ಯುಪಿ: ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಸಂಗೀತ್ ಸೋಮ್ ಗೆ ಸೋಲು
ಸರ್ಧನಾ ಮಾರ್ಚ್ 10: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಹೊರಬಿದ್ದಿದೆ. ಮತ್ತೊಮ್ಮೆ ರಾಜ್ಯದಲ್ಲಿ ಸರ್ಕಾರ ರಚನೆಯತ್ತ ಭಾರತೀಯ ಜನತಾ ಪಕ್ಷ (ಬಿಜೆಪಿ) ವೇಗವಾಗಿ ಸಾಗುತ್ತಿದೆ. ಬಿಜೆಪಿ ಇಲ್ಲಿಯವರೆಗೆ 54 ಸ್ಥಾನಗಳನ್ನು ಗೆದ್ದಿದೆ. ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಯುಪಿ ರಾಜಕೀಯ ಅಧಿಕಾರ ತಿಲಕವನ್ನು ಹಚ್ಚಿಕೊಳ್ಳಬಹುದು. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿ ಕೆಲವು ಸ್ಥಾನಗಳ ನಷ್ಟವನ್ನು ಅನುಭವಿಸಿದೆ, ಆದರೆ ಗೆಲುವನ್ನು ಬಿಟ್ಟುಕೊಟ್ಟಿಲ್ಲ. ಈ ಬಾರಿ ಸಮಾಜವಾದಿ ಪಕ್ಷ ಹಲವು ಸ್ಥಾನಗಳನ್ನು ಗೆದ್ದಿದೆ. ಇದರಲ್ಲಿ ಸರ್ಧಾನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಸಂಗೀತ್ ಸೋಮ್ ಅವರು ಸೋಲನ್ನು ಅನುಭವಿಸಿದ್ದಾರೆ.
ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ಸಮಾಜವಾದಿ ಪಕ್ಷದ ಖ್ಯಾತ ಅಭ್ಯರ್ಥಿ ಅತುಲ್ ಪ್ರಧಾನ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಅತುಲ್ 1,08,671 ಮತಗಳನ್ನು ಪಡೆದರೆ, ಸಂಗೀತ್ ಸಿಂಗ್ ಸೋಮ್ 93,908 ಮತಗಳನ್ನು ಪಡೆದಿದ್ದಾರೆ. ವೆಬ್‌ಸೈಟ್ ನವೀಕರಿಸುವವರೆಗೆ ಮತಗಳ ಸಂಖ್ಯೆಯು ಬದಲಾವಣೆಗೆ ಒಳಪಟ್ಟಿರುತ್ತದೆ. ಮತ ಎಣಿಕೆಯ ಆರಂಭದಲ್ಲಿ ಸಂಗೀತ್ ಸೋಮ್ ಮುನ್ನಡೆ ಸಾಧಿಸಿದ್ದರು. ಆದರೆ ಕಾಲಕ್ರಮೇಣ ಅತುಲ್ ಪ್ರಧಾನ್ ಅವರನ್ನು ಹಿಂದಿಕ್ಕಿದರು. ಸಂಗೀತ್ ಸೋಮ್ ಯುಪಿಯಲ್ಲಿ ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಮತ್ತು ವಿಶೇಷವಾಗಿ ಪಶ್ಚಿಮ ಯುಪಿಯಲ್ಲಿ ದೊಡ್ಡ ರಾಜಕಾರಣಿಗಳಲ್ಲಿ ಒಬ್ಬರು. ಸಂಗೀತ್ ಅವರು ತಮ್ಮ ಹೇಳಿಕೆಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.

Recommended Video
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಇದರಲ್ಲಿ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು ಮತ್ತು ಕೊನೆಯ ಹಂತ ಮಾರ್ಚ್ 7 ರಂದು ನಡೆಯಿತು. ಮಾರ್ಚ್ 7 ರ ಸಂಜೆ ಬಿಡುಗಡೆಯಾದ ಎಕ್ಸಿಟ್ ಪೋಲ್ ಫಲಿತಾಂಶಗಳು ಯುಪಿಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗಲಿದೆ ಎಂದು ಹೇಳಿವೆ. ಇದೇ ಸಮಯದಲ್ಲಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ವಿಪಕ್ಷ ನಾಯಕರು, ನಿರ್ಗಮನ ಸಮೀಕ್ಷೆಗಳ ಫಲಿತಾಂಶಗಳನ್ನು ನಿರಾಕರಿಸುತ್ತಾ, ಯುಪಿ ಜನರು ಈ ಬಾರಿ ಬದಲಾವಣೆಗೆ ಮತ ಹಾಕಿದ್ದಾರೆ ಮತ್ತು ರಾಜ್ಯದಿಂದ ಬಿಜೆಪಿ ನಿರ್ಗಮನ ಖಚಿತ ಎಂದು ಸ್ಪಷ್ಟವಾಗಿ ಹೇಳಿದ್ದರು.












Click it and Unblock the Notifications