ಯುಪಿ: ಪಕ್ಷ ತೊರೆದ ಮೂರು ಮಹಿಳಾ ಮಣಿಗಳನ್ನು ಕಣಕ್ಕಿಳಿಸಿದ ಕಮಲ

ಲಕ್ನೋ ಜನವರಿ 23: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಪಕ್ಷ ತೊರೆದು ಬಿಜೆಪಿ ಸೇರಿದ ಮಹಿಳಾ ಮಣಿಗಳನ್ನು ಕಮಲ ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡ ಎಸ್‌ಪಿ ಪೋಷಕ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್, ಶಾಸಕಿ ಅದಿತಿ ಸಿಂಗ್ ಮತ್ತು ಕಾಂಗ್ರೆಸ್‌ನ ಪೋಸ್ಟರ್ ಗರ್ಲ್ ಪ್ರಿಯಾಂಕಾ ಮೌರ್ಯ ಲಕ್ನೋದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮೋದಿ ಹಾಗೂ ಯೋಗಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಇವರು ಕೊಂಡಾಡಿದ್ದಾರೆ. ನಾವು ರಾಷ್ಟ್ರವನ್ನು ಉಳಿಸಬೇಕಾದರೆ 2022 ರಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಪೂರ್ಣ ಶಕ್ತಿಯೊಂದಿಗೆ ರಚಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಅಪರ್ಣಾ ಯಾದವ್ ಹೇಳಿದ್ದೇನು?

ಈ ವೇಳೆ ಮಾತನಾಡಿದ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್, ರಾಷ್ಟ್ರೀಯತೆಯಿಂದಾಗಿ ನಾನು ಬಿಜೆಪಿಯನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆಲೋಚನೆಗಳು ಮುಂದೆ ಸಾಗುತ್ತವೆ ಮತ್ತು ಮನುಷ್ಯ ಅವುಗಳನ್ನು ಅನುಸರಿಸುತ್ತಾನೆ.

ಮನುಷ್ಯ ಮರ್ತ್ಯ ಎಂದು ನಾನು ನಂಬುತ್ತೇನೆ. ಆದರೆ ಆಲೋಚನೆ ಎಂದಿಗೂ ಸಾಯುವುದಿಲ್ಲ. 'ಮನಸ್ಸಿನಲ್ಲಿ ಸಾಕಷ್ಟು ಸಂಘರ್ಷಗಳು ಇದ್ದಾಗ, ಮನಸ್ಸು ಸ್ಥಿರವಾಗಿಲ್ಲದಿರುವಾಗ ಸಮಾಜಕ್ಕೆ ಯಾವ ನಿರ್ದೇಶನವನ್ನು ನೀಡಬಹುದು? ಎಂದು ಒಮ್ಮೆ ಶಂಕರಾಚಾರ್ಯ ಜೀ ಅವರನ್ನು ಕೇಳಿದಾಗ ಅವರು ಹೇಳಿದ್ದು ಇದಕ್ಕೆ ವಿಚಾರವೇ ಔಷಧ ಎಂದಿದ್ದರಂತೆ'. ಇದೇ ವಿಚಾರವನ್ನೇ ನಾನು ಮಾಡಿದೆ.

ದೇಶವನ್ನು ಉಳಿಸಿದ ಪಕ್ಷ ಬಿಜೆಪಿ. ನವ ಭಾರತವನ್ನು ನಿರ್ಮಿಸಲು ನಾನು ಪ್ರಧಾನಿ ಮೋದಿಯವರೊಂದಿಗೆ ಹೆಜ್ಜೆ ಇಡಲು ಬಯಸುತ್ತೇನೆ. ಈ ನವ ಭಾರತದಲ್ಲಿ ಸಿಎಂ ಯೋಗಿ ಯಶಸ್ಸು ಸಾಧಿಸುವ ಕಡೆಗೆ ನನಗೂ ಅವಕಾಶ ಸಿಗಲಿ ಎಂದು ನಾನು ಬಯಸಿದ್ದೇನೆ ಎಂದರು.

UP: BJP selected because of nationality Aparna Yadav

ಎಸ್‌ಪಿ ತೊರೆದ ಅಪರ್ಣಾ ಯಾದವ್

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಸಮೀಪಿಸುತ್ತಿರುವಂತೆಯೇ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದವರಲ್ಲಿ ಬಹುಮುಖ ಪ್ರತಿಭೆ ಅಪರ್ಣಾ ಯಾದವ್ ಕೂಡ ಒಬ್ಬರು.

ಮುಲಾಯಂ ಸಿಂಗ್ ಯಾದವ್ ಅವರ ಮಗ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮಲತಾಯಿ ಮಗ ಪ್ರತೀಕ್ ಯಾದವ್ ಅವರ ಪತ್ನಿಯೇ ಅಪರ್ಣಾ ಯಾದವ್. ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿಯ ಮಗ ಪ್ರತೀಕ್ ಯಾದವ್. ಅಖಿಲೇಶ್ ಯಾದವ್ ಮುಲಾಯಂ ಸಿಂಗ್ ಯಾದವ್ ಮೊದಲ ಪತ್ನಿ ಮಗ.

ಬಿಜೆಪಿ ಸೇರಿದ ನಂತರ ಮುಲಾಯಂ ಸಿಂಗ್ ಅವರಿಂದ ಆಶೀರ್ವಾದ

Recommended Video

      IND vs SA: KL Rahul ಹಾಗು Kohli ನಡುವೆ ಮೈದಾನದಲ್ಲಿ ನಡೆದಿದ್ದೇನು | Oneindia Kannada

      ಯುಪಿ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಪಿ ಪೋಷಕ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಇತ್ತೀಚೆಗೆ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ಸೇರಿದ ನಂತರ, ಅಪರ್ಣಾ ಯಾದವ್ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಆಶೀರ್ವಾದ ಪಡೆದರು. ಟ್ವಿಟ್ಟರ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿರುವ ಅಪರ್ಣಾ ಈ ಮಾಹಿತಿ ನೀಡಿದ್ದಾರೆ. ರಾಷ್ಟ್ರದ ಧರ್ಮ ನನಗೆ ಮೊದಲ ಮತ್ತು ಅಗ್ರಗಣ್ಯ ಆದ್ದರಿಂದ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ ಎಂದು ಅಪರ್ಣಾ ಯಾದವ್ ಹೇಳಿದ್ದಾರೆ.

      2017 ರಲ್ಲಿ, ಬಿಜೆಪಿ ಭದ್ರಕೋಟೆ ಎಂದು ಪರಿಗಣಿಸಲಾದ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಪರ್ಣಾ ತಮ್ಮ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರು ಬಿಜೆಪಿ ಅಭ್ಯರ್ಥಿ ರೀಟಾ ಬಹುಗುಣ ಜೋಶಿ ವಿರುದ್ಧ 33,796 ಮತಗಳ ಅಂತರದಿಂದ ಸೋತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+