ಯುಪಿ ಶಾಲೆಗಳು ಜನವರಿ 14 ರವರೆಗೆ ಮುಚ್ಚಲ್ಪಡುತ್ತವೆ.

ಲಕ್ನೋ ಡಿಸೆಂಬರ್ 30: ಕೋವಿಡ್ -19ರ ರೂಪಾಂತರಿ ವೈರಸ್ ಓಮಿಕ್ರಾನ್ ಹೆಚ್ಚುತ್ತಿರುವ ಬೆನ್ನಲ್ಲೆ ಮತ್ತು ಚಳಿಗಾಲಕ್ಕೆ ಶೀತ ಹೆಚ್ಚಾಗುವ ದೃಷ್ಟಿಯಿಂದ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡ ಯುಪಿ ಸರ್ಕಾರವು ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಡಿಸೆಂಬರ್ 31, 2021 ರಿಂದ 15 ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಚಳಿಗಾಲದ ರಜಾದಿನಗಳು ಇರುತ್ತವೆ. ಹೀಗಾಗಿ ರಾಜ್ಯದಾದ್ಯಂತ ಡಿಸೆಂಬರ್ 31 ರಿಂದ ಜನವರಿ 14 ರವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ನಿರ್ಧಾರವು 1 ರಿಂದ 8 ನೇ ತರಗತಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಯುಪಿ ಶಾಲೆಗಳು ಜನವರಿ 14 ರವರೆಗೆ ಮುಚ್ಚಲ್ಪಡುತ್ತವೆ.

ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ವಿಜಯ ಪ್ರತಾಪ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯಿಸಿ, 'ಪರಿಷತ್ತಿನ ಶಾಲೆಗಳಲ್ಲಿ 1ರಿಂದ 8ನೇ ತರಗತಿವರೆಗೆ 15 ದಿನಗಳ ಕಾಲ ಚಳಿಗಾಲದ ರಜೆ ಇರುತ್ತದೆ. ಶಿಕ್ಷಣ ಮಂಡಳಿ ಕಾರ್ಯದರ್ಶಿ ಹೊರಡಿಸಿರುವ ಸೂಚನೆಗಳಲ್ಲಿ ಡಿಸೆಂಬರ್ 31 ರಿಂದ ಜನವರಿ 14 ರವರೆಗೆ ರಜೆ ಘೋಷಿಸಲಾಗಿದೆ. ಅದೇ ಸಮಯದಲ್ಲಿ ಡಿಐಒಎಸ್ ಡಾ ಅಮರಕಾಂತ್ ಸಿಂಗ್ ಈ ಆದೇಶವು 1ರಿಂದ 8ನೇ ತರಗತಿವರೆಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದರು. ಪ್ರೌಢಶಾಲೆಗಳಿಗೆ ಚಳಿಗಾಲದ ರಜೆಯ ಆದೇಶ ಹೊರಡಿಸಿಲ್ಲ' ಎಂದರು.

ಚಳಿಗಾಲದ ರಜಾದಿನಗಳು ಜನವರಿ 14ಕ್ಕೆ ಅಂತ್ಯಗೊಳ್ಳಲಿದ್ದು ಜನವರಿ 15ಕ್ಕೆ ಪ್ರಾರಂಭವಾಗುತ್ತವೆ.

UP Schools Closed News: UP schools will be closed for 15 days

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿಯ ಕುರಿತು ಉನ್ನತ ಮಟ್ಟದ ಸಭೆಯ ನಂತರ, ದೆಹಲಿ ಸರ್ಕಾರ ನಿನ್ನೆ ಸಂಜೆ ಹಳದಿ ಎಚ್ಚರಿಕೆಯನ್ನು ನೀಡಿದೆ. ತಕ್ಷಣವೇ ಜಾರಿಗೆ ಬರುವಂತೆ ಶಾಲೆಗಳನ್ನು ಮುಚ್ಚಿದೆ. ಆದಾಗ್ಯೂ, ಆನ್‌ಲೈನ್ ತರಗತಿಗಳು, ಸಿಬಿಎಸ್‌ಇ ನೋಂದಣಿ, ಪರೀಕ್ಷೆಗಳು ಮತ್ತು ಸಂಬಂಧಿತ ಚಟುವಟಿಕೆಗಳು ವೇಳಾಪಟ್ಟಿಯಂತೆ ಮುಂದುವರಿಯುತ್ತದೆ ಎಂದು ಡಿಡಿಎಂಎ ಮಾಹಿತಿ ನೀಡಿದೆ. ದೆಹಲಿ ಸರ್ಕಾರವು ಪ್ರಾಥಮಿಕ ತರಗತಿಗಳಿಗೆ (5 ನೇ ತರಗತಿಯವರೆಗೆ) ಜನವರಿ 15, 2021 ರಿಂದ ಚಳಿಗಾಲದ ರಜೆಯನ್ನು ಘೋಷಿಸಿತು.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಆದೇಶದ ನಂತರ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಸಹ ಡಿಸೆಂಬರ್ 27 ರಂದು ರಾತ್ರಿ 11 ರಿಂದ ಸಂಜೆ 5 ರವರೆಗೆ ಮುಂದಿನ ಆದೇಶದವರೆಗೆ ವಿಶ್ವವಿದ್ಯಾಲಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಈವರೆಗೆ ದೆಹಲಿಯಲ್ಲಿ 263 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 252 ಪ್ರಕರಣಗಳು, ಗುಜರಾತ್ 19 ಹೊಸ ಓಮಿಕ್ರಾನ್ ಪ್ರಕರಣಗಳೊಂದಿಗೆ 97 ರಜಸ್ತಾನ್ ದಲ್ಲಿ 69 ಪ್ರಕರಣಗಳು ದಾಖಲಾಗಿವೆ. ಇನ್ನೂ ಕರ್ನಾಟಕದಲ್ಲಿ 32 ಪ್ರಕರಣಗಳು ದಾಖಲಾದರೆ ಕೇರಳದಲ್ಲಿ 65 ಪ್ರಕರಣಗಳಿವೆ. ಒಟ್ಟಾರೆ ಭಾರತದಲ್ಲಿ 961 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.

ಹೆಚ್ಚುತ್ತಿರುವ ಕೋವಿಡ್-19 ಸೋಂಕುಗಳು ಮತ್ತು ಒಮಿಕ್ರಾನ್ ಭಯದ ನಡುವೆ, ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ದೆಹಲಿ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್‌ಗೆ ಪತ್ರ ಬರೆದಿದ್ದಾರೆ, ಕೋವಿಡ್ 19 ಪರೀಕ್ಷೆಯನ್ನು ಹೆಚ್ಚಿಸಲು, ವ್ಯಾಕ್ಸಿನೇಷನ್‌ನ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಆಸ್ಪತ್ರೆಗಳಲ್ಲಿ ಸೌಕರ್ಯಗಳನ್ನು ಬಲಪಡಿಸಲು ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+