ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್

|
Google Oneindia Kannada News

ಅಯೋಧ್ಯೆ, ಆಗಸ್ಟ್ 29: ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ಭೇಟಿ ನೀಡಿದರು. ರಾಮ ಲಲ್ಲಾ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಪ್ರಾರ್ಥನೆ ಸಲ್ಲಿಸಿದರು.
ರಾಮಾಯಣ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಮನಿಲ್ಲದೆ ಅಯೋಧ್ಯೆ ಅಯೋಧ್ಯೆಯಲ್ಲ. ರಾಮ ಇರುವಲ್ಲಿ ಅಯೋಧ್ಯೆ ಇದೆ. ಭಗವಾನ್ ರಾಮನು ಈ ನಗರದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ, ಆದ್ದರಿಂದ ನಿಜವಾದ ಅರ್ಥದಲ್ಲಿ, ಈ ಸ್ಥಳವು ಅಯೋಧ್ಯೆಯಾಗಿದೆ "ಎಂದು ಹೇಳಿದರು. ತದನಂತರದಲ್ಲಿ ಅಯೋಧ್ಯ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

'ರಾಷ್ಟ್ರಪತಿ ಯುಪಿ ಪ್ರವಾಸ ಬಿಜೆಪಿ ಹಿರಿಯ ನಾಯಕರ ಭೇಟಿಯಂತೆ ಭಾಸ': ಎಸ್‌ಪಿ ಟೀಕೆ'ರಾಷ್ಟ್ರಪತಿ ಯುಪಿ ಪ್ರವಾಸ ಬಿಜೆಪಿ ಹಿರಿಯ ನಾಯಕರ ಭೇಟಿಯಂತೆ ಭಾಸ': ಎಸ್‌ಪಿ ಟೀಕೆ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕುಟುಂಬ ಸದಸ್ಯರು, ಉತ್ತರ ಪ್ರದೇಶ ರಾಜ್ಯಪಾಲ ಆನಂದಿ ಬೆನ್ ಪಟೇಲ್, ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನ ವಿಕ್ರಮ್ ಜರ್ದೋಷ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಉಪಸ್ಥಿತರಿದ್ದರು. ಒಂದು ಕಡೆ ದೇವಸ್ಥಾನದಲ್ಲಿ ಅರ್ಚಕರು ಘೋಷಣೆ ಕೂಗುತ್ತಿರುವ ಸಮಯದಲ್ಲಿ ರಾಮ ಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದರು.

UP: President Ram Nath Kovind visits Ayodhya temple construction site, offers prayers to Ram Lalla

ರಾಮ ಮಂದರಿ ಅರ್ಚಕರ ಜೊತೆ ಸಂವಾದ:
ರಾಷ್ಟ್ರಪತಿಗಳಿಗೆ ಶಾಲು ಹೊದಿಸಿ, ಚಿಕಣಿ ಪ್ರತಿಕೃತಿಯನ್ನು ನೀಡುವ ಮೂಲಕ ಗೌರವಿಸಲಾಯಿತು. ಈ ವೇಳೆ ರಾಮ ಮಂದಿರದ ಅರ್ಚಕರ ಜೊತೆಗೆ ರಾಮನಾಥ್ ಕೋವಿಂದ್ ಸಂವಾದ ನಡೆಸಿ ನಂತರ ಸಸಿ ನೆಡುವ ಕಾರ್ಯ ಮಾಡಿದರು. 2019 ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಅಯೋಧ್ಯೆಗೆ ಮೊದಲ ಭೇಟಿ ನೀಡಿದ ಕೋವಿಂದ್, ದೇವಾಲಯದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟರು. ಅಲ್ಲಿಂದ ಸುಮಾರು 2 ಕಿಮೀ ದೂರದಲ್ಲಿರುವ ಹನುಮನ್‌ಗರಿ ದೇಗುಲಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹನುಮಂಗರಿ ದೇವಸ್ಥಾನದಲ್ಲಿ ರಾಷ್ಟ್ರಪತಿಗಳಿಗೆ ಗುಲಾಬಿ ಬಣ್ಣದ ಪೇಟ ನೀಡಲಾಯಿತು.

"ರಾಮ ಎಲ್ಲರಲ್ಲಿಯೂ ಇದ್ದಾರೆ"
ರಾಮಾಯಣ ಸಮಾವೇಶದ ಜೊತೆಗೆ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ರಾಮನಾಥ್ ಕೋವಿಂದ್, "ನಾವು ಪ್ರತಿಯೊಬ್ಬರಲ್ಲೂ ರಾಮ ಮತ್ತು ಸೀತೆಯನ್ನು ನೋಡಲು ಪ್ರಯತ್ನಿಸಬೇಕು. ರಾಮ್ ಎಲ್ಲರಿಗೂ ಸೇರಿದವನು, ಮತ್ತು ರಾಮ್ ಎಲ್ಲದರಲ್ಲೂ ಇದ್ದಾನೆ," ಎಂದರು. ಅವರ ಹೆಸರಿನಲ್ಲಿರುವ 'ರಾಮ್' ಪದವನ್ನು ಉಲ್ಲೇಖಿಸುತ್ತಾ ಮಾತನಾಡಿದ ಅವರು "ನನ್ನ ಕುಟುಂಬ ಸದಸ್ಯರು ನನಗೆ (ರಾಮ್ ನಾಥ್ ಕೋವಿಂದ್) ಹೆಸರಿಟ್ಟಾಗ, ಅವರು ಬಹುಶಃ ರಾಮ ಕಥಾ ಮತ್ತು ಭಗವಾನ್ ರಾಮನ ಬಗ್ಗೆ ಗೌರವ ಮತ್ತು ಪ್ರೀತಿಯ ಭಾವನೆಯನ್ನು ಹೊಂದಿದ್ದರು ಎಂದು ನಾನು ಭಾವಿಸುತ್ತೇನೆ," ಎಂದರು.

ಮಹಾತ್ಮ ಗಾಂಧೀಜಿ ರಾಮರಾಜ್ಯದ ಕನಸು:
"ಸಾರ್ವಜನಿಕ ಜೀವನದಲ್ಲಿ ಮಹಾತ್ಮ ಗಾಂಧಿಯವರು ರಾಮನ ಆದರ್ಶಗಳನ್ನು ಅಳವಡಿಸಿಕೊಂಡಿದ್ದರು. ಗಾಂಧೀಜಿ ತನ್ನ ಆದರ್ಶ ಭಾರತದ ಪರಿಕಲ್ಪನೆಯನ್ನು 'ರಾಮರಾಜ್ಯ' ಎಂದು ಹೆಸರಿಸಿದ್ದರು. ಮಹಾತ್ಮ ಗಾಂಧೀಜಿಗೆ ರಾಮನ ಹೆಸರು ಬಹಳ ಮುಖ್ಯವಾಗಿತ್ತು ಎಂದು ಕೋವಿಂದ್ ಹೇಳಿದರು.

English summary
UP: President Ram Nath Kovind visits Ayodhya temple construction site, offers prayers to Ram Lalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X