'ಎಸ್‌ಪಿ ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸುತ್ತದೆ' ಯೋಗಿ
ಲಕ್ನೋ ಜನವರಿ 25: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಸಮಾಜವಾದಿ ಪಕ್ಷವು ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಅಖಿಲೇಶ್ 'ಭಾರತದ ವಿರೋಧಿ ಪಾಕಿಸ್ತಾನವಲ್ಲ' ಎಂಬ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡ ಬಿಜೆಪಿ ಅಖಿಲೇಶ್ ಯಾದವ್ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದೆ.
ಎಕನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು 'ಭಾರತದ ನಿಜವಾದ ಶತ್ರು ಚೀನಾ ಪಾಕಿಸ್ತಾನ ಅಲ್ಲ. ಪಾಕಿಸ್ತಾನ ರಾಜಕೀಯ ಶತ್ರು ಎಂದಿದ್ದರು. ಬಿಜೆಪಿ ತನ್ನ ಮತಕ್ಕಾಗಿ ರಾಜಕೀಯಕ್ಕಾಗಿ ಪಾಕಿಸ್ತಾನವನ್ನು ವಿರುದ್ಧ ದಾಳಿ ಮಾಡುತ್ತಿದೆ' ಎಂದು ಹೇಳಿದ್ದರು.
ಈ ಹೇಳಿಕೆಯನ್ನು ಸದ್ಯ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಸ್ತ್ರವನ್ನಾಗಿಸಿಕೊಂಡಿದೆ. ಬಿಜೆಪಿ ನಾಯಕರು ಅಖಿಲೇಶ್ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. "ಪಾಕಿಸ್ತಾನವನ್ನು ಶತ್ರು ಎಂದು ಭಾವಿಸಿದ ಮತ್ತು ಜಿನ್ನಾ ಅವರನ್ನು ಸ್ನೇಹಿತ ಎಂದು ಪರಿಗಣಿಸುವವರ ದೂರದೃಷ್ಟಿಯ ಬಗ್ಗೆ ಏನು ಹೇಳಬಹುದು. ಅವರು ತಮ್ಮನ್ನು ಸಮಾಜವಾದಿಗಳು(ಅಖಿಲೇಶ್ ಯಾದವ್) ಎಂದು ಕರೆಯುತ್ತಾರೆ. ಆದರೆ ಸತ್ಯವೆಂದರೆ ಬಂದೂಕು ಸಂಸ್ಕೃತಿ ಅವರ ರಕ್ತನಾಳಗಳಲ್ಲಿ ಹರಿಯುತ್ತಿದೆ" ಎಂದು ಯೋಗಿ ಹೇಳಿದ್ದಾರೆ. ಆದಿತ್ಯನಾಥ್ ಅವರ ಹೆಸರನ್ನು ತೆಗೆದುಕೊಳ್ಳದೆ ಹಿಂದಿಯಲ್ಲಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, 'ಜಿನ್ನಾರನ್ನು ಪ್ರೀತಿಸುವವರು ಪಾಕಿಸ್ತಾನದ ಮೇಲಿನ ಪ್ರೀತಿಯನ್ನು ಹೇಗೆ ನಿರಾಕರಿಸುತ್ತಾರೆ (ಜೋ ಜಿನ್ನಾ ಸೇ ಕರೇ ಪ್ಯಾರ್, ವೋ ಪಾಕಿಸ್ತಾನ್ ಸೇ ಕೈಸೇ ಕರೇ ಇಂಕಾರ್). ತಮ್ಮ ಹೇಳಿಕೆಗೆ ಅಖಿಲೇಶ್ ಯಾದವ್ ಕ್ಷಮೆಯಾಚಿಸಬೇಕು. ಬಿಜೆಪಿ ಪಾಕಿಸ್ತಾನವನ್ನು ಶತ್ರು ಎಂದು ಪರಿಗಣಿಸಿದೆ. ಅಖಿಲೇಶ್ ಜಿನ್ನಾ ಜೊತೆ ಬಂದಿದ್ದಾರೆ. ಇದು ಮುಜುಗರದ ಸಂಗತಿ. ಅಖಿಲೇಶ್ ಯಾದವ್ ಹೇಳಿಕೆ ಸಮಾಧಾನದ ಪರಮಾವಧಿಯಾಗಿದೆ ಎಂದು ಅವರು ಹೇಳಿದ್ದಾರೆ.ಇಡೀ ದೇಶವು ಉತ್ತರಪ್ರದೇಶ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದ್ದರೆ, ಪಾಕಿಸ್ತಾನವು ಭಾರತದ ಶತ್ರು ಅಲ್ಲ ಎಂದು ಅಖಿಲೇಶ್ ಯಾದವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದು ಮುಜುಗರದ ಸಂಗತಿ ಎಂದು ಸಂಬಿತ್ ಪಾತ್ರಾ ವಾಗ್ದಾಳಿ ನಡೆಸಿದರು.
ಇನ್ನೂ ಅಖಿಲೇಶ್ ಅವರಿಗೆ ನೈತಿಕತೆ ಇದ್ದರೆ ಅವರು ಎಂತಹವರನ್ನು ಕಣಕ್ಕಿಳಿಸಿದ್ದಾರೆ ಎಂಬುದು ಜಗತ್ತಿಗೆ ತಿಳಿಸಲಿ, ಅವರ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿ ಎಂದರು. ಸಮೀಕ್ಷೆಗಳನ್ನು ನಿಷೇಧಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರವನ್ನು ಉಲ್ಲೇಖಿಸಿದ ಸಂಬಿತ್ ಪಾತ್ರ, ಮಾರ್ಚ್ 10 ರಂದು ಮತ ಎಣಿಕೆಯ ಸಮಯದಲ್ಲಿ ಎಸ್‌ಪಿ ಇವಿಎಂಗಳನ್ನು ದೂಷಿಸುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.
ಈ ಚುನಾವಣೆಯು ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ, ಗಂಗಾ ಎಕ್ಸ್‌ಪ್ರೆಸ್‌ವೇ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ವರ್ಸಸ್ ಮಾಫಿಯಾ ಎಕ್ಸ್‌ಪ್ರೆಸ್‌ವೇ, ಗೂಂಡಾ ಎಕ್ಸ್‌ಪ್ರೆಸ್‌ವೇ ಮತ್ತು ಸುಲಿಗೆ ಎಕ್ಸ್‌ಪ್ರೆಸ್‌ವೇ ನಡುವೆ ಎಂದು ಅವರು ಕುಟುಕಿದ್ದಾರೆ. ಪತ್ರಾ ಅವರು 73 ನೇ ಸಂಸ್ಥಾಪನಾ ದಿನದಂದು ಉತ್ತರ ಪ್ರದೇಶದ ಜನರಿಗೆ ಅಭಿನಂದನೆ ಸಲ್ಲಿಸಿದರು ಮತ್ತು 2017 ರ ನಂತರ ರಾಜ್ಯದ ಗ್ರಹಿಕೆ ಬದಲಾಗಿದೆ ಎಂದು ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications