ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಡಿಜಿಪಿ ಹುದ್ದೆಯಿಂದ ಮುಕ್ತಿ ಪಡೆದ ಮುಕುಲ್ ಗೋಯಲ್

|
Google Oneindia Kannada News

ಲಕ್ನೋ ಮೇ 11: ಯುಪಿ ಪೊಲೀಸ್ ಮಹಾನಿರ್ದೇಶಕ ಮುಕುಲ್ ಗೋಯೆಲ್ ಅವರನ್ನು ಡಿಜಿಪಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ವರದಿಗಳ ಪ್ರಕಾರ ಮುಕುಲ್ ಗೋಯಲ್ ಅವರನ್ನು ಡಿಜಿಪಿ ಹುದ್ದೆಯಿಂದ ಮುಕ್ತಗೊಳಿಸಲಾಗಿದ್ದು, ಸರ್ಕಾರಿ ಕೆಲಸಗಳ ನಿರ್ಲಕ್ಷ್ಯ, ಇಲಾಖಾ ಕಾರ್ಯಗಳಲ್ಲಿ ಆಸಕ್ತಿಯ ಕೊರತೆ ಮತ್ತು ನಿಷ್ಕ್ರಿಯತೆ ಕಾರಣ ಎನ್ನಲಾಗಿದೆ. ಅವರನ್ನು ಡಿಜಿ ಸಿವಿಲ್ ಡಿಫೆನ್ಸ್ ಹುದ್ದೆಗೆ ಕಳುಹಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿ ಪ್ರಶಾಂತ್ ಕುಮಾರ್ ಅವರನ್ನು ಹಂಗಾಮಿ ಡಿಜಿಪಿಯನ್ನಾಗಿ ಮಾಡಲಾಗಿದೆ. ಜೊತೆಗೆ ಸದ್ಯ ಡಿಎಸ್ ಚೌಹಾಣ್ ಯುಪಿಯ ಹೊಸ ಡಿಜಿಪಿಯಾಗಬಹುದು ಎಂದು ಮೂಲಗಳು ತಿಳಿಸಿವೆ.

Breaking; ಬಂಧನದ ಹೈಡ್ರಾಮ, ಪತ್ರಕರ್ತ ಅಮನ್ ಚೋಪ್ರಾ ಪರಾರಿBreaking; ಬಂಧನದ ಹೈಡ್ರಾಮ, ಪತ್ರಕರ್ತ ಅಮನ್ ಚೋಪ್ರಾ ಪರಾರಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಳೆದ ತಿಂಗಳು ಮಹತ್ವದ ಸಭೆಯನ್ನು ಕರೆದಿದ್ದರು. ಅದರಲ್ಲಿ ಡಿಜಿಪಿ ಮುಕುಲ್ ಗೋಯಲ್ ಅವರನ್ನು ಕರೆಯಲಿಲ್ಲ. ಅಂದಿನಿಂದ ಮುಕುಲ್ ಗೋಯಲ್ ಶೀಘ್ರದಲ್ಲೇ ರಿಲೀಫ್ ಆಗಬಹುದು ಎಂಬ ಮಾತು ಕೇಳಿಬಂದಿತ್ತು. ಇದರಂತೆ ಗೋಯಲ್ ಡಿಜಿಪಿ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಮೂಲಗಳ ಪ್ರಕಾರ, ಡಿಎಸ್ ಚೌಹಾಣ್ ಅವರು ಯುಪಿಯ ಮುಂದಿನ ಡಿಜಿಪಿಯಾಗಬಹುದು. ಡಿಎಸ್ ಚೌಹಾಣ್ ಅವರು ಪ್ರಸ್ತುತ ಡಿಜಿ ಇಂಟೆಲಿಜೆನ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

UP: Mukul Goyal dismissed from DGP post

ಮುಕುಲ್ ಗೋಯಲ್ ಮೂಲತಃ ಉತ್ತರ ಪ್ರದೇಶದ ಮುಜಾಫರ್‌ನಗರದವರು. ದೆಹಲಿಯ ಐಐಟಿಯಲ್ಲಿ ಬಿಟೆಕ್ ನಂತರ ಎಂಬಿಎ ಕೂಡ ಮಾಡಿದ್ದಾರೆ. ಮುಕುಲ್ ಗೋಯಲ್ ಅವರು ಉತ್ತರ ಪ್ರದೇಶದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಅಜಂಗಢದ ಎಸ್‌ಪಿ ಮತ್ತು ವಾರಣಾಸಿ, ಗೋರಖ್‌ಪುರ, ಸಹರಾನ್‌ಪುರ, ಮೀರತ್ ಜಿಲ್ಲೆಗಳ ಎಸ್‌ಎಸ್‌ಪಿಯಾಗಿದ್ದರು. ಇದಲ್ಲದೆ ಕಾನ್ಪುರ, ಆಗ್ರಾ, ಬರೇಲಿ ವ್ಯಾಪ್ತಿಯ ಡಿಐಜಿ ಮತ್ತು ಬರೇಲಿ ವಲಯದ ಐಜಿ ಕೂಡ ಆಗಿದ್ದರು. ಫೆಬ್ರವರಿ 22, 1964 ರಂದು ಜನಿಸಿದ ಮುಕುಲ್ ಗೋಯಲ್ ಯುಪಿ ಕೇಡರ್‌ನ 1987 ಬ್ಯಾಚ್‌ನ ಐಪಿಎಸ್ ಅಧಿಕಾರಿ. ಬಿ.ಟೆಕ್ ಮತ್ತು ಎಂಬಿಎ ಪದವಿ ಪಡೆದಿದ್ದಾರೆ. ಅವರು ಫೆಬ್ರವರಿ 2024 ರಲ್ಲಿ ನಿವೃತ್ತರಾಗಲಿದ್ದಾರೆ.

English summary
UP Police Chief Mukul Goyal has been sacked as DGP, with DS Chauhan becoming UP's new DGP, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X