ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1000ಪ್ಲಸ್ ಕೊರೊನಾವೈರಸ್ ಕೇಸ್‌ಗಳುಳ್ಳ ಟಾಪ್ 7 ರಾಜ್ಯಗಳು

|
Google Oneindia Kannada News

ಲಕ್ನೋ, ಏಪ್ರಿಲ್ 21: ಕೊರೊನಾವೈರಸ್ ಸೋಂಕು ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ರೀತಿಯ ಮಾದರಿಯನ್ನು ಬಳಸುತ್ತಿದ್ದು, ಕೆಲವೆಡೆ ಯಶಸ್ಸು ಕಾಣಲಾಗುತ್ತಿದೆ. ಭಾರತದ 732 ಜಿಲ್ಲೆಗಳ ಪೈಕಿ 406ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕನಿಷ್ಠ ಒಬ್ಬ ಕೊರೊನಾ ಸೋಂಕಿತರನ್ನು ಕಾಣಬಹುದಾಗಿದೆ.

ದೇಶದ 16 ರಾಜ್ಯಗಳು ಹಾಟ್ ಸ್ಪಾಟ್ ವಲಯಗಳಾಗಿವೆ. ಈ ನಡುವೆ 1000 ಪ್ಲಸ್ ಕೊರೊನಾ ಪಾಸಿಟಿವ್ ಪ್ರಕರಣ ಹೊಂದಿರುವ ರಾಜ್ಯಗಳ ಪೈಕಿ 7ನೇ ರಾಜ್ಯವಾಗಿ ಉತ್ತರಪ್ರದೇಶ ಪಟ್ಟಿಯನ್ನು ಸೇರಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ಮಾಡಿದೆ.

ವಿಶ್ವದೆಲ್ಲೆಡೆ ಈ ಸಮಯಕ್ಕೆ (ಏಪ್ರಿಲ್ 21 ಮಧ್ಯಾಹ್ನ 15.22) 2,496,660 ಪ್ರಕರಣಗಳು ದಾಖಲಾಗಿದ್ದು, 171,240 ಮಂದಿ ಮೃತಪಟ್ಟಿದ್ದಾರೆ. 655,888 ಮಂದಿ ಗುಣಮುಖರಾಗಿದ್ದಾರೆ.

UP becomes 7th state with 1,000 plus coronavirus cases: Here are the others

ಭಾರತದಲ್ಲಿ 18,658 ಪ್ರಕರಣಗಳಿದ್ದು, ಇಂದು 119 ಹೊಸ ಪ್ರಕರಣಗಳು ದಾಖಲಾಗಿವೆ. 592 ಮಂದಿ ಮೃತರಾಗಿದ್ದಾರೆ.

ಟಾಪ್ 7 ರಾಜ್ಯಗಳು(ಏಪ್ರಿಲ್ 21ರಂತೆ)
ಮಹಾರಾಷ್ಟ್ರ -4,203 ಪ್ರಕರಣ, 223 ಸಾವು
ದೆಹಲಿ: 2003 ಪ್ರಕರಣ, 45 ಸಾವು
ಗುಜರಾತ್: 1851 ಪ್ರಕರಣ, 67 ಸಾವು
ಮಧ್ಯಪ್ರದೇಶ: 1485 ಪ್ರಕರಣ, 74 ಸಾವು
ರಾಜಸ್ಥಾನ: 1478 ಪ್ರಕರಣ, 14 ಸಾವು
ತಮಿಳುನಾಡು: 1477 ಪ್ರಕರಣ, 15 ಸಾವು
ಉತ್ತರಪ್ರದೇಶ: 1176 ಪ್ರಕರಣ, 17 ಸಾವು

English summary
Uttar Pradesh became the 7th state in the country in which 1,000 plus cases of coronavirus have been reported
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X