲೆಗಳ ಶಿಕ್ಷಕರುಗಳ ಹೆಸರಿನ ಪಟ್ಟಿಯಲ್ಲಿ ಇವರ ಹೆಸರೂ ಇದೆ. ಆದರೆ ಯಾರಿಗೂ ತಿಳಿದಿರಲಿಲ್ಲ.

ಕಸ್ತೂರ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಪೂರ್ಣ ಅವಧಿಯ ವಿಜ್ಞಾನ ಶಿಕ್ಷಕಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹಾಗೆಯೇ ಅವರು ಅಂಬೇಡ್ಕರ್ ನಗರ, ಬಾಘ್‌ಪಟ್, ಅಲಿಗಢ, ಸಹರಾನ್ಪುರ, ಪ್ರಯಾಗ್‌ರಾಜ್ ಜಿಲ್ಲೆಗಳ ಶಾಲೆಗಳಲ್ಲಿಯೂ ಪಾಠ ಮಾಡುತ್ತಿದ್ದರು. ಆದರೆ ಅದು ಹೇಗೆ ಎಂಬುದು ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ.

ಪಾಳು ಬಿದ್ದ ಸರ್ಕಾರಿ ಶಾಲೆಗೆ ಬಣ್ಣ ಬಳಿದು ಹೈಟೆಕ್ ಮಾಡಿದ ಶಿಕ್ಷಕ

ಶಿಕ್ಷಣ ಅಧಿಕಾರಿ ಆನಂದ್ ಪ್ರಕಾಶ್ ಮಾತನಾಡಿ, ಸರ್ವ ಶಿಕ್ಷಣ ಅಭಿಯಾನ ಕಚೇರಿಯು ಆರು ಜಿಲ್ಲೆಗಳಿಗೆ ನೋಟಿಸ್ ಕಳುಹಿಸಿದೆ. ಅಲ್ಲಿ ಯಾವ ಶಾಲೆಯಲ್ಲಾದರೂ ಅನಾಮಿಕ ಶುಕ್ಲ ಎಂಬ ಶಿಕ್ಷಕಿ ಕೆಲಸ ಮಾಡುತ್ತಿದ್ದಾರೆಯೇ ಎಂದು ವಿಚಾರಿಸಲಾಗಿದೆ. ಲಾಕ್‌ಡೌನ್ ಇರುವ ಕಾರಣ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ರಾಯ್ ಬರೇಲಿಯು ಲಿಸ್ಟ್‌ನಲ್ಲಿ ಇರಲಿಲ್ಲ. ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಎಲ್ಲಾ ಕೆಜಿವಿಬಿಗೂ ನೋಟಿಸ್ ನೀಡಲಾಗಿದೆ .

ಡಾಟಾಬೇಸ್ ಮೂಲಕ್ ಮಾಹಿತಿ ಹೊರಕ್ಕೆ

ಡಾಟಾಬೇಸ್ ಮೂಲಕ್ ಮಾಹಿತಿ ಹೊರಕ್ಕೆ

ಶಿಕ್ಷಕಿ ಕ್ರಿಯೇಟ್ ಮಾಡಿದ್ದ ಡಾಟಾ ಬೇಸ್ ಮೂಲಕ ಈ ಮಾಹಿತಿ ಹೊರಬಿದ್ದಿದೆ. ಟೀಚರ್ ಖಾಸಗಿ ಮಾಹಿತಿ ಇರುವ ಮಾನವ್ ಸಂಪದ ಪೋರ್ಟಲ್‌ನಲ್ಲಿ ಇವರೂ ಕೂಡ ದಾಖಲಾಗಿದ್ದರು.

ಎಲ್ಲಾ ಶಾಲೆಗಳಲ್ಲಿ ಹಾಜರಾತಿ ನಿಭಾಯಿಸಿದ್ದರು

ಎಲ್ಲಾ ಶಾಲೆಗಳಲ್ಲಿ ಹಾಜರಾತಿ ನಿಭಾಯಿಸಿದ್ದರು

ಅವರು ಒಮ್ಮೆ ದಾಖಲೆ ನೋಂದಣಿ ಮಾಡಿದ ಬಳಿಕ 25 ಶಾಲೆಗಳಲ್ಲಿ ಅವರ ಹೆಸರಿರುವುದು ಬೆಳಕಿಗೆ ಬಂದಿತ್ತು. ಆಶ್ಚರ್ಯವೇಏನೆಂದರೆ ಎಲ್ಲಾ ಶಾಲೆಗಳಲ್ಲೂ ತಮ್ಮ ಹಾಜರಾತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು. ಒಂದೇ ಸಮಯಕ್ಕೆ ಒಬ್ಬರು ಅದ್ಹೇಗೆ ಎಲ್ಲಾ ಶಾಲೆಗಳಲ್ಲೂ ಇರಲು ಸಾಧ್ಯ, ಮಾರ್ಚ್‌ನಲ್ಲೇ ಈ ಶಿಕ್ಷಕಿ ಬಗ್ಗೆ ಮೊದಲ ದೂರು ಕೇಳಿಬಂದಿತ್ತು.

ಕೆಜಿವಿಬಿ ರೆಸಿಡೆನ್ಶಿಯನ್ ಶಾಲೆ

ಕೆಜಿವಿಬಿ ರೆಸಿಡೆನ್ಶಿಯನ್ ಶಾಲೆ

ಕೆಜಿವಿಬಿ ಒಂದು ರೆಸಿಡೆನ್ಶಿಯಲ್ ಶಾಲೆಯಾಗಿದೆ. ಅಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ತಿಂಗಳಿಗೆ 30 ಸಾವಿರ ರೂ ವೇತನ ನೀಡಲಾಗುತ್ತದೆ. ಅದೇ ರೀತಿ ಪ್ರತಿಯೊಂದು ಬ್ಲಾಕ್‌ನಲ್ಲೂ ಒಂದೊಂದು ಕಸ್ತೂರಬಾ ಗಾಂಧಿ ಶಾಲೆ ಇದೆ.

ಫೆಬ್ರವರಿ ಒಳಗೆ 1 ಕೋಟಿ ರೂ ಗಳಿಸಿದ್ದಾರೆ

ಫೆಬ್ರವರಿ ಒಳಗೆ 1 ಕೋಟಿ ರೂ ಗಳಿಸಿದ್ದಾರೆ

ಫೆಬ್ರವರಿ 2020ರೊಳಗೆ ಅವರು ಒಂದು ಕೋಟಿ ವೇತನವನ್ನು ತೆಗೆದುಕೊಂಡಿದ್ದಾರೆ. ಅನಾಮಿಕ ಶುಕ್ಲ ಅವರು ಮೇನ್‌ಪುರಿಯಲ್ಲಿ ವಾಸಮಾಡುತ್ತಿದ್ದಾರೆ.ಫೆಬ್ರವರಿ ವರೆಗೆ ರಾಯ್ ಬರೇಲಿಯಲ್ಲಿರುವ ಕೆಜಿವಿಬಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

English summary
A teacher, Anamika Shukla, was working in 25 schools for months and managed to withdraw a salary of Rs one crore despite a digital database.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X