ಬಿಜೆಪಿಯ ಹರ್ಷೋದ್ಗಾರದಲ್ಲಿ ಪ್ರತಿಧ್ವನಿಸಿದ ಮಹಿಳೆಯರು
ಲಕ್ನೋ ಮಾರ್ಚ್ 11: ಉತ್ತರಪ್ರದೇಶದಲ್ಲಿ ಕಳೆದ 37 ವರ್ಷಗಳಲ್ಲಿ ಯಾವುದೇ ಸರ್ಕಾರ ಸಾಧಿಸದ ಐತಿಹಾಸಿಕ ಸಾಧನೆಯನ್ನು ಈ ಬಾರಿ ಬಿಜೆಪಿ ಮಾಡಿದೆ. ಉತ್ತರಪ್ರದೇಶದಲ್ಲಿ ಎರಡನೇ ಅವಧಿಗೆ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದೆ. ಬಿಜೆಪಿಯ ಈ ಗೆಲುವಿನ ಹಿಂದೆ ಕಳೆದ ಎರಡು ವರ್ಷಗಳಿಂದ ನೀಡಿದ ಉಚಿತ ಪಡಿತರ ಮತ್ತು ಹಿಂದೆ ಕ್ರೋಢೀಕರಿಸಿದ ಮಹಿಳಾ ಮತದಾರರು ಜೊತೆಗೆ ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆ ಇದೆ ಎಂಬುದು ಸ್ಪಷ್ಟವಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಮಹಿಳಾ ಮತದಾರರೇ ಕಾರಣ ಎನ್ನಲಾಗುತ್ತಿದೆ. ಹೆಚ್ಚಿನ ಶೇಕಡಾವಾರು ಮಹಿಳಾ ಮತದಾರರು ಪಡಿತರವನ್ನು ಕಳುಹಿಸಿದ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ಇದರ ಮುಂದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನೀಡಿದ ಉಚಿತ ವಿದ್ಯುತ್ ಭರವಸೆ ಕೂಡ ಮಹಿಳಾ ಮತದಾರರನ್ನು ಎಸ್‌ಪಿ ಪಾಳೆಯಕ್ಕೆ ಸೆಳೆಯಲು ಸಾಧ್ಯವಾಗಲಿಲ್ಲ.
ವಾಸ್ತವವಾಗಿ ಉಚಿತ ಪಡಿತರ ಕ್ರಮವು ಬಿಜೆಪಿ ಗೆಲುವಿಗೆ ಮ್ಯಾಜಿಕ್ ಮಾಡುತ್ತದೆ ಎಂದು ಪ್ರಚಾರದ ಸಮಯದಲ್ಲಿ ಅರಿತುಕೊಂಡ ಎಸ್‌ಪಿ, ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳವರೆಗೆ ಉಚಿತ ಪಡಿತರವನ್ನೂ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತು. ಈ ವೇಳೆ ಬಿಜೆಪಿಯ ಉಚಿತ ಪಡಿತರ ಯೋಜನೆ ಮಾರ್ಚ್‌ನಲ್ಲಿ ಮುಗಿಯುತ್ತದೆ ಎಂದು ಎಸ್‌ಪಿ ಮಹಿಳಾ ಮತದಾರರಿಗೆ ನೆನಪಿಸುತ್ತಲೇ ಇತ್ತು.
ಬಿಜೆಪಿಗೆ ಗೆಲುವ ತಂದ ಮಹಿಳೆಯರ ಮತಗಳು
ಆದರೆ ಮಹಿಳೆಯರು ಎಸ್ಪಿಯ ಮಾತುಗಳನ್ನು ಕಿವಿಗೆ ಹಾಕಿಕೊಮಡಂತೆ ಕಾಣಿಸಿಲ್ಲ. ಜೊತೆಗೆ ಗ್ರಾಮದಿಂದ ಗ್ರಾಮಕ್ಕೆ ಸರ್ಕಾರ ಮಹಿಳೆಯರಿಗೆ ಪ್ರಚಾರದ ವೇಳೆ ನೀಡಿದ ಆಹಾರ ಧಾನ್ಯ ಕಳುಹಿಸಲು ಬಳಸುತ್ತಿದ್ದ ಮೋದಿ-ಯೋಗಿ ಫೋಟೋಗಳ ಚೀಲಗಳನ್ನು ತೋರಿಸಿದರು. ಇದು ಮಾದ್ಯಮಗಳಲ್ಲಿಯೂ ಪ್ರಸಾರವಾಗಿತ್ತು. ಮೋದಿ ಸರ್ಕಾರ ಬಡವರಿಗೆ ಉಚಿತ ಪಡಿತರವನ್ನು ಕಳುಹಿಸಿದರೆ, ಯೋಗಿ ಸರ್ಕಾರವು ತನ್ನ ಸ್ವಂತ ಉದ್ದೇಶದಿಂದ ಪಡಿತರವನ್ನು ದ್ವಿಗುಣಗೊಳಿಸಿತು. ಇದನ್ನು ಅನೇಕರು "ಡಬಲ್ ಡೋಸ್ ಪಡಿತರ" ಎಂದು ವಿವರಿಸಿದರು ಮತ್ತು ಅನೇಕ ಮಹಿಳೆಯರು ಇದನ್ನು"ಮೋದಿ-ಯೋಗಿ ನೆ ಭೂಖೆ ನಹೀ ಮರ್ನೆ ದಿಯಾ'' ಎಂದು ಕೂಡ ಹೇಳಿದರು.

ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆ
ಮಹಿಳಾ ಮತದಾರರನ್ನು ಓಲೈಸುವ ಮತ್ತೊಂದು ಪ್ರಮುಖ ಅಂಶವೆಂದರೆ ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆ, ಮುಜಾಫರ್‌ನಗರದ ಕಬ್ಬಿನ ಗದ್ದೆಗಳಲ್ಲಿ ಮಹಿಳೆಯರು ತಡವಾಗಿ ಕೆಲಸ ಮಾಡುತ್ತಾರೆ. ಹುಡುಗಿಯರು ಹಳ್ಳಿಗಳಲ್ಲಿ ಸ್ಕೂಟಿ ಮತ್ತು ಸೈಕಲ್‌ಗಳನ್ನು ಓಡಿಸುತ್ತಾರೆ ಅಥವಾ ಸಣ್ಣ ಪಟ್ಟಣಗಳಲ್ಲಿ ಹೊಸದಾಗಿ ತೆರೆದ ಕೆಫೆಗಳಲ್ಲಿ ಊಟ ಮಾಡುತ್ತಾರೆ. ಈ ವೇಳೆ ಯೋಗಿ ಸರ್ಕಾರದ ಆ್ಯಂಟಿ ರೋಮಿಯೋ ಸ್ಕ್ವಾಡ್ ನಡೆ ಮಹಿಳಾ ಮತದಾರರನ್ನು ಸೆಳೆಯಲು ಸಹಾಯ ಮಾಡಿತು. ಬೀದಿಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ ಸ್ಥಳೀಯ ಗೂಂಡಾಗಳಲ್ಲಿ ಭಯವನ್ನು ಹುಟ್ಟುಹಾಕಲು ಯೋಗಿ ಸುಧಾರಿತ ಕಾನೂನು ಕೆಲಸ ಮಾಡಿದೆ.
ಎಸ್‌ಪಿ ಬಗ್ಗೆ ಭಯ ಹುಟ್ಟುಹಾಕಿದ ಬಿಜೆಪಿ
ಇದರಿಂದ ಬಹಳ ಬದಲಾವಣೆಯಾಗಿದ್ದು ಅದು ಮಹಿಳೆಯರಿಗೆ ಸ್ಪಷ್ಟವಾಗಿ ಗೋಚರಿಸಿದೆ. ಎಸ್‌ಪಿ ಮತ್ತೆ ಅಧಿಕಾರಕ್ಕೆ ಬಂದರೆ ಗೂಂಡಾಗಿರಿಯ ಹಳೆಯ ದಿನಗಳು ಮರಳುತ್ತವೆ ಮತ್ತು ರಾಜ್ಯದಲ್ಲಿ ಮಹಿಳೆಯರಿಗೆ ಪರಿಸ್ಥಿತಿ ಮತ್ತೆ ಕಠಿಣವಾಗುತ್ತದೆ ಎಂದು ಬಿಜೆಪಿ ಮಹಿಳಾ ಮತದಾರರಲ್ಲಿ ಈ 'ಭಯ'ವನ್ನು ಹುಟ್ಟುಹಾಕಿದೆ. ಅಖಿಲೇಶ್ ಯಾದವ್ ಅವರ ದೊಡ್ಡ ರ್ಯಾಲಿಗಳಲ್ಲಿ ಮತ್ತು ರೋಡ್ ಶೋಗಳಲ್ಲಿ ಮಹಿಳೆಯರು ಅತ್ಯಂತ ಕಡಿಮೆ ಉಪಸ್ಥಿತಿಯಲ್ಲಿರುವುದು ಗಮನಿಸಬಹುದು. ಅಖಿಲೇಶ್ ಯಾದವ್ ಪ್ರಚಾರದ ಸ್ಥಳಗಳಲ್ಲಿ ಯುವಕರು ಬ್ಯಾರಿಕೇಡ್‌ಗಳನ್ನು ಮುರಿದು ವೇದಿಕೆಯ ಬಳಿ ಬರುತ್ತಿರುವುದನ್ನು ಹೋಲಿಸಿದರೆ, ಬಿಜೆಪಿ ಯಾವಾಗಲೂ ತನ್ನ ಪ್ರಮುಖ ನಾಯಕರ ರ್ಯಾಲಿಗಳಲ್ಲಿ ಮಹಿಳೆಯರಿಗೆ ಕುಳಿತುಕೊಳ್ಳಲು ಮೀಸಲಿಟ್ಟ ಸ್ಥಳವನ್ನು ಹೊಂದಿತ್ತು.

ಬಿಜೆಪಿಗೆ ದನಿಗೂಡಿಸಿದ ಮಹಿಳಾ ಮತದಾರರು
ಮಹಿಳಾ ಮತದಾರರು ಬಿಜೆಪಿಗೆ ದನಿಗೂಡಿಸುತ್ತಿರುವುದು ಎಸ್‌ಪಿಗೆ ತಿಳಿದಿರಲಿಲ್ಲವಂತೆ. ಅದಾಗ್ಯೂ ಎಸ್‌ಪಿ ಪಕ್ಷವು ಮಹಿಳಾ ಮತದಾರರನ್ನು ಓಲೈಸಲು ಪ್ರಚಾರಕ್ಕೆ ಡಿಂಪಲ್ ಯಾದವ್ ಮತ್ತು ಜಯಾ ಬಚ್ಚನ್ ಅವರನ್ನು ಕಳುಹಿಸಿತು. ಆದರೆ ಅದಾಗಲೇ ತುಂಬಾ ತಡವಾಗಿತ್ತು. ಹಳ್ಳಿಗಳ ಅನೇಕ ಮಹಿಳೆಯರು ಸುದ್ದಿಗಾರರೊಂದಿಗೆ ಮಾತನಾಡಿ,'ನಾವು ಕೇವಲ ಪಡಿತರವನ್ನು ಪಡೆದಿಲ್ಲ, ಆದರೆ ಪಿಎಂ ಆವಾಸ್ ಅಡಿಯಲ್ಲಿ ಮನೆಗಳು, ಉಜ್ವಲಾ ಸಿಲಿಂಡರ್‌ಗಳು ಮತ್ತು ತಮ್ಮ ಮನೆಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕದ ಹೊಸ ಭರವಸೆ ಮತ್ತು ಅದೇ ಪ್ರಯೋಜನಗಳನ್ನು ಯಾವುದೇ ತಾರತಮ್ಯವಿಲ್ಲದೆ ಸ್ವೀಕರಿಸಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.

ಪಡಿತರ ನೀಡಿದವರಿಗೆ ಮತ
ಸಮಾಜವಾದಿ ಪಕ್ಷವು ಮಹಿಳಾ ಮತದಾರರ ಮೇಲೆ ಪ್ರಭಾವ ಬೀರಬಹುದೆಂದು ಭಾವಿಸಿದ ಚುನಾವಣೆಯಲ್ಲಿ ಹಣದುಬ್ಬರವು ಪುನರಾವರ್ತಿತ ವಿಷಯವಾಗಿದ್ದರೂ, ಮೋದಿ-ಯೋಗಿ ಸರ್ಕಾರದಿಂದ ಮಹಿಳೆಯರಿಗೆ ಸಿಕ್ಕ ಲಾಭ ಇತರ ಎಲ್ಲ ವಿಷಯಗಳನ್ನು ಮೀರಿಸಿದೆ. ಕನೌಜ್‌ನ ಆಲೂಗಡ್ಡೆ ಗದ್ದೆಯಲ್ಲಿ ಭೇಟಿಯಾದ ಮಹಿಳೆಯರಿಂದ ಹಿಡಿದು ಚೌರಿ ಚೌರಾದ ಹಳ್ಳಿಯವರೆಗೆ ಭೇಟಿಯಾದ ಸುಮಿತ್ರಾ ದೇವಿಯವರೆಗೆ, ತಾವು ಪಡಿತರ ಕಳುಹಿಸಿದ ಮೋದಿಗೆ ಮತ ಹಾಕುವುದಾಗಿ ಹೇಳಿದರು. ಯಾರು ರೇಶನ್ ನೀಡಿದರು, ಸುರಕ್ಷತೆ ನೀಡಿದರು ಅವರಿಗೆ ನಮ್ಮ ಮತ (ಜಿಸ್ನೆ ರಶನ್ ಭೇಜಾ, ಸುರಕ್ಷಾ ದಿ, ವೋಟ್ ಉಸ್ಕೋ) ಎಂದು ಮಹಿಳೆಯರು ಹೇಳಿದರು. ಅಂತಿಮವಾಗಿ ಯುಪಿಯಲ್ಲಿ ಮೋದಿ ಮತ್ತು ಯೋಗಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಮಹಿಳೆಯರೇ.












Click it and Unblock the Notifications